ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ

ವಿಕಿಸೋರ್ಸ್ದಿಂದ

ಫ ಪವರ್ಗದ ಎರಡನೆಯ ಅಕ್ಷರ. ಕ್ರಿ. ಪೂ. ಮೂರನೆಯ ಶತಮಾನದ ಅಶೋಕನ ಶಾಸನಗಳಲ್ಲಿ ಈ ಅಕ್ಷರ ಅಲ್ಪಪ್ರಾಣ ಪಕಾರದಂತೆಯೆ ಇರುವುದು ಗಮನಾರ್ಹ. ಮಹಾಪ್ರಾಣವನ್ನು ಸೂಚಿಸಲು ಇದರ ಬಲಭಾಗದಲ್ಲಿ ಸುರಳಿಯಂತಿರುವ ಕೊಂಡಿಯಿದೆ. ಇದೇ ಪ್ರವೃತ್ತಿ ಐದಾರು ಶತಮಾನಗಳ ಕಾಲ ಮುಂದುವರಿಯುತ್ತದೆ. ಕ್ರಿ.ಶ. ಸುಮಾರು ಒಂಬತ್ತನೆಯ ಶತಮಾನದಲ್ಲಿ ಈ ಕೊಂಡಿಯ ಬದಲು ಒಂದು ರೇಖೆ ಹುಟ್ಟುತ್ತದೆ. ಮುಂದೆ ಈ ರೇಖೆ ಅಕ್ಷರದ ಕೆಳಭಾಗದಲ್ಲಿ ಬರೆಯಲ್ಪಡುತ್ತದೆ. ವಿಜಯನಗರದ ಕಾಲದಲ್ಲಿ ಹೊಕ್ಕಳು ಸೀಳುವ ಪ್ರವೃತ್ತಿ ಪ್ರಾರಂಭವಾಗುತ್ತದೆ. ಇದೇ ಮುಂದುವರಿಯುತ್ತದೆ. (ಎ.ವಿ.ಎನ್.)