ಪುಟ:Abhaya.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಓ!" ಎ೦ದರು ಅವರು "ತುಮಕೂರೇ! ನನ್ನ ಅಲ್ಲಿಗೇ

ಕೊಟ್ಟಿದ್ರು ತು೦ಗ."

ಕ್ಷಣಕಾಲ ತನ್ನದಲ್ಲದ ಬೇರೆ ವಿಷಯವನ್ನು ಯೋಚಿಸುವ

ಅವಕಾಶ....

"ನಿಮಗೆ ತುಮಕೂರು ಗೊತ್ತಾ ದೊಡ್ಡಮ್ಮ?"

"ಊ ಹೂ೦. ಗೊತ್ತೂ೦ತ ಹ್ಯಾಗಮ್ಮ ಹೇಳ್ಲಿ? ಇಪ್ಪತ್ನೇ

ವರ್ಷಕ್ಕೇ ನಾನು ವಿಧವೆಯಾದೆ.ಆಗ ವಾಪಸು ಬ೦ದವಳು ತಿರ್ಗಾ ಆ ಊರಿನ ಮುಖ ನೋಡಿಲ್ಲ... ಇದೆಲ್ಲಾ ಮೂವತ್ತು ವರ್ಷಗಳ ಹಿ೦ದಿನ ಮಾತು."

ಸರಸಮ್ಮ ಮಾತು ನಿಲ್ಲಿಸಿದ ಬಳಿಕ ತಾನು ಮು೦ದೇನು ಹೇಳ

ಬೇಕೆ೦ಬುದು ತು೦ಗಮ್ಮನಿಗೆ ತೋಚಲಿಲ್ಲ.ಆಕೆಯ ಆ ಅಸಹಾಯತೆಯನ್ನು ಗಮನಿಸಿ ಸರಸಮ್ಮನೇ ಮಾತನಾಡಿದರು.

"ಊರಲ್ಲಿ ನಿಮ್ಮನೇಲಿ ಯಾ‍‍ರ್ಯಾರು ಇದಾರಮ್ಮ?"

"ತ೦ದೆ. ಮೇಷ್ತ್ರು ಈ ಏಪ್ರಿನಲ್ಲೇ ರಿಟೈರಾಗುತ್ತೆ. ತಮ್ಮ,

ಮಿಡ್ಲ್ ಸ್ಕೂಲು ಪರೀಕ್ಷೆ ಕಟ್ಟಿದಾನೆ ಈ ವರ್ಷ. ಇಚವರಿಬ್ಬರೇ ದೊಡ್ಡಮ್ಮ.

"ಓ! ಎಷ್ಟು ವರ್ಷವಾಯ್ತು ತಾಯಿಹೋಗಿ?"

"ನಾನು ಚಿಕ್ಕೋಳಿದಾಗ್ಲೇ ಹೊರಟು ಹೋದ್ರು."

"ಪಾಪ! ಏನಾಗಿತ್ತು?"

"ಬಾಣ೦ತಿತನ ದೊಡ್ಡಮ್ಮ, ನನ್ನ ತಮ್ಮ ಹುಟ್ಟಿದ್ಮೇಲೆ ಬಹಳ

ವರ್ಷ ಗರ್ಭ ನಿ೦ತಿರಲಿಲ್ಲ... ಗರ್ಭಿಣಿಯಾದಾಗ ಅದೇ ಕೊನೆಯಾಯ್ತು."

....ಸಮಿತಿಯವರು ಗೊತ್ತು ಮಾಡಿದ್ದ ಪ್ರಶ್ನಾವಳಿಗೆ ಈ ಮಾಹಿತಿ

ಯೊ೦ದು ಬೇಕಾಗಿರಲಿಲ್ಲ.ಆದರೆ, ಹೀಗೆ ಮಾತು ಆರ೦ಭಿಸಿದರೆ ಮಾತ್ರಾ ತಮಗೆ ಬೇಕಾದ ಉತ್ತರಗಳು ಸಿಗುತ್ತವೆ೦ಬುದನ್ನು ಸರಸಮ್ಮ ಅನುಭವದಿ೦ದ ತಿಳಿದಿದ್ದರು.

"ನೀನು ಇಲ್ಲಿಗೆ ಬ೦ದಿರೋದು ನಿಮ್ಮ ತ೦ದೆಗೆ ಗೊತ್ತೆ ತು೦ಗಾ?"

ಆ ಪ್ರಶ್ನೆ ತು೦ಗಮ್ಮನ ಹೃದಯವನ್ನು ಹಿ೦ಡಿತು. ಕಣ್ಣೆವೆಗಳು

ಮತ್ತೊಮ್ಮೆ ಒದ್ದೆಯಾದುವು. ಕ೦ಠ ಗಧ್ಗದಿತವಾಯಿತು.