ಪುಟ:ಯಶೋಧರ ಚರಿತೆ.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೮೧

ಅದರಡಗು ಮುಗ್ಗಿ ಪುಳಿ ಪ-
ತ್ರಿದೊಡಾರಲ್‌ ಪರಪೆ ಕಾಗೆಯುಂ ನಾಯುಂ ಮು-
ಟ್ವಿದೊಡದನೆ ಶುದ್ಧಮಂ ಮಾ-
ಳ್ಪುದನಿಂತೆಂದೋದಿದರ್‌ ಪುರೋಹಿತರೆಲ್ಲಂ೫೮


ಶುಚಿರಜರಜಸಿ ಭವೇನ್ಮಾಸ್‌
ಪಚನೇ ಶ್ವಸ್ಪೃಷ್ಟದೋಷಮೆಂಬುದು ವೇದ
ಪ್ರಚುರಮನೆ ಕೇಳ್ದು ನೃಪನಾ
ವಚನಮುಮಂ ನಂಬಿ ನೆರೆದ ಪೊಲೆಯರ ಪೋಂತಂ೫೯


ತರಿಸಿ ಪರಿಶುದ್ದಿ ಗೆಯ್ದದ-
ನಿರಿಸಿದೊಡಾ ಪಾರ್ವರುಂಡು ತಣಿದೆರ್ದುಯಶೋ-
ಧರ ಚಂದ್ರಮತಿಗಳೊಸೆದು-
ಣ್ಬರೆ ಸಗ್ಗದ ಸುಖಮನೆಂದೊಡೋಹೋ ಎಂದರ್‌ ೬೦



ಮಾರಿಗೆ ಬಲಿಕೊಟ್ಟನು. ಅದನ್ನೆ ಮಹಾಲಯಕ್ಕಾಗಿ ಕೊಟ್ಟನು. ೫೮. ಆದರೆ
ಅದರ ಮಾಂಸವು ಮುಗ್ಗಿ ಅದರಲ್ಲಿ ಹುಳು ಹುಟ್ಟಿಕೊಂಡಿತು. ಆದುದರಿಂದ
ಅದನ್ನು ಒಣಗಿಸುವುದಕ್ಕಾಗಿ ಬಿಸಿಲಲ್ಲಿ ಹರಡಲಾಯಿತು. ನಾಯಿ ಕಾಗೆಗಳು
ಬಂದು ಆ ಮಾಂಸವನ್ನು ಮುಟ್ಟಿ ಶುದ್ಧಿ ಕೆಡಿಸಿದುವು. ಶುದ್ಧೀಕರಣ ವಿಧಾನವನ್ನು
ಪುರೋಹಿತರು ತಿಳಿಸಿದರು : ೫೯. “ನಾಯಿ ಮುಟ್ಟಿದ ದೋಷವುಂಟಾದಲ್ಲಿ
ಮಾಂಸ ಪಚನ ಮಾಡುವಾಗ ಆಡಿನ ರಜಸ್ಸನ್ನು ಹಾಕಿದರೆ ಅದು ಶುದ್ಧವಾಗುತ್ತದೆ,
ಎಂದು ವೇದದಲ್ಲಿ ಸ್ಪಷ್ಟವಾಗಿ ಇದೆ.” ಈ ಮಾತನ್ನು ಕೇಳಿದ ರಾಜನು ಇದನ್ನು
ನಂಬಿದನು. ಆದುದರಿಂದ ಚೆನ್ನಾಗಿ ಬೆಳೆದ ಹೊಲೆಯರ ಹೋತವನ್ನೇ ತರಿಸಿದನು.
೬೦. ಅದರಿಂದ ಮಾಂಸವನ್ನು ಶುದ್ಧೀಕರಿಸಿದರು.(ಅದನ್ನು ಕೊಂದರು).
ಶುದ್ಧೀಕರಿಸಿದ ಮಾಂಸವನ್ನುಂಡು ಬ್ರಾಹ್ಮಣರು ತೃಪ್ತರಾದರು. ಅವರು ಎದ್ದು
ಹೊರಟು ಹೋಗುವಾಗ, “ಯಶೋಧರನೂ ಚಂದ್ರಮತಿಯೂ ಸ್ಪರ್ಗ
ಸುಖವನ್ನು ಸಂತೋಷದಿಂದ ಸವಿಯುತ್ತಿರುವರೇ?” ಎಂದು ಯಶೋಮತಿ
ಪ್ರಶ್ನಿಸಿದನು. ಅವರು “ಓಹೋ! ಓಹೋ | ಎಂದು ಉದ್ಘೋಷಿಸಿದರು.