ಪುಟ:Abhaya.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಂಜಾವದ ಸವಿಗನಸ್ಸು ಬೀಳುತ್ತಿದೆಯೇನೊ! ನಿದ್ದೆ ಹೋಗಿರುವ ಆ ಹುಡುಗಿಯಂತೂ ತನ್ನನ್ನು ಖಂಡಿತ ಕರೇ ಲಾರಳು.

ಮತ್ತೆ ಆ ಸ್ವರ.

"ಚಿಕ್ ಚಿಕ್ ಚಿಕ್ ಚಲಿಪಿಲಿ ಚಿ ...."

ಓ! ಗುಬ್ಬಚ್ಚಿ ಕಿಟಕಿಯ ನಡು ದಂಡೆಯ ಮೇಲೆ ಕುಳಿತು

ಕೂಗುತ್ತಿದೆ. ಕುಪ್ಪಳಿಸುತ್ತ ಮೈ ಅಲುಗಿಸುತ್ತ ಅದು ಕೂಗುವ ವೈಖರಿಯೊ!

ಕತ್ತಿನಲ್ಲಿ ಕಪ್ಪು ಮಚ್ಚೆ. ಅದು ಗಂಡು ಗುಬ್ಬಚ್ಚಿ. ತುಂಗಮ್ಮ

ಅದನ್ನು ಬಲ್ಲಳು. ಆದರೆ ಆ ಗುಬ್ಬಚ್ಚಿ ಕೂಗಿ ಕರೆಯುತ್ತಿರುವುದು ಯಾರನ್ನು? ಎಲ್ಲಿ ಅದರ ಸಂಗಡಿಗ ಹೆಣ್ಣು ಹಕ್ಕಿ?

....ಮರದ ಮೋಪಾದ ಆರು ತೊಲೆಗಳ ಮೇಲೆ ಗಾರೆಯ ತಾರಸಿ

ನಿಂತಿತ್ತು. ಒಂದು ತೊಲೆಗೆ ಆರಡಿಗಳ ಅಂತರದಲ್ಲಿ ಎರಡು ಮೊಳೆ ಹೊಡೆದಿದ್ದರು-ದಾರ ಕಟ್ಟಿ ಸೀರೆಯೊಣಗಿಸುವುದಕ್ಕೆಂದೋ ಏನೋ. ಆ ಒಂದು ಮೊಳೆಯ ಮೇಲೆ ಮುದುಡಿ ಕುಳಿತಿತ್ತು. ಹೆಣ್ಣು ಗುಬ್ಬಚ್ಚಿ ಅದರ ಕತ್ತಿನಲ್ಲಿ ಕರಿಯ ಮಚ್ಚೆಯಿಲ್ಲ ಬದಲು ಮೈಗಾತ್ರ ಬಲುದೊಡ್ಡದೇ.....

ತುಮಕೂರಿನಲ್ಲಿ-ಹೌದು ಅಲ್ಲೇ-ಹಿಂದೆ ತಮ್ಮ ಪುಟ್ಟ ಮನೆಯಲ್ಲಿ

ಗುಬ್ಬಚ್ಚಿಗಳು ಗೂಡು ಕಟ್ಟಿದುದನ್ನು ತುಂಗಮ್ಮ ಕಂಡಿದ್ದಳು. ಹೆಣ್ಣು ಗುಬ್ಬಚ್ಚಿ ತಾಯಿಯಾಗುವ ಹೊತ್ತಿಗೆ ಗಂಡು ಗುಬ್ಬಚ್ಚಿ ಅದರ ಸೇವೆ ಸಂರಕ್ಷಣೆ ಮಾಡುವುದನ್ನು ಕಂಡಿದ್ದಳು.

ಗುಬ್ಬಚ್ಚಿಯ ತಾಯ್ತನ.....

ಪ್ರಿಯಕರವಲ್ಲದ ಯೋಚನೆಯನ್ನು ದೂರಸರಿಸಲೆಂದು ತುಂಗಮ್ಮ

ಪಕ್ಕಕ್ಕೆ ಹೊರಳಿಕೊಂಡಳು.

ಗಂಡು ಗುಬ್ಬಚ್ಚಿ ಕೂಗುತ್ತಲ್ಲೆ ಇತ್ತು;

"ಚಿಕ್ ಚಿಕ್ ಚಿಕ್ ಚಿಲಿಪಿಲಿ ಚಿಲಿ...."

'ತುಂಗಾ ಎಂದು ಯಾರೂ ಕರೆದಿರಲಿಲ್ಲ. ಹಾಗೆಂದು ಆಕೆ ಭ್ರಮಿಸಿ

ಕೊಂಡಿದ್ದಳು,ಅಷ್ಟೆ.

ಭುರ್-ಸದ್ದು. ಆ ಬಳಿಕ ಎರಡು ಸ್ವರಗಳು. ಕಿಟಕಿಯ ದಂಡೆಯ