ಪುಟ:Abhaya.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಮತ್ತೆ? ಅವರಿಬ್ರನ್ನೂ ಇಲ್ಲೇ ಇರಿಸಿ ನಮಗೆ ತಿಂಡಿ ಕೊಡೋ

ಕಾಗುತ್ತಾ? ಅದಕ್ಕಾಗಿ ಕ್ಷಮಿಸಿಬಿಟ್ಟಿದ್ದಾರೆ."

"ಹಾಗೇನು?"

"ಅಯ್ಯಮ್ಮ....ಇಲ್ದೆ ಹೋದ್ರೆ ಅಷ್ಟು ಸುಲಭವಾಗಿ ಬಿಟ್ಟು ಬಿಡ್ತಾ

ರೆಯೇ ದೊಡ್ಡಮ್ಮ!"

ತಾವು ಅಲ್ಲಿದ್ದು ನಿಜವಾಗಿಯೂ ಹಾಗಾದರೆ ಆ ಇಬ್ಬರು ಹುಡುಗಿಯ

ರಿಗೆ ಉಪಕಾರವಾದಂತಾಯಿತೆಂದು ತುಂಗಮ್ಮನಿಗೆ ಸ್ವಲ್ಪ ಸಮಾಧಾನವೆನಿಸಿತು.

ಆಮೇಲೆ ಐದು ನಿಮಿಷಗಳಲ್ಲೆ "ಕಿಕಿವಿಕಿ ಕಿಕಿ" ಎಂದು ಸದ್ದು

ಮಾಡುತ್ತಾ ಒಬ್ಬಳು ಹುಡುಗಿ ತಿಂಡಿಯ ಎರಡು ತಟ್ಟೆಗಳನ್ನೆತ್ತಿಕೊಂಡು ಬಂದಳು. ಒಂದರಲ್ಲಿ ಬ್ರೆಡ್ಡಿನ ತುಣುಕುಗಳು; ಇನ್ನೊಂದರಲ್ಲಿ ಉಪ್ಪಿಟ್ಟು.ಅದನ್ನು ತುಂಗಮ್ಮ ಜಲಜೆಯರ ಮುಂದಿಟ್ಟು, ಮತ್ತೊಮ್ಮೆ "ಕಿಕಿವಿಕಿ ಕಿಕಿ" ಎನ್ನುತ್ತಾ, ಹಲ್ಲು ಕಿರಿಯುತ್ತಾ, ಆಕೆ ಹೊರ ಹೋದಳು.

"ಮೂಗಿ," ಎಂದಳು ಜಲಜ.

ತುಂಗಮ್ಮನಿಗೆ ಅದು ತಿಳಿದಿತ್ತು

ಆದರೆ ಮಗುವಿನಂತಹ ಆ ಮುಗ್ಧ ಸೌಂದರ್ಯ!

"ಅವಳಿಗೆ ಹದಿನಾಲ್ಕು ವರ್ಷ. ಎಂಟು ತಿಂಗಳಾಯ್ತು ಇಲ್ಲಿಗೆ

ಬಂದು."

ಮಾತು ಬರುತಿದ್ದರೆ ಆಕೆ, ಯಾವ ಸುಂದರನ ಪ್ರಿಯತಮೆಯಾಗು

ತಿದ್ದಳೊ!

ಮೂಗಿ ಮತ್ತೆ ಬಂದಳು. ಅವಳ ಕೈಯಲ್ಲಿ ಎರಡು ಲೋಟಗಳಿ

ದ್ದವು. ಒಂದರಲ್ಲಿ ಹಾಲು, ಇನ್ನೊಂದರಲ್ಲಿ ಕಾಫಿ. ಹಾಲನ್ನು ಜಲಜೆಯ ಮುಂದಿಟ್ಟು, ತುಂಗಮ್ಮನನ್ನು ನೋಡಿ "ಅದನ್ನು ಮುಟ್ಟಬೇಡ, ಅದು ನಿನಗಲ್ಲ" ಎನ್ನುವಂತೆ ಸನ್ನೆಮಾಡಿದಳು. ಕಾಫಿಯ ಲೋಟವನ್ನು ತುಂಗಮ್ಮನ ಕೈಗೇ ಕೊಟ್ಟು ಆಕೆ ನಕ್ಕಳು. ಅವಳ ದೃಷ್ಟಿ ತುಂಗಮ್ಮನ ಬಸಿರಿನತ್ತ ಹೋಯಿತು. ಬಸಿರನ್ನು ನೋಡುತ್ತ ಆಕೆಗೇ ಲಜ್ಜೆಯಾಗಿ ಮುಖ ಕೆಂಪೇರಿತು.