ಪುಟ:Vimoochane.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

" ಏನೆ೦ದಿರಿ? " ಎ೦ದೆ.

ಮತ್ತೆ ಅವಳ ಹುಬ್ಬುಗಳು ಮೇಲಕ್ಕೆ ಹೋಗಿ ವಕ್ರವಾಗಿ ಗ೦ಟಕ್ಕಿದವು. ಆಗ ನೋಡಲು ಅಸಹ್ಯವೆನಿಸುತ್ತಿತ್ತು. ಸು೦ದರವಾಗಿ ಕಾಣಿಸಿಕೊಳ್ಳುವುದರ ಬದಲು ಇ೦ತಹ ಮುಖನಿಕಾರಗಳಿ೦ದ ಅವರೆಲ್ಲಾ ಯಾಕೆ ಹೀಗಾಗುತ್ತಾರೆ ಎ೦ಬ ಪ್ರಶ್ನೆ ನನ್ನನ್ನು ಕಾಡಿತು.

"ಇಲ್ಲೇನು ಕೆಲಸ ಅ೦ದೆ?"

"ರಾಮಸ್ವಾಮಿಯವರನ್ನು_ಲೋಕಪರಾಯಣ ರಾಮಸ್ವಾ ಮಿಯವರನ್ನು_ನೋಡಬೇಕಾಗಿತ್ತು.

ಅವರ ದೊಡ್ಡನಾಯಿ ನಾಲಿಗೆಯನ್ನು ಹೊರಚಾಚಿ ಉಸಿರಾ ಡುತ್ತಾ ಒಡತಿಯ ಮುಖವನ್ನೇ ನೋಡುತ್ತಿತ್ತು. ಆಕೆ ಹುಬ್ಬುಗ೦ಟಕ್ಕಿದಾಗ ಅದು ನನ್ನಡೆಗೆ ದೃಷ್ಟಿ ಹೊರಳಿಸುತ್ತಿತ್ತು.

"ಸರಿ ಹಾಗಾದರೆ. ಈಗ ಹೊರಟುಹೋಗು." ನಾನು ಅಲ್ಲಿ೦ದ ಮೆಲ್ಲನೆ ಸ್ವಲ್ಪ ದೊರ ನಡೆದು ಹೋದೆ. ಅಲ್ಲೊ೦ದು ದೀಪದ ಕ೦ಬವಿತ್ತು. ಅದಕ್ಕೆ ಒರಗಿ ನಿ೦ತೆ. ಸಾಧ್ಯವಿದ್ದಿದ್ದರೆ ಅ ಜ೦ಭದ ಹೇಟೆಗೆ ತಕ್ಕ ಪ್ರತ್ಯುತ್ತರ ಕೊಡಾಬಹುದಾಗಿತ್ತು. ಆದರೆ ನನಗೆ ಆ ಸ್ವಾತ೦ತ್ರ್ಯವಿಲ್ಲ. ಹಾಗೆ ಮಾಡಿದರೆ ದೊಡ್ಡಮನು ಷ್ಯರಾದ ಲೋಕಪರಾಯಣ ರಾಮಸ್ವಮಿಯವರನ್ನು ಕಾಣುವುದೇ ದುಸ್ಸಾಧ್ಯವಾಗುತ್ತಿತ್ತು. ನನ್ನ ಷರಟು ಚಡ್ಡಿಯನ್ನು ನೋಡಿಕೊ೦ಡೆ. ನಾನು ಒಳ್ಳೆಯ ಬಟ್ಟೆ ಬರೆ ಹಾಕಿ ಬೊಟ್ಸು ಮೆಟ್ಟಿಕೊ೦ಡು ಬ೦ದಿದ್ದರೆ, ಆ ಹುಡುಗಿ ಖ೦ಡಿತವಾಗಿಯೊ ಗೌರವದಿ೦ದ ಮಾತಾಡುತ್ತಿದ್ದಳು. ಹಿ೦ದೆ ಆಕೆಯ ತ೦ದೆಯನ್ನು ಮರುಳುಗೊಳಿಸಿದ್ದ ಇ೦ಗ್ಲಿಷ್‌ನಲ್ಲೇ ಮಾತನಾಡಿದ್ದರೆ, ಅಕೆ ಹಲೋ ಎನ್ನುತ್ತಿದ್ದಳು. ಆ ಮುಖದಮೇಲೆ ಮುಗುಳ್ನಗು ಕಾಣುವುದು ಸಾಧ್ಯವಿತ್ತು. ಆದರೆ ನಾನು ಬಡವ; ನನ್ನ ಲೋಕ ಬೇರೆ........ತ೦ದೆ ಆ ಬೆಳಿಗ್ಗೆ ಕೆಮ್ಮಿದಾಗ, ನನ್ನ ಕರುಳು ಕತ್ತರಿಸಿದ ಹಾಗೆ ನನಗೆ ನೋವಾಗಿತ್ತು. ತ೦ದೆಗೆ ಸರಿಯಾದ ಚಿಕಿತ್ಸೆ ಮಾಡಲೇಬೇಕು. ತ೦ದೆ ಗುಣಮುಖವಾಗಲೇಬೇಕು. ಆಗ ಮಾತ್ರ ನನ್ನ ವಿದ್ಯೆ ಮು೦ದುವರಿಯುವುದು ಸಾಧ್ಯ. ತ೦ದೆಯ ಮನಸ್ಸಿಗೆ.