ಪುಟ:ಬೃಹತ್ಕಥಾ ಮಂಜರಿ.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೩೬) - ಬ್ರ ಹತ್ಯೆ ಥಾ ನ ೦ 8 ರಿ. ೨೮೧ ' ಅಂದಿನಿಂದಾ ವೇಶೈಯು ರಾಜಕುಮಾರನ ಬಾಯಿಯಿಂದ ರತ್ನ೦ಗಳು ಬೀಳದೆ ಹೋದುದಂ ಕಂಡವಳಾಗಿ ಆತನ ಮೇಲೆ ಉದಾಸೀನಮಂ ತೋರುತ್ತಾ ಬಂದಳು. ರಾತ್ರಿಕಾಲಂಗಳೊಳು ಆತನಂ ಬಿಟ್ಟು ಬೇರೆ ಮಲಗಲಾರಂಭಿಸಿದಳು, ಈತನನ್ನು ಸ್ನೇ ಹಿತನಂತೆ ಭಾವಿಸಿ ಕೇಳಿದಾಗ ದ್ರವ್ಯಮಂ ಕೊಡುತ್ತಿದ್ದವರು ಲಕ್ಷ ಮಾಡದೆ ಹಣ ಮಂ ಕೇಳಿದರೆ ಕಿವಿಯ ಮೇಲೆ ಹಾಕಿಕೊಳ್ಳದೆ ಬಿಡುತ್ತ ಬಂದರು. ತನ್ನ ಬಾಯಿಂದ ರತ್ನಂಗಳು ಬೀಳುವದು ಬಿಟ್ಟು ಹೋದುದು ಇದರಿಂದಲೇ ಹೀಗೆ ಅನಾದರಣೆಗೆ ಗುರಿ ಯಾದನು, ವೇಶ್ಯಾಸ್ತ್ರೀಯರು ದ್ರವ್ಯ ಹೀನನಾದ ಪುರುಷನನ್ನು ಲಕ್ಷ್ಯ ಮಾಡಲಾರರು. ಅರಸನು ಅಸಮರ್ಥನೆಂದು ತೋರಿದರೆ ಪ್ರಜೆಗಳು ಅವನಂ ಲಕ್ಷ್ಯ ಮಾಡರು. ಕಾ ಡುಕಿಚ್ಚಿನಿಂದ ಅರಣ್ಯವು ಸುಟ್ಟು ಹೋದರೆ ಅಲ್ಲಿದ್ದ ಮೃಗಗಳೆಲ್ಲಾ ಮತ್ತೊಂದು ಅರ ಇಮಂ ಸೇರುತ್ತವೆ. ಜಾರಪುರುಷರು ಜಾರಿಣಿಯಂ ಹೊಂದಿ ಅವರನ್ನು ಪ್ರಾಯ ಮಿರುವವರಿಗೂ, ಇಟ್ಟುಕೊಂಡಿರ್ದು ಅನಂತರ ದೂರಮಾಡುವರು. ಈ ವಾರಾಂಗ ನೆಯರಾದರೊ ದ್ರವ್ಯವಂತನು, ಸಿಕ್ಕಿದರೆ ಮೆಲ್ಲನೆ ಕಪಟೋಪಾಯಗಳಂ ನಟಿಸುತ್ತಾ ಅವನ ಧನವನ್ನೂ ಶಕ್ತಿಯನ್ನೂ ಸೆಳೆದುಕೊಂಡು ಅವರಲ್ಲಿ ಋಣ ವ್ರಣ ರೋಗವೆಂಬ ಶಕ್ತಿಯಂ ಅವರಿಗೆ ಕೊಟ್ಟು ದೂರಮಾಡುವರು ಈ ವೇಶ್ಯಾಸ್ತ್ರೀಯರಲ್ಲಿ ಆಕರ್ಷಣಾ ಶಕ್ತಿಯೊಂದು ಮಾತ್ರವಿಶೇಷ ಪ್ರಬಲವಾಗಿರುವದು, ಮೋಸಗೊಳಿಸುವದೆಂಬುವ ದಾದರೋ ಅವರಿಗೆ ಸಹಜ ಗುಣವು. ಈ ಎರಡು ಗುಣಗಳು ಹೊರತು ಮಿಕ್ಕ ಗುಣ ಗಳೆಲ್ಲವೂ ಕುಲಸ್ತ್ರೀಯರಲ್ಲಿಯೂ, ಇರುವವು. ಲೋಕದ ಜನರೆಲ್ಲರೂ, ನನ್ನಂಥಾ ವನು ಈ ನೀಚರಾದ ವಾರನಾರಿಯರಂ ಮೋಹಿಸಿ ಈ ಯವಸ್ಥೆ ಯಂ ಹೊಂದಿದನಂದ ರಿತು ಇವರ ವಶವರ್ತಿಗಳಾಗದೆ ಇರುವರೇ ? ಈ ನೀಚರು ಕಾಮಾಂಧರಾದವರನ್ನು, ತಮ್ಮ ಬಲೆಯೊಳು ಸಿಲುಕಿಸಿಕೊಂಡು ಕಡೆಯೊಳು ನನ್ನಂತೆಯೇ ಮಾಡುವದು ನಿಶ್ಚ ಯವು, ಇತಃಪರಮಾಜನರ ಸಹವಾಸವನ್ನ ಸ್ಮರಿಸಬಾರದೆಂದು ಬೇಸರನನ್ನಾ ಂತವ ನಾಗಿ ಅಲ್ಲಿರದ ಹೊರಟು ದೇಶದೇಶಗಳಂ ಸುತ್ತುತ ಕಡೆಯೊಳು ಹಿಮವತ್ಪರ್ವತದ ಕಾಂತಾರಮಂ ಪ್ರವೇಶಿಸಿದಂ, ಆ ಘೋರಾರಣ್ಯದೊಳು ಕಂದಮೂಲ ಫಲಗಳಂ ಆಹಾರವಂ ಮಾಡುತ್ತಾ, ಋಷ್ಯಾಶ್ರಮಂಗಳೊಳು ಸಂಚರಿಸುತ್ತಾ ಇರಲು ಆ ಪಕ್ಷ ಶದ ಕಿಬ್ಬಟ್ಟೆಯೊಳೊಂದು ಗುಹೆಯಲ್ಲಿ ವಾಲಖಿಲ್ಯನೆಂಬೊರ ಮುನಿವರಂ ತನ್ನ ಶಿಷ್ಯರ್ವೆರಸಿ ವಾಸಮಾಡುತ್ತಿರ್ದ೦, ಆ ಮುನೀಂದ್ರಂ ಶಿಷ್ಯರಿಗೆ ಜ್ಞಾನವಿದ್ಯಾಬೋ ಧೆಯಂ ಮಾಡುತ್ತಿರುವ ಸಮಯದೊಳಿ ರಾಜಕುಮಾರನಾದ ಚಿತ್ರವನ್ನ೦ ಅಮುನೀಂ ದ್ರರ ಸನ್ನಿಧಿಯಂ ಸಾರಿ ಸಾಷ್ಟಾಂಗ ದಂಡಪ್ರಣಾಮವಂ ಗೈದು ಮುಕುಳಿತ ಕರಕ ಮಲನಾಗಿ ನಿಂತುಕೊಂಡು ಎಲೈ ಮುನೀಂದ್ರರೇ? ನನ್ನ ಮನೋರಥಸಿದ್ದಿಯಿಂದ ಧನನಂ ಮಾಡಬೇಕೆಂದು ವಿನಯಯುತನಾಗಿ ಬೇಡಿಕೊಳ್ಳುತ್ತಿರುವುದಂಕಂಡು ಕನಿಕರಮಾಂತು