ಪುಟ:ಬೃಹತ್ಕಥಾ ಮಂಜರಿ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ಥಾ ಮ೦ ಜರಿ ೫೬ ರದ ನೆಳಲಂಸಾರಿ, ಕುದುರೆಯಿಂದಾಕೆಯನಳುಹಿಸಿ, ತಾನೂ ವಿಶ್ರಾಂತಿಗೋಸ್ಕರ ಆ ನೆಳಲೊಳು ಕುಣಿತುಕೊಂಡನು. ಇತ್ತಲಾ ಕೌಶಾಂಬೀ ಪಟ್ಟಣದೊಳು ಕರಾಳರಾಯನಾಚ್ಛಾನುಸಾರವಾಗಿ ಶೂಲ ಕೈ ಹಾಕಲು ಕರೆದುಕೊಂಡುಹೋಗುತ್ತಿದ್ದ ತನ್ನ ಕಾಂತನ ಗತಿ ಯ ನಾಗುವ ಎಂದು ಚಂದ್ರಶಾಲೆಯಂ ಹತ್ತಿನೊಡುತ್ತಿದ್ದ ಸುದರ್ಶನೆಯು ತನ್ನ ಪತಿಯನ್ನ ಏನುಮಾಡುವರೂ ನಿಜವಾಗಿ ಶಿಕ್ಷೆಗೆ ಗುರಿಯಾಗುವನೇ? ಒಂದುವೇಳೆ ಹಾಗಾದ ರೆ ನಾನೀಯುಪ್ಪರಿಗೆಯಿಂದ ಬಿದ್ದು ಪ್ರಾಣ ತ್ಯಾಗ ಮಾಡುವದೇ ನಿಜವೆಂದು ಸಂ ತಾಪಯುಕ್ತಳಾಗಿ ಹಂಬಲಿಸುತ್ತಿರಲು, ಯಮದೂತರಂತೆ ಸಂಗಡ ಬರುತ್ತಿದ್ದ ರಾಜಭಟರೊಂದಿಗೆ ಸೇರಿ ಬರುತ್ತಿದ್ದ ಉದಯಭಾನುರಾಯನು ನಾನು ಇಲ್ಲಿಗೆ ಬರು ವಾಗ್ಗೆ ಸ್ವಲ್ಪ ಧನವಂತಂದಿದ್ದೆನು ಅದನ್ನು ನಿಮಗಾದರೂ ಕೊಡುವೆನು, ಯಾಕೆ ವ್ಯರ್ಥವಾಗಿ ಇಟ್ಟೆಡೆಯೊಳೇ ಹಾಳಾಗಬೇಕು, ಎಂದು ಅವರೊಳು ಹೇಳುತ್ತಾ ಇ ದೂ ಈ ಆಲದಮರದೊಳು ಇಟ್ಟಿರುವೆನು, ಈ ಮಾರ್ಗದೊಳು ಬನ್ನಿ ಎಂದು ಹೇಳ ಲು, ಆಭಟರು ದ್ರವ್ಯದಾಸೆಯೊಳು ಅದರಂತೆ ಒಪ್ಪಿ ಈ ರಾಯನೊಡನೆ ಬರಲು ವದ ವೃಕ್ಷದಬಳಿಗೈದು, ಭಟರ೦ ಕೆಳಗೆ ನಿಲ್ಲಿಸಿ ಉದಯಭಾನುರಾಯನು ಮರವನ್ನೇರಿ ಕೀಲು ದುರೆಯನ್ನು ತೆಗೆದು ಅದರ ಹೊಟ್ಟೆಯೊಳಿರಿಸಿದ೯ ವರಹಗಳೊಳೊಂದು ಬಗು ಸೆಯಂತೆಗದು ಕೆಳಗೆ ಚಲ್ಲಲು, ಈ ರಾಜಭವರದನಾರಿಸಿಕೊಳ್ಳುವದರೊಳಗೆ ಕಿಲ್ಕು ದುರೆಯಮೇಲೆ ಕುಳಿತು, ಪುನಹ ಕೆಲವು ವರಹಗಳಂ ತೆಗೆದು ನೆಲದೊಳೆರಚಿ ಕುದು ರೆಯ ಕಿವಿಹಿಂಡಲು ಆ ವಾಜಿಯು ಆಕಾಶವಾರ್ಗಕ್ಕೆ ಹಾರಿಹೋಗುತ್ತಿರೆ, ಎಲೈ ರಾ ಜಭಟರೇ ಈವಾರ್ತೆಯಂ ನಿಮ್ಮ ರಾಯರಿಗೆ ಅರುಹಿರಿ, ಎಂದು ಫಯಾಗಿ ಕೂಗಿದೇ ಕುತ್ತಾ ಈಸುದರ್ಶನೆಯಸೌಧಮಾರ್ಗವಾಗಿಬರುತ್ತಾ ಮೇಲೆನಿಂತು, ತನ್ನ ಪತಿಯೇ ನಾದನೋ ಎಂದು ಹಂಬಲಿಸುತ್ತಿರುವ ರಾಜನಂದನೆಯಂ ಕಂಡು ನಿನ್ನ ಸಹವಾಸವೇ ಸಾಕು ನಾನು ಹೋಗಿಬರುವೆನೆಂದು ಕೂಗಿಹೇಳುವ ತನ್ನ ಪತಿಯಂ ಕಂಡು ಹರುಷ ಸ್ಕಾಂತಳಾಗಿ, ಎಲೈ ಪ್ರಾಣಕಾಂತನೇ ! ನೀನಾಮಾತ ನನ್ನೊಡನಾಡಲಾಗದು ನಿ ಗತಿ ಏನಾಯಿತೋ ಎಂದು ಕಳವಳ ಪಡುತ್ತ ಈ ಪ್ರಾಸಾದಾಗ್ರೆಮಾಂಸಾರಿ ಇಲ್ಲಿಂದ ಕೆಳಗೆಬಿದ್ದು ಪ್ರಾಣತ್ಯಾಗಮಂ ಮಾಡಕೊಳ್ಳಬೇಕೆಂದಿರುವಲ್ಲಿಯೇ ಸುಕೇಮಿಯಾದ ನಿನ್ನ ಮುಖಚಂದ್ರನಂನೋಡಿದೆನು, ಇಲ್ಲಿ ನಾನೊಂದು ನಿಮಿಷವಾದರೂ ನಿನ್ನ ನಗ ಲಿರಲಾರೆನು ನಿನ್ನ ಜೊತೆಯೊಳು ಹೀಗೆಯೇ ಹೊರಟುಬುವನು, ಎಂದತಿವಿನಯ ಳಾಗಿ ಪ್ರಾರ್ಥಿಸುತ್ತಿರುವ ಗರ್ಭವತಿಯಾದ ಕಾ೦ತಾಮಣಿಯೊಳು ಕನಿಕರಗೊಂಡು ಕೀಲುದುರೆಯಂ ಆ ಪ್ರಾಸಾದಾಗಕ್ಕಿಳುಹಿ, ಆಕೆಯನ್ನೆತ್ತಿ ತನ್ನ ಮುಂಭಾಗದೊಳು ಆ ಕೀುದುರೆಯಮೇಲೆ ಕುಳ್ಳಿರಿಸಿಕೊಂಡು ಯಥಾಪ್ರಕಾರವಾಗಿ ಕುದುರೆಯಂ ಕೀ ಲುತಿರುಗಿಸಲು ಆಕಾಶಮಾರ್ಗವಂ ಹಾದುಬರುತ್ತಲಿರ್ದುದು.