ಪುಟ:AAHVANA.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆಹ್ಯಾನ

ಕಲೆಯ ಲೋಕದ ಧರ್ಮಗ್ರಂಥ, ಆರ್ಯ, ದ್ರಾವಿಡ ಸಂಸ್ಕೃತಿಗಳ ಸಂಗಮ ವಾಗಲೇ ಸಾಧಿಸಿತ್ತು. ದಾಕ್ಷಿಣಾತ್ಯರ ಶಿವ, ಆರ್ಯರಿಂದಲೂ ಪುರಸ್ಕೃತ ನಾದ........ದರ್ಶನಗಳ ಘರ್ಷಣೆಯೂ ಸಂಕರವೂ ನಡೆಯುತ್ತಿದ್ದ ಆ ಕಾಲದಲ್ಲಿ ಅದ್ವೈತ್ಯ ಸಿದ್ದಾಂತದ ಅಧ್ವರ್ಯುವಾಗಿ ಶಂಕರ ಕಾಣಿಸಿಕೊಂಡ.

ಇತಿಹಾಸಕಾರ :

ಕೇರಳದಲ್ಲಿ ಹುಟ್ಟಿದ ಶಂಕರಾಚಾರ್ಯರು ಅದ್ವೈತ ಸಿದ್ದಾಂತವನ್ನು ಪ್ರತಿ ಪಾದಿಸುತ್ತ, ವೇದೋಪನಿಷತ್ತುಗಳ ಹಿರಿಮೆಯನ್ನು ಎತ್ತಿ ಹಿಡಿಯುತ್ತ, ದಿಗ್ವಿಜಯಕ್ಕೆಂದು ಹೊರಟು ಭಾರತದಾದ್ಯಂತ ಸಂಚಾರಮಾಡಿದರು. ದಕ್ಷಿಣದ ಶೃಂಗೇರಿ-ಕಾಂಚಿಗಳಲ್ಲಿ, ಪಶ್ಚಿಮದ ದಾರಕೆಯಲ್ಲಿ, ಉತ್ತರದ ಬದರೀನಾಥ ದಲ್ಲಿ, ಪೂರ್ವದ ಪುರಿಯಲ್ಲಿ ಪೀಠಗಳನ್ನು ಅವರು ಸ್ಧಾಪಿಸಿದರು.

ನಿರೂಪಕ :

ಆಸ್ತಿಕರ ನಿತ್ಯಪೂಜೆಯ ಸ್ತೋತ್ರಗಳ ಬಣ್ಣನೆಯಂತೆ ಏಳು ಪವಿತ್ರ ನದಿಗಳ, ಏಳು ಪವಿತ್ರ ಪರ್ವತಗಳ, ಏಳು ಪುಣ್ಯಕ್ಷೇತ್ರಗಳ ಭೂಮಿ ಭಾಗತ.

ಭಕ್ತ :

     “ ಸೌರಾಷ್ರ್ಟೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನ |
     ಉಜ್ಜಯಿನ್ಯಾಂ ಮಹಾಕಾಲಮೋಂಕಾರಮಮರೇಶ್ವರೇ || 
     ಕೇದಾರ ಹಿಮವತ್ಪ್ರಶ್ಟೇ ಡಾಕಿನ್ಯಾ ಭೀಮಶಂಕರಂ | 
     ವಾರಣಾಸ್ಯಾಂಚ ವಿಶ್ವೇಶಂ ತ್ರ್ಯ ಂಬಕಂ ಗೌತಮಿತಟೇ || 
     ವೈದ್ಯನಾಥ೦ ಚಿತಾಭೂಮೌ ನರೇಶಂ ದ್ವಾರಕಾವತೇ |
     ಸೇತು ಬಂಧೇ ಚ ರಾಮೇಶಾ ಘುಶ್ಮೇಶಂಚ ಶಿವಾಲಯೇ || 
     ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ | 
     ಸಪ್ತ జನ್ಮಕ್ರತಂ ಪಾಪಂ ಸ್ಮರಣೇನ ವಿನಶ್ಯತಿ || 

ನಿರೂಪಕ :

ಶೈವಾರಾಧನೆಯ ಪುಣ್ಯಸ್ಥಳಗಳ ನಾಮಾವಳಿಯಲ್ಲಾ ఇದೆ భాರತದ ವಿಸ್ತಾರದ ಕಲ್ಪನೆ.

೪೭