ಪುಟ:Abhaya.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೇಳಬಹುದೋ ಬಾರದೋ. ವಿವರಿಸಲಾಗದ ಅಳುಕು

ತುಂಗಮ್ಮನಿಗೆ.

ಆ ಬೀದಿಯ ಬಳಿಕ ಇನ್ನೊಂದು. ಅದೂ ಹಾಗೆಯೇ. ಇಲ್ಲಿ

ನಾಲ್ಕಾರು ಗಂಡಸರು ಮನೆ ಸೇರುತಿದ್ದುದನ್ನಷ್ಟು ತುಂಗಮ್ಮ ಕಂಡಳು.....

ಅಲ್ಲೇ ಭಿಕ್ಷೆ ಬೇಡುವ ಇಬ್ಬರು ಹುಡುಗರಿದ್ದರು....ಅವರನ್ನು ಕೇಳಬಹುದಲ್ಲವೆ-ಆ ಹುಡುಗರನ್ನು?

ಆದರೆ ಅವರಿಗೆ ಗೊತ್ತಿರುತ್ತದೋ ಇಲ್ಲವೋ....

ಆ ಬೀದಿಯ ಕೊನೆಯಲ್ಲಿ, ದೊಡ್ಡಮನೆಯೊಂದರ ಅಂಗಳದ ಗೇಟಿನ

ಹೊರಗೆ, ವಿದ್ಯಾರ್ಥಿನೀಯರಂತೆ ತೋರಿದ ಹುಡುಗಿಯರಿಬ್ಬರು ಮಾತನಾಡುತ್ತ ನಿಂತಿದ್ದರು. ತನಗಿಂತ ವಯಸ್ಸಿನಲ್ಲಿ ಚಿಕ್ಕವರಿದ್ದರೂ ಇರಬಹುದು. ಅಥವಾ ಸಮವಯಸ್ಕರೋ ಏನೋ. ಯಾವ ಸಮಸ್ಯೆಗಳೂ ಇಲ್ಲ ಅವರಿಗೆ. ಓದುತ್ತ, ಬಣ್ಣ ಬಣ್ಣದ ಕನಸು ಕಾಣುತ್ತ, ದಿನಕಳೆದರಾಯಿತು; ರಾತ್ರೆ ಕಳೆದರಾಯಿತು.

ತುಂಗಮ್ಮ ಅವರನ್ನು ಸಮೀಪಿಸುತಿದ್ದಂತೆ ಒಬ್ಬಾಕೆ ಎಂದಳು.

"ಹೊತ್ತಾಯ್ತು ಹೊರಡ್ತೀನಿ ಕಣೆ ಅಮ್ಮಾ ಬಯ್ತಾರೆ ತಡವಾದ್ರೆ-"

ಹಾಗೆ ಹೇಳುತ್ತ ಒಬ್ಬ ಹುಡುಗಿ ಹೊರಟರೆ, ಇನ್ನೊಬ್ಬಳು ಅಂಗಳಕ್ಕೆ

ಕಾಲಿರಿಸಿ ಗೇಟು ಮುಚ್ಚಿಕೊಳ್ಳುತ್ತ ಅಂದಳು:

"ಹುಷಾರೀನಮ್ಮ....ಕಾರುಗೀರು ನಿಂತಿರತ್ತೆ ಮೂಲೇಲಿ,

ಹುಷಾರಿ!"

"ಊ....ಆ ಭಯವೆಲ್ಲ ನಿಂಗಮ್ಮ...ನನಗೇನೂ ಇಲ್ಲ."

ಹುಷಾರಿ-ಕಾರುಗೀರು-ಭಯ....ಆ ಮಾತುಗಳಿಗೆ ಏನು ಅರ್ಥವೋ

ತುಂಗಮ್ಮನಿಗೆ ಸ್ಪಷ್ಟವಾಗಿ ತಿಳಿಯಲಿಲ್ಲ. ಪ್ರಪಂಚದಲ್ಲಿ, ಭಯಪಡಬೇಕಾದವಳು ತಾನೊಬ್ಬಳೇ ಅಲ್ಲವೆ? ಈ ಮುಗ್ಪೆಯರಿಗೆ ಯಾತರ ಭಯ?

ಅವರಿಗೆ ಖಂಡಿತ ತಿಳಿದಿರುತ್ತದೆಂದು ಕೊಂಡಳು ತುಂಗಮ್ಮ ಅವ

ರನ್ನೆ ಕೇಳುವುದು ಮೇಲು ತನ್ನ ಸೋದರಿಯರು....

ಆದರೆ ಒಬ್ಬಾಕೆ ಒಳ ಹೋದಮೇಲೆ, ಮುಂದೆ ನಡೆಯುತ್ತಲಿದ್ದವಳು

ಉಳಿದ ಒಬ್ಬಳೇ. ಆಕೆಯನ್ನೆ ತುಂಗಮ್ಮ ಕರೆದಳು.