ಪುಟ:Abhaya.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

'ದುಃಖಪಡಬೇಡ ತುಂಗ.ನೀನು ದೊಡ್ಡಮ್ಮ ಎಂದು ಕರೆಯುವ ಮಹಾತಾಯಿ ಯಾರೋ ನನಗೆ ತಿಳಿಯದು.ದೇವರು ಅವರಿಗೆ ಒಳ್ಳೇ ದುಂಟುಮಾಡಲಿ.ನೀನು ಮನೆ ಬಿಟ್ಟು ಹೋದೆ ಅಂತ ರಾಮಚಂದ್ರಯ್ಯನ ಕಾಗದವು ನೀನು ದುಡುಕಬೇಕಾಗಿರಲಿಲ್ಲ.ಬರೆದು ತಿಳಿಸಿದ್ದರೆ ನಾನೇ ಬರುತ್ತಿರಲಿಲ್ಲವೆ?ನಾನಿನ್ನೂ ಇದೀನಲವೆ?ಆದರೂ ನೀನು ಮಾಡಿರುವು ದೇನೊ ಸರಿಯಾದ ಕೆಲಸವೇ.ನನಗೇ ಒಮ್ಮೆ ಆ ಯೋಚನೆ ಬಂದೆತ್ತು.ಆದರೊ,ಏನೋ ಎತ್ತವೋ ಅಂತ ಸುಮ್ಮನಿದ್ದೆ.ನೀನು ಯಾವುದಕ್ಕೂ ಹೆದರಬೇಡ.ನಾನು ಈಗಲೇ ಬಂದು ನೋಡಬಹುದು.ನೋಡಿದರೂ ಪ್ರಯೋಜನವೇನು?ಆದ್ದರಿಂದ ವರ್ಷಾಂತ್ಯದ ಪರೀಕ್ಷೆ ಮುಗಿದಕೊಡಲೆ ಹೊರಡುತ್ತೇನೆ.ಈ ಸಲ ನನಗೆ ರಿಟ್ಯೆರೊ ಆಗುತ್ತದಲ್ಲ?ಘಾಬರಿಯಾಗುವುದು ಬೇಡವೆಂದೊ ನಿನ್ನ ಕಾಗದ ಬಂದಿದೆಯೆಂದೂ ರಾಮಚಂದ್ರಯ್ಯನಿಗೆ ಇವತ್ತೇ ಬರೆಯುತ್ತೇನೆ....ನೀನು ದೊಡ್ದಮ್ಮ ಎಂದು ಕರೆಯುವ ಮೇಟ್ರನ್ ರವರಿಗೂ ಬರೆದಿದ್ದೇನೆ ಅವರು ನಿನ್ನನ್ನು ನೋಡಿಕೊಳ್ಲುತ್ತಾರೆಂದು ನನಗೆ ನಂಬಿಕೆ ಇದೆ....ಇನ್ನು ಹೆಚ್ಚೇನನ್ನು ಬರೆಯಲಿ?'

ಹೆಚ್ಚೇನನ್ನೊ ಬರೆಯದೆ ಅವರು ಕೊನೆಯದಾಗಿ ಹೇಳಿದ್ದರು:

'ನಿನ್ನ ಆರೋಗ್ಯದ ವಿಷಯ ನೋಡಿಕೋ ದೇಹಪ್ರಕೃತಿ ವಿಚಾರದಲ್ಲಿ ಸೂಕ್ಷ್ಮವಾಗಿರಬೇಕು.

'ತನ್ನ ಆರೋಗ್ಯ,ದೇಹಪ್ರಕೃತಿ....

ಕಾಗದವನ್ನೋದಿ,ಅಲ್ಲೆ ಅದನ್ನು ಇಳಿಬಿಟ್ತು,ದಿಂಬಿನಲ್ಲಿ ಮುಖಮರೆಸಿಕೊಂಡು ತುಂಗಮ್ಮ ಅತ್ತಳು.

ಬಳಿಕ ಕಾಗದ, ಮಡಚಿಕೊಂಡು ದಿಂಬಿನ ಕೆಳಗೆ ಅತ್ಮೀಯವಾಗಿ ಕುಳಿತಿತು.

ಅದರೆ ತುಂಗಮ್ಮ, ಮನಸ್ಸು ಬಯಸಿದಾಗಲೆಲ್ಲ ಮತ್ತೆ ಮತ್ತೆ ಅದನ್ನೆತ್ತಿಕೊಂಡು ಓದಿದಳು.

ತಂದೆಯ ಕಾಗದ ಕೈಸೇರಿ ಐದು ದಿನಗಳಾಗಿದ್ದುವು ನಿಜ. ಆದರೂ,