ಪುಟ:Abhaya.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ದಮಯಂತಿ, ಕೊದಡುವ ಉತ್ತರ ಯಾವುದೆಂಬುದೂ ಸ್ಪಷ್ಟವಾಗಿತ್ತು. ಆದರು ಅವರು, ದಮಯಂತೀ!" ಎಂದು ಏರು ಸ್ವರದಲ್ಲಿ ಕರೆದರು.

ದಮಯಂತಿ ಕಾಣಿಸುವಂತೆ, ಆ ಹುಡುಗುಯರು ಹಾದಿಮಾಡಿ

ಕೊಟ್ಟರು. ಆ ಹುಡುಗಿಯರ ಹಿಂದಿಯೆ ನಿಂತಿದ್ದಳು ಕುಳ್ಳಿಯಾದ ದಮಯಂತಿ...ಆವಳ ಮುಖ ಸಿಟ್ಟಿನಿಂದ ಕೆಂಪಗೆ ಸಿಡಿಯುತಿತ್ತು. ಮೂಗಿನ ಸೊಳ್ಳೆಗಳು ಅದುರುತಿದ್ದುವು ಹೊರಗೆ ಇತರರೊಡನೆ ಜಗಳವಾಡಿ ಬಂದಿದ್ದ ಆಕೆಯ ಎದೆ ತೀವ್ರಗತಿಯಿಂದ ಮೇಲು ಕೆಳಕ್ಕೆ ಏರಿ ಇಳಿಯುತಿತ್ತು.

ತುಂಗಮ್ಮ ಕುತೂಹಲದಿಂದ ಈ ಘಟನಾ ವಿಶೇಷವನ್ನು ಈಕ್ಷಿಸಿ

ದಳು. ಆದರೆ ಜಲಜಳಿಗೆ ಅದು ಮಹತ್ವದ ವಿಷಯವೇ ಆಗಿರಲಿಲ್ಲ.

"ಇವಳೇ ದಮಯಂತಿ- ಚಂದನದ ಬೊಂಬೆ!"

- ಎಂದಳು ಜಲಜ, ಆ ಹುಡಿಗಿಯನ್ನು ತುಂಗಮ್ಮನಿಗೆ ತೋರಿಸುತ್ತ

ಪಿಸುಮಾತಿನಲ್ಲೆ.

ಆ ಮಾತು ಕೇಳಿಸಿದವಳಂತೆ ದಮಯಂತಿ ಜಲಜಳನ್ನು ನುಂಗಿಬಿಡು

ವವಳಂತೆ ನೋಡಿದಳು ಜಲಜ, ಆ ದೃಷ್ಟಿಗೆ ಉತ್ತರವಾಗಿ ನಕ್ಕಳು.

"ಅದೇನೆ ಅದು ನಿನ್ಗಲಾಟಿ?"

-ಎಂದು ಸರಸಮ್ಮ ವಿಚಾರಿಸಿಕೊಳ್ಳುವವರ ಧ್ವನಿಯಲ್ಲಿ ಕೇಳಿದರು.

"ನೋಡಿ ದೊಡ್ಡಮ್ಮಾ...ತಿಗ್ರಾ ಹಿಂಸೆ ಕೊಡ್ತವ್ರೆ...."

"ನಿನ್ನದು ಯಾವಾಗ್ಲೂ ಇದ್ದಿದ್ದೇ."

"ಅಲ್ಲ ದೊಡ್ಡಮ್ಮಾ, ಇವತ್ತು ಗುಡಿಸೋ ದಿನ ನಮ್ದೂಂತ

ಎಷ್ಟೊಂದು ಕಸ ಹಾಕವ್ರೆ ನೋಡಿ ಮತ್ತೆ."

"ಬೇಕು ಬೇಕೂಂತ್ಲೇ ಹಾಕಿದೀವೇನೊ-"

- ಎಂದು ಗುಂಪಿನಲ್ಲಿದ್ದ ಹುಡ್ಗಿಯೊಬ್ಬಳು ರಾಗವೆಳೆದಳು.

ಕೆರಳಿದ ದಮಯಂತಿ ಹಾಗೆ ರಾಗವೆಳೆದ ಹುಡುಗಿಯ ಮೇಲೆ ಎರಗಿ

ದಳು. ಕಣ್ಣುಮುಚ್ಚಿ ತೆರೆಯುವುದರೊಳಗಾಗಿ ಒಬ್ಬರ ತುರುಬು ಇನ್ನೊಬ್ಬರ ಕೈಗೆ ಹೋಯಿತು. ಒಳ್ಳೆಯವಲ್ಲದ ಪದಗಳು ಹಾರಾಡಿದುವು.

ದಮಯಂತಿಯ ಆರೋಪ ನಿಜವಾಗಿತ್ತೆಂಬುದನ್ನು ಸರಸಮ್ಮ ತಿಳಿದಿ

ದ್ದರು. ಆದರೆ ಈ ಜಗಳದಿಂದ ಹೊಸಪರಿಸ್ಥಿತಿ ಹುಟ್ಟಕೊಂಡಿತ್ತು.