ಪುಟ:ಬೃಹತ್ಕಥಾ ಮಂಜರಿ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೮ ಬ ಹ ಕೈ ಥಾ ನ ೦ 8 ರಿ . ಒಡೋಲಗವಾಗಿ ರಾಜಮಾರ್ಗ ದೊಳು ಬರುತ್ತಾ, ರಾಜಾಲಯಮಂ ಹೊಕ್ಕು, ಷಡ್ರಸಾನ್ನ ಮಂ ಸಮಸ್ತ ಬಂಧು ಸಂವೃತನಾಗಿ ಭುಂಜಿಸಿ ಸುಖಸಲ್ಲಾಪಾದಿ ಗಳಂ ಮಾಡುತ್ತಿದ್ದು, ಅನಂತರ ಅವರವರ ಅಂತಃಪುರಂಗಳಂ ಸಾರಿ, ಅವರವರ ಕಾ೦ತೆಯರ ಸೇರಿ, ಸುಖವಾಗಿ ಭೋಗಂಗಳನ್ನನುಭವಿಸುತ್ತಾ ನಿದ್ರಾಂಗನಾ ವಶರಾದರು, ಮರುದಿನದುದಯದೊಳೆಲ್ಲರೂ ತಮ್ಮ ತಮ್ಮ ಕಾಲೋಚಿತ ಕೃತ್ಯ೦ಗಳಂ ನೆರವೇರಿಸಿಕೊಂಡು ಎಲ್ಲರೂ ಸೇರಿ ಸಭೆಯಾಗಿ ಕುಳಿತು ತಮ್ಮ ತಮ್ಮ ಪೂರ್ವೋ: ತ್ವರ ಸಮಾಚಾರಗಳನ್ನು ಹೇಳುತ್ತಾ ಕೇಳುತ್ತಾ ಅಚ್ಚರಿಗೊಳ್ಳುತ್ತಿರುವ ಕಾಲ ದೊಳು ಶೀಲವತಿಯು ತನ್ನ ಮೈದುನನಾದ ಉದಯಭಾನುರಾಯನಂ ಕುರಿತು ಎಲೈ ಭ್ರಾತೃವತ್ಸಲನೆ ! ನಾವೆಲ್ಲರೂ ದೈವಯೋಗದಿಂ ದೀಗ ಒಂದಾಗಿ ಸೇರಿದೆವು, ನಿಮ್ಮ ಮಾವಂದಿರಿ ಸುವ ಯಂ ತಿಳುಹಿ ಕರೆಕಳುಹಿಸಿರಿ, ಬಂದು ತಮ್ಮ ಮಗಳನ್ನೂ , ಅಳಿಯನನ್ನೂ, ದೌಹಿತ್ರನನ್ನೂ ನೋಡಿ ಸಂತೋಷಿಸಿ ಹರಕೆಯ ೩ ತ್ತು ಪೋಗಲಿ, ಎನಲಾ ಉದಯಭಾನುರಾಯನು ಎಲ್ಲಾ ತಾಯೇ ! ಮೊದಲೇ ಅವರು ನನ್ನ ಪ್ರಾಣಾಪಹಾರಕ್ಯುಕ್ತರಾಗಿದ್ದರು. ಅಂಥಾವರ ಮುಖವನ್ನಾ ದರೂ ನೋಡಬಹುದೆ, ಎಂದು ಪ್ರತ್ಯುತ್ತರಮಂ ಕೊಡಲು, ವಿನ್ಸೆ ನೀವು ಅರಿಯ ದವರಂತೆ ನಡಿಯುವಿರಿ, ನೀವು ಮೊನಕರವಾಗಿ ಅಂತಃಪುರವ ಸಾರಿ, ಮಾಡ ಬಾರದ ಕಾರ್ಯವಂ ಮಾಡಿರಿ, ನೀವು ಇ೦ಥಾವರೆಂಬವರರಿಯರು, ದುಷ್ಕಾರ ಮಂ ಮಾಡಿದವರು ಕಂಡು ಹಿಡಿದು ಶಿಕ್ಷಿಸಬೇ ಕಾದು ರಾಜಧವಳಿ ವೇ ಸರಿ, ಅನಂತರ ನಿಮ್ಮ ಮಡಿವಾತಿಶಯ ಮಂ ಕ೦ಡು ಯಾರೋ ಮಹನೀಯರಾಗಿರುವ ರೆಂದು, ಅದಂ ತಿಳಿಯಲೋಸುಗ ವಿಧೇಯರಾಗಿ ನಿಮ್ಮ ಬೇಡಿದರು, ಅ೦ಥವರು ತಿರಸ್ಕರಿಸಬಹುದೇ ? ಹಾಗೆ ಯೋಚಿಸಬಾರದು ಎಂದು ತಿಳುಕಿ, ತನ್ನ ಅತ್ತೆ ಮಾವಂದರಿಗೂ, ತನ್ನ ಪತಿಗೆ ಹೇಳಿ, ಅವರಿಗೆ ಪತ್ರಮಂಬರೆಯಿಸಿ ದೂತರಂ ಕಳು ಹಿಸಲು, ಈ ವಾರ್ತೆಯನ್ನು ಕೇಳುತಾ ಕರಾಳರಾಯಂ ಪರಮಾನಂದ ಭರಿತ ನಾಗಿ, ಸಮಸ್ಯೆ ಶಸ್ತ್ರವನ್ನು ಜಾಲಗಳೆಂಕೊಂಡು, ಸಕಲ ಪರಿವಾರಾ ವೃತರಾಗಿ ಪತ್ನಿ ಯೋಜನೆ ಹೊರಟು ತನ್ನ ಮಗಳ ಮುಖ ಕಮಲವೆಂ ಎ೦ದಿಗೆ ನೋಡುವೆನೇ ಎಂದು ತನ್ನ ಕರುವನ್ನಗಲಿದ ಎಳ ಗ೦ದಿಯಾದ ಗೋವಿನಂತೆ ಕಳವಳಿಸುತ್ತಾ ಬಂದು ಕರವೀರಪರಮಂ ಸಾರಿ, ದೇವಸೇನರಾಯನ೧ಕಂಡು, ಆತನಿಂದ ಸತ್ಯ ತನಾಗಿ ಅಲ್ಲಿಂಬುದು, ತನ್ನ ಮೋಹದ ಕುವರಿಯ ಅ೦ತಪುರವೆ೦ ಸಾರಲು, ತನ್ನ ತಂದೆತಾಯಿಗಳು ಬಂದರೆಂದು ದಿಗ್ಗನೆದ್ದು ಬಂದು, ತನ್ನ ಮುದ್ದು ಕುವರನಂ ತಂದೆಯ ಕೈಗೆ ಕೊಟ್ಟು ಆತನ ಕಾಲುಗಳಮೇಲೆ ತನ್ನ ಮಸ್ತಕ ಮಂ ಚಾಚಿ, ಅನಂತ ರ ತಾಯಿಗೆರಗಿ ನಿಂತುಕೊಂಡ ಮಗಳಮುಖಕಮಲಮಂ ನೋಡಿ, ರಾಕಚಂದ್ರನೇ