ಪುಟ:Abhaya.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಸಾರವಾಯಿತೆಂದರೆ, ತಮ್ಮನ ಒಳ್ಳೆಯ ಹೆಸರಿಗೂ ತನ್ನ ಬದುಕಿನ ಕೆಟ್ಟ ವಾಸನೆ ಅಂಟಿಕೊಳ್ಳುವುದು....

ತನ್ನನ್ನು ಮರೆತು, ತಮ್ಮನನ್ನೇ ಕುರಿತು ಯೋಚಿಸತೊಡಗಿದಳು

ತುಂಗಮ್ಮ. ಆ ತಮ್ಮ ಬಲು ಮುದ್ದು. ಮಗುವಾಗಿದ್ದಾಗಿನಿಂದಲೂ ಅಷ್ಟೆ. ತನಗೆ ಆತ ಆಟದ ಬೊಂಬೆ. ಆತನಿಗೆ ತಾನು ಬೇಕು. ಹಿರಿಯ ಕ್ಕನಿಗಿಂತಲೂ ತನ್ನಲೇ ಆತನಿಗೆ ಪ್ರೀತಿ ಜಾಸ್ತಿ....ನಾರಾಯಣ ಮೂರ್ತಿಯ ಪ್ರಕರಣ....ತಮ್ಮನಿಗೆಷ್ಟು ತಿಳಿಯಿತೊ?....ಕಾಗದಗಳನ್ನೇನಾದರೂ ಕದ್ದು ಓದಿ ಅರ್ಥಮಾಡಿಕೊಂಡಿರುವನೋ ಏನೋ....

ಮತ್ತೆ ಅದೇ ವಿಷಯ ಅದನ್ನು ಬಿಟ್ಟು,ತಮ್ಮನ ಭವಿತವ್ಯವನ್ನು ಚಿತ್ರಿ

ಸಿಕೊಳ್ಳತೊಡಗಿದಳು ತುಂಗಮ್ಮ...ಇನ್ನು ಮೂರು ವರ್ಷಗಳಲ್ಲಿ ಹೈಸ್ಕೂಲು ಮುಗಿಯುವುದು-ಆ ಬಳಿಕ ಕಾಲೇಜು....ಉದ್ಯೋಗ....ಮದುವೆ.

ಈ ಮದುವೆಯ ಮಾತು..

ಇಲ್ಲ, ಆ ಯೋಚನೆಗಳಿಂದ ವಿನೋಚನೆಯೇ ಇರಲಿಲ್ಲ. ಎಷ್ಟು

ಬದಿಗೆ ಸರಿಸಿದರೂ ಸಮಯ ಕಾಯುತಿದ್ದು ಗಕ್ಕನೆ ಧುಮುಕಿ ಬಿಡುತಿದ್ದುವು.

ತುಂಗಮ್ಮ ಮಗ್ಗುಲು ಬದಲಿಸಿದಳು... ಆ ಪತ್ರಿಕೆ. ತಮಾಷೆಯಾ

ಗಿತ್ತು ಹೊದಿಕೆಯ ಮೇಲಿನ `ಕೊರವಂಜಿ` ಚಿತ್ರ. ಕೈಯಲ್ಲೊಂದು ಮಗುವನ್ನು ಹಿಡಿದಿದ್ದಳು ಆ ಕೊರವಂಜಿ-ಮಗುವಿನ ಬೊಂಬೆ.

ಮತ್ತೆ ಬಾಣಂತಿತನದ ನೆನಪು.

ಜಲಜ ಸೂಕ್ಷ್ಮವಾಗಿ ಎರಡು ದಿನಗಳಿಗೆ ಹಿಂದೆಯಷ್ಟೇ ಅಂದಿದ್ದಳು:

"ಆ ವಿಷಯವೆಲ್ಲಾ ಈಗ ನೀನು ಯೋಚಿಸ್ಕೂಡ್ದಕ್ಕ...."

"ಯಾಕೆ?"

"ಮುಖ್ಯ ನಿನ್ನ ಆರೋಗ್ಯ ನೋಡ್ಕೋಬೇಕು..."

ಆದರೂ ಆಕೆಗೆ ಸ್ವಲ್ಪ ವಿಷಯ ತಿಳಿದಿತ್ತು.....ಲೇಡಿ ಡಾಕ್ಟರು

ಬಂದುದು ನರ್ಸ್ ತನ್ನ ಮೂಗಿಗೇನೋ ಹಿಡಿದುದು. ಗುಂಯ್ ಗುಂಯ್ ಎಂದು ಯಾವುದೋ ಆಳಕ್ಕೆ ತಾನು ಕ್ರಮಕ್ರಮವಾಗಿ, ಆದರೆ ವೇಗವಾ ಗಿಯೇ, ಇಳಿದುದು. ಅದು ಪ್ರಜ್ಞೆ ತಪ್ಪಿದಸ್ಥಿತಿ. ..ಆನಂತರ....ಅಯ್ಯೋ, ಅವರೇನೋ ಮಾಡಿರಬೇಕು....ಸತ್ತು ಹುಟ್ಟಿದ ಕೂಸು....