ಪುಟ:ಬೃಹತ್ಕಥಾ ಮಂಜರಿ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓ ಹ ತ ಥಾ ಮ೦ಜ ಕಿ , ೩೪೬ ಸ್ವರ್ಣಕಾರನೇ ! ನೀನು ಆ ಆಭರಮಂ ಅಗಲೇ ಕೊಟ್ಟಿರ್ದರೆ ಈ ಅನರ್ಥಕ್ಕೆ ಕಾರಣವಾಗುತ್ತಿರಲಿಲ್ಲ, ಆದರೆ ಯತ್ನವಿಲ್ಲದೆ ಇಂತಾದುದು. ಈಗಲಾದರೂ ನೀನು ಹೋಗಿ ಭೋಜನವಂ ಮಾಡಿ, ಜಾಗ್ರತೆಯೊಳಾ ಹಸ್ತಕಡಗಂಗಳಂ ತರುವವನಾಗು ಎಂದು ಆತನಿಗೆ ಹೇಳಿಕಳುಹಿ, ತನ್ನ ಪ್ರೀತಿಗೆ ಪಾತ್ರಳಾದ ಭೋಜನಕ್ಕೆ ಬಲಾತ್ಕ ರಿಸುವ ಮಂದಯಾನೆಯ ಇಷ್ಟಾನುಸಾರವಾಗಿ ಆಕೆಯ ಮನೆಯಂ ಸಾರಿ, ಭೋಜ ನವಂ ಮಾಡುತ್ತಾ ಇದ್ದನು. ಇತ್ತಲಾ ಜೈಷಮದನ ಸುಂದರನ ಹೆಂಡತಿಯಿಂದ ಬಲಾತ್ಕರಿಸಲ್ಪಟ್ಟ ಆಕೆಯ ಮನೆಯಂ ಸೇರಿದ್ದ ಕನಿ ಮದನಸುಂದರನು ತಾನು ಮುಂದು ಮಾಡ ಬೇಕಾದ ಕಾರ್ಯಮಂ ಯೋಚಿಸಲು ತೋರದೆ, ಚಿಂತಿಸುತ್ತಾ ಕುಳಿತಿರುವಲ್ಲಿ ಬಾಗಿಲೋಳಿರ್ದ ಆತನ ಚಾರನಾದ ಕಿರಿಯ ಕುಶಲತಂತ್ರನು ಗಟ್ಟಿಯಾಗಿ ಕಿರಿಚುತ್ತಾ ಸ್ಟಾಮಾ ಯಜಮಾನರೇ ! ನಿಮಗಾದ ಗತಿಯೂ ನನ್ನನ್ನೂ ಸುತ್ತಿಕೊಂಡಿತಲ್ಲಾ, ಮುಂದು ನನಗೇನುಗತಿ, ಯಾವ ಪರಮ ಭಯಂಕರಾಕಾರಳಾದ ಅಂಗನೆಯು ಬಂದು ನನ್ನನ್ನೂ ತನ್ನ ಪತಿಯೆಂದು ಬಲಾತ್ಕರಿಸುವಳು, ಇಂತಿಹ ಕುರೂಪಿಯನ್ನು ನಾನೆಲ್ಲಿಯೂ ಕಾಣೆನು. ನನ್ನ ಹೆಸರು ಈಕೆಗೆಂತು ತಿಳಿದುದೋ ಕಾಣೆನು, ತನ್ನೊಂದಿಗೆ ಬಂದು ತನ್ನ ಮನೆಯಲ್ಲಿ ಯೋಜನಾದಿಗಳಂ ಮಾಡಿ, ರತಿಕೇಳಿ ಯೊಳು ತನ್ನೊಂದಿಗೆ ಆನಂದ ಸುಖವಂ ಹೊಂದಬೇಕೆಂದು ರಟ್ಟೆ ಹಿಡಿದು ಬಲಾತ್ಕಾರ ಪಡಿಸುತ್ತಿರುವಳು, ಇದನ್ನು ನಾನೆಂತು ಪರಿಹರಿಸಿಕೊಳ್ಳುವ ಬಗೆ ? ಇದೇನೋ ಪ್ರಮಾದವಾಗಿರವದು. ನಾನುಳಿಯುವ ಬಗೆಯಂತು, ಈ ಊರಿನ ನಡತೆಯೇ ಒಂದುಬಗೆಯಾಗಿ ಕಾಂಬುದು, ನನ್ನ ಕಾಪಾಡು ಕಾಡು ಎಂಬುದೊಂದು ಶಬ್ದಮಂ ಕೇಳಿದಾ ಮದನಸುಂದರಂ ಎಲೈ ಕಿಂಕರನೇ ! ಭಯಪಡಬೇಡ, ನಾವೀ ಊರಲ್ಲಿರುವದೇ ಅನುಚಿತ, ಬಂದು ಮಧ್ಯಾಹ್ನ ವಾಗಲಿಲ್ಲ, ಈ ಹೊತ್ತಿಗೇನೆ ಇಷ್ಟು ಬಗೆಯಾದುದು, ಹೇಗಾದರೂ ಮಾಡಿ ತಪ್ಪಿಸಿಕೊಂಡು ಇಲ್ಲಿಂದ ಹೊರಗೆ ಹೋಗೋ ಣವೆಂದು ಹೇಳಿ, ಅಲ್ಲಿ ಅಕ್ಕ ತಂಗಿಯರಾದವರೀರ್ವರೂ ಇಲ್ಲದಿರುವದಂ ಕಂಡು ಮೆಲ್ಲನೆ ಭತ್ಯನೆಡೆಗೈದಿ, ಅವನೂ ತಾನೂ ಸೇರಿ ಬಾಗಲಿನ ಕದಂಗಳಂ ಮೆಲ್ಲನೆ ತಗೆದುಕೊಂಡು ಹೊರಗೆಬಂದು, ಅಲ್ಲಿಂದ ಅತಿ ಜಾಗ್ರತೆಯಾಗಿ ಹೊರಟುಬರುತ್ತಾ ಆ ಕನಿಷ್ಠ ಕುಶಲತಂತ್ರನಂ ಕುರಿತು, ಎಲೈ ಪ್ರಿಯನೇ ! ಇನ್ನೊಂದು ನಿಮಿಷ ಮಾದರೂ ಈ ಊರೊಳು ನಿಲ್ಲಲಾಗದು, ಮುಂದೇನು ಅಪಾಯಂಗಳು ಸಂಭವಿಸು ವವೋ ಕಾಣಲಾರದು, ನೀನಿಲ್ಲಿಂದಲೀಗಲೇ ಹೋಗಿ ಹಡಗವು ನಮ್ಮ ದೇಶಕ್ಕೆ ಯಾವಕಾಲದಲ್ಲಿ ಹೊರಡುವದೋ ತಿಳಿದು ಗೊತ್ತು ಮಾಡಿಕೊಂಡು ಬಾ, ಆವರಿಗೆ ನಾನೀ ಊರುಬಾಗಲಿನ ವೈದ್ಯಶಾಲೆಯಮುಂದೆ ನಿಂತು ಕಾದಿರುವೆನು ಎಂದು ಹೇಳಿ ಕಳುಹಿ ತಾನಲ್ಲಿಂದ ಹೊರಟು ಮತ್ತೊಂದು ಮಾರ್ಗವಾಗಿ ಹೋಗುತ್ತಿದ್ದನು.