ಪುಟ:ಯಶೋಧರ ಚರಿತೆ.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೪೯

ಅಮೃತಮತಿಯೆತ್ತ ರೂಪಾ
ಧಮನಷ್ಟಾವಂಕನೆತ್ತ ಚಿತ್ರಮಪಾತ್ರೇ
ರಮತೇ ನಾರೀ ಎಂಬುದು
ಸಮನಿಸಿದುದು ಬೆಂದ ಬಿದಿಗೆ ಕಣ್ಣಿಲ್ಲಕ್ಕುಂ೩೪


ಎನುತುಂ ಬಂದು ವಿಷಣ್ಣಾ
ನನೆಯಂ ಮಾರ್ಗಾವಲಗ್ನ ನೇತ್ರೆಯನುಚ್ಛ್ವಾ
ಸ ನಿತಪ್ತಾಧರರುಚಿಯಂ
ಮನುಜೇಂದ್ರಾಂಗನೆಯನೆಯ್ದಿ ಕಂಡಿಂತೆಂದಳ್೨೫


ಕಂತುವಿನ ಕಯ್ಯ ಕೂರಸಿ
ಯಂತಿರೆ ಗರಗರಿಕೆವಡೆದು ಪೊಳೆವಸಿಯಳೆ ನೀ
ನಿಂತಪ್ಪ ಕಾಮದೇವಂ
ಗಂತೆಂತಾಯ್ದರಸಿ ಕೂರ್ತೆಯೆಂದಾನರಿಯೆಂ೨೬


ಹಿಂತಿರುಗಿದಳು. ೩೪. “ಅಯ್ಯೋ ದೇವರೇ ! ಅಮೃತಮತಿಯೆಲ್ಲಿ,
ರೂಪಾಧಮನಾದ ಅಷ್ಟಾವಂಕನೆಲ್ಲಿ? 'ಚಿತ್ರಂ ! ಅಪಾತ್ರೇ ರಮತೇ ನಾರೀ'
[ಆಶ್ಚರ್ಯ ! ಹೆಂಗಸು ಅಯೋಗ್ಯನೊಡನೆ ರಮಿಸುತ್ತಾಳೆ!] ಎಂಬ ಮಾತು
ಸಂಭವಿಸಿತಲ್ಲ ! ಆ ಸುಟ್ಟ ವಿಧಿಗೆ ಕಣ್ಣೇ ಇಲ್ಲವೋ?” ೩೫. ಎಂದೆಲ್ಲ ಯೋಚನೆ
ಅವಳ ತಲೆಯಲ್ಲಿ ಸುಳಿಯಿತು. ಇದನ್ನೇ ಹೊತ್ತು ಅವಳು ಮರಳಿದಳು. ಇಲ್ಲಿ
ನೋಡುವುದೇನು? ಆ ರಾಜೇಂದ್ರನ ಪತ್ನಿ ಅಮೃತಮತಿ ಮುಖ ಬಾಡಿಸಿಕೊಂಡೇ
ಇದ್ದಾಳೆ. ತನ್ನ ಗೆಳತಿ ಯಾವಾಗ ಮರಳಿಯಾಳು ಎಂದು ಅವಳು ಬರುವ
ದಾರಿಯಲ್ಲೇ ಕಣ್ಣಿಟ್ಟುಕೊಂಡಿದ್ದಾಳೆ. ಬಿಡುವ ಬಿಸಿಯುಸಿರು ತಾಗಿ ತುಟಿಯ
ಸಹಜವಾದ ಕೆಂಬಣ್ಣವೆಲ್ಲ ಕಳೆದುಹೋಗಿದೆ. ಹೀಗೆ ಉತ್ಕಂಠಿತೆಯಾಗಿದ್ದ
ಒಡತಿಯನ್ನು ಸಮೀಪಿಸಿ ಅವಳು ಹೇಳಿದಳು : ೩೬. "ಕಾಮನ ಕೈಯ
ಖಡ್ಗದಂತೆ ಬಹಳ ಚೆಲುವನ್ನು ಪಡೆದು ಶೋಭಿಸುವ ತನುಗಾತ್ರಿ ನೀನು.
ಇಂತಹ ನೀನು, ಈ ಬಗೆಯ ಕಾಮದೇವನನ್ನು ಹೇಗೆ ಶೋಧನೆ ಮಾಡಿದೆ!