ಪುಟ:Abhaya.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೊಡ್ಡಮ್ಮ ಆಕೆಯ ಹಣೆಮುಟ್ಟ ನೋಡಿದರು. ಒದ್ದೆಯಾಗಿದ್ದ

ರವಕೆ ಮಗ್ಗುಲು ಹಾಸಿಗೆಗಳನ್ನು ನೋಡಿದರು.

"ಇಲ್ಲ ಜಲಜಾ, ಇವತ್ತೊಂದು ದಿವಸ ನೀನು ಏಳಕೂಡದು."

"ನನ್ನಿಂದ ಇಲ್ಲೇ ಮಲಗಿರಕ್ಕಾಗಲ್ಲ ದೊಡ್ಡಮ್ಮ"

"ಜಲಜ! ಹಟ ಹಿಡೀಬೇಡ....ಮಲಗಿಕೋ ಇವತ್ತು."

"ಊಂ...."

ಪುಟ್ಟ ಮಗುವನ್ನು ರಮಿಸುವ ಹಾಗೆ ಸರಸಮ್ಮ ವರ್ತಿಸುತಿದ್ದರು.

ಹೊರಗೆ ಇಳಿಧ್ವನಿಯಲ್ಲಿ, ಆದರೂ ಹಲವು ಕಂಠಗಳಿಂದ ಹೊರಡುತಿ

ದ್ದುದರಿಂದ ಗಟ್ಟಿಯಾಗಿಯೆ, ವ್ರಾರ್ಥನೆ ಕೇಳಿಸುತಿತ್ತು:

"ರಘು ಪತಿ ರಘವ ರಾಜಾ ರಾಮ್

ಈಶ್ವರ ಅಲ್ಲಾ ತೇರೇ ನಾಮ್...."

"ಪ್ರಾರ್ಥನೆ ಮಾಡ್ತಿದಾರೆ," ಎಂದರು ಸರಸಮ್ಮ

ಜಲಜ ಮೌನವಾಗಿ ತಲೆ ಬಾಗಿದಳು ತುಂಗಮ್ಮ ಗಂಭೀರಳಾಗಿ

ಆ ಹಾಡಿಗೆ ಕಿವಿಗೊಟ್ಟಳು. ಸರಸಮ್ಮ ಎದ್ದು ನಿಶ್ಯಬ್ದವಾಗಿಯೆ ಮೇಜಿನ ಮೇಲಿದ್ದ ಪುಸ್ತಕಗಳನ್ನು ಜೋಡಿಸಿ ಇಟ್ಟರು.

ಪ್ರಾರ್ಥನೆ ಮುಗಿದ ಬಳಿಕ ಕೊಠಡಿಯ ಹೊರಗಿನಿಂದ ಕಲರವ

ಕೇಳಿಸಿತು.

"ದೊಡ್ಡಮ್ಮಾ ದೊಡ್ಡಮ್ಮಾ," ಎನ್ನುತ್ತ ಆರೇಳು ಹುಡುಗಿಯರು

ಕೊಠಡಿಯ ಬಾಗಿಲ ಬಾಳಿ ಬಂದು ನಿಂತರು.

"ಏನ್ರೇ ಅದು?"

ತುಂಗಮ್ಮ ಹಿಂದಿನ ರಾತ್ರೆಯೇ ಗುರುತಿಸಿದ್ದ ಸರಸ್ವತಿ ಹೇಳಿದಳು:

"ಇವತ್ತು ದಮಯಂತಿ ಗ್ರೊಪ್ನೋರು ಗುಡಿಸೋಲ್ವಂತೆ

ದೊಡ್ಡಮ್ಮ."

"ಯಾಕೆ?"

"ಅವರಲ್ವಂತೆ ಇವತ್ತು ಗುಡಿಸೋದು."

ದಮಯಂತಿ ಒಮ್ಮೊಮ್ಮೆ ಬೇಕು ಬೇಕೆಂದೇ ಹಾಗೆ ಮಾಡುತಿದ್ದುದು

ಸರಸಮ್ಮನಿಗೇನೂ ತಿಳಿಯದ ವಿಷಯವಾಗಿರಲಿಲ್ಲ. ಯಾಕೆ-ಎಂದರೆ ಆಕೆ,