ಪುಟ:ಬೃಹತ್ಕಥಾ ಮಂಜರಿ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ್ರ ಹ ಥಾ ನ ೦ ರಿ . S೪೫ ಇದೇನು ಮತ್ತಷ್ಟು ಚಿತ್ರವಾದುದೇ ? ಎಲೈ ಕಿಂಕರನೇ ನಾನು ಮೊದಲೇ ಹೇಳ ಅಲ್ಲವೇ ಈ ಊರೊಳಿದ್ದಷ್ಟು ಹೊತ್ತೂ ಪರಂಪರೆಯಾಗಿ ತೊಂದರೆಗಳು ಬರುತ್ತಿರು ವವಲ್ಲಾ, ನನ್ನ ಮಾತುಗಳು ಹಾಸ್ಯಕ್ಕೆ ಗುರಿಮಾಡಿದಿಯೇ ಈಗಿದಕೇಂ ಹೇಳುವೆ ಎಂದು ನೃತ್ಯನೊಳು ಮಾತಾಡುತ್ತಾ ಇರಲು, ಆ ನೀತಿಮರುತ್ತನು ಏನ್ನ ಮಿತ್ರನೆ! ಈಪರಿ ಹಾಸ್ಟೋಕ್ತಿಗಳಂ ಬಿಡು ಎಲ್ಲಿ ಆಭರಣಮಂ ಕೊಡು ಎನಲು, ಆಯಾ ನಿಮ್ಮ ಮುಖವನ್ನು ನಾನು ಇದೇ ಪ್ರಥಮತಃ ನೋಡಿದ್ದು, ನಾನೀದೇಶದವನೇ ಅಲ್ಲ, ನಿಮ್ಮಿಂದ ಯಾವ ಒಡವೆಯಂ ನಾಂ ಹೊಂದುವದಕ್ಕೆ ಕಾರಣವೂ ಇಲ್ಲವೂ ಅಪರಿಚಯಸ್ಥನಾದ ನನ್ನ ಕೈಯಲ್ಲಿ ಕೊಡುವದಕ್ಕೆ ಕಾರಣವೂ ಇಲ್ಲವೆ ಎಂದು ಪ್ರತ್ಯುತ್ತರಮಂ ಕೊಡಲು ಇದೇ ದೊಡ್ಡ ಮನುಷ್ಯರೇ ! ಈದಿನ ಮದ್ಯಾಹ್ನ ದೊಳು ನಾವೀರ್ವರೂ ಕುಳಿತು ಭೋಜನಮಂ ಮಾಡುತ್ತಿರಲು, ನನ್ನ ಕಂತದೊ ಳಿದ್ದ ಹಾರಮಂ ನೋಡಿ ಮೋಹಿಸಿ ಅದಕ್ಕೆ ಬದಲಾಗಿ ರತ್ನ ಕಂಕಣಂಗಳಂ ತಂದು ಈ ಕ್ಷಣವೇ ಕೊಡುವಂತೆ ಗೊತ್ತು ಮಾಡಿಕೊಂಡು ನನ್ನ ಪತ್ನಿ ಯಂ ಸಮಾಧಾನ ಗೊಳಿಸಿ, ಹಾರಮಂ ತೆಗೆದುಕೊಂಡು ಬರಲಿಲ್ಲವೇ ? ಆ ಹಾರವೇನೋ ತಮ್ಮ ಕೊರಳಿದ್ದವು, ನನಗೆ ಕೊಡುತ್ತೇನೆಂದು ಹೇಳಿದ್ದ ಕೈ ಕಡಗಗಳು ಮಾತ್ರ ಕೈಗ ಲೊಳು ಧರಿಸಿಕೊಂಡಿರುವಿರಿ, ನೀವು ಪರಿಹಾಸ್ಯಮಂ ನನ್ನೊಳೆಂದಿಗೂ ಆಡಿದವರಲ್ಲ ವಲ್ಲಾ ಇದೇನಿಂತು ಈದಿನದೊಳಾಡುವಿರಿ ಇಲ್ಲಿಗೆ ಸಾಕು, ಅಸಮಾಧಾನಳಾಗಿರುವ ನನ್ನ ಪತ್ನಿಯನ್ನು ಸಮಾಧಾನಗೊಳಿಸೋಣ, ಹಸ್ತಕಡಗಗಳಂ ತೆಗೆದುಕೊಡಿರೆಂದು ಕೈಗಳಿಗಿಟ್ಟು ಕೊಂಡಿರ್ದ ಆ ಕಂಕಣಗಳಮೇಲೆ ಕೈ ಹಾಕಲು, ಕನಿಷ್ಠ ಮದನಸುಂದ ರನು ಎನ್ನೆ ದೊಡ್ಡ ಮನುಷ್ಯರೇ ! ಮೆಲ್ಲನೆ ಇಲ್ಲದ ಸಂಬಂಧಮಂ ಕಲ್ಪಿಸಿಕೊಂಡು ಸಮಿಾಕ್ಕೆ ಬಂದು ಮೆಲ್ಲನೆ ಕೈಯೊಳಿರುವ ಆಭರಣಮಂ ಸೆಳೆಯಲುದ್ಯೋಗಿಸುವಿರಿ, ಈ ಪ್ರರವಾಸಿಗಳಾದವರ ನಡತೆ ಹೀಗೇನೋ. ನಾಕು ಮುಟ್ಟದಿರಿ. ಎಂದು ಮುಖಮಂ ತಿರುಗಿಸಿಕೊಂಡು ಕೋಪಮಂ ಸೂಚಿಸುತ್ತಾ ಮಾತಾಡುತ್ತಾ ಬರಲು, ಏನ್ನ ದೊಡ್ಡ ಮನುಷ್ಯನೇ ! ನಿನ್ನ ನೀವರಿಗೂ ಪರಮಾಪ್ತನೆಂತಲೂ, ಘನವಾದವನಂತಲ ನಂಬಿದ್ದೆನು. ನಿನ್ನೊಳಿಂಥಾ ಅಲ್ಪ ಗುಣಂಗಳಿರುವದಂ ನಾನರಿಯಲಿಲ್ಲ, ಒಳ್ಳೆಯದು ನನ್ನ ರತ್ನ ಹಾರಮಂ ಅಪಹರಿಸಿ ನೀನೇ ದೊಡ್ಡವನಾಗೆಂದುಸುರಲು, ಈ ಮೂರ್ಖ! ಪರಸತ್ಯಂ ಅಪಹರಿಸಲೆಣಿಸುವಿಯಾ ! ದೂರ ಹೋಗೆಂದುಸುರಿ ಗದರುತ್ತಾ ಮುಂದುಹೋಗಲು, ಆ ನೀತಿಮರುತನು ಚಿಂತಿಸುತ್ತಾ ಹಿಂತಿರುಗಿ ಮನೆಮುಂಗಡೆ ಯೊಳು ನಿಂತು ನೋಡುತ್ತಾ ನಿಂತಿರ್ದ ತನ್ನ ಕಾಂತೆಯಂ ಕುರಿತು ಎಲೈ ಪ್ರಾಣ ಕಾಂತೆಯೇ ! ಈತನಂ ಬಹುಕಾಲವಾಗಿ ಸ್ನೇಹಿಸಿದ್ದಕ್ಕೆ ಇದೇ ಕಡೆಯೊಳಾದ ಫಲವು. ನೋಡಿದೆಯಾ ಎನಲು ಆಕೆಯು ಎಲೈ ಪ್ರಾಣನಾಥನೇ ! ಈತನಂ ನಾವು ಬಹುಕಾಲಮಾಗಿ ನೋಡುತ್ತಿರುವೆವು, ದೊಡ್ಡ ಮನುಷ್ಯನು, ಮಹಾ ಸತ್ಯಸಂಧನ: