ಪುಟ:Abhaya.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ಸಂಜೆ ಸಂಗೀತೆ ಕಛೇರಿ ನಡೆಯಿತು ಗಾಯಕ ವಿದ್ವಾಂಸರು ಚೆನ್ನಾಗಿ ಹಾಡಿದರೋ ಇಲ್ಲವೋ ತುಂಗಮ್ಮನಿಗೆ ತಿಳಿದಿರಲಲ್ಲ.

ವಧೂವರರಿಗೆ ಎ‍‍ಷ್ಟೋಜನ ಉಡುಗೊರೆ ಓದಿಸಿದರು. ತನ್ನ ಅಕ್ಕ

ನಿಗೆ ಬಂದುದನ್ನೆಲ್ಲ ಎತ್ತಿ ಕೊಂಡ ತುಂಗಮ್ಮ ಅಕ್ಕ ಟ್ರಂಕಿನಲ್ಲಡಲಂದು ಒಳಹೋದಳು ಮನೆಯ ಒಳಕೊಠಡಿಗಳೆಲ್ಲ ನಿಜರ್ತನವಾಗಿದ್ದುವು.ಉಡುಗೊರೆಗಳೆನ್ನು ಟ್ರಂಕಿನೊಳಗಿಟ್ಟು ಬೀಗಹಾಕಿ ಬಾಗಿಲಿತ್ತ ತಿರುಗಿದ ತುಂಗಮ್ಮ ನಿಶ್ಚೇಪ್ಟಿತಳಾಗಿ ಅಲ್ಲೇ ನಿಂತಳು.

ಆತ ಬಾಗಿಲಿಗೆ ಅಡ್ಡವಾಗಿದ್ದ. ನಗುತ್ತಲಿದ್ದ.

ತುಂಗಮ್ಮನಿಗೆ ಗಾಬರಿಯಾಯಿತು, ನಾಲಿಗೆಯೇ ಹೊರಳಲಲ್ಲಿ.

ಆತ ಕೇಳಿದ:

"ನನ್ನ ತಂಗಿ ಬಂದ್ಲಾ ಇಲ್ಲಿಗೆ?"

"ಹಾಂ? ಹೂಂ'...."

"ನನ್ನ ತಂಗಿ ಬಂದ್ಲಾ ಅಂದೆ ಆಯ್ಯೊ, ಇಷ್ಟೊಂದು

ಹೆದರೊಂಡ್ಯಾ ?"

ತನ್ನ ಮನೆಯಲ್ಲೇ ತಾನಿದ್ದೂ ಇಷ್ಟು ಅಧೈಯರ್ಹವೆಂದರೆ!ತುಂಗಮ್ಮ

ಸುಧಾರಿಸಿಕೊಂಡು ಮುಗು ನಗಲೆತ್ನೆಸೆದಳು.

ಅತನೇ ಮುಂದುವರಿಸಿದ:

"ಬರೋಕೆ ಹೇಳಿದ್ಯಂತೆ!"

"ಯಾರು? ನಾನೆ? ಇಲ್ವಲ್ಲಾ!"

"ಓ! ಸುಳ್ಳು ಬೇರೆ...."

"ಸುಳ್ಳು? ನಾನು___"

ತುಂಗಮ್ಮ ಪೂತರ್ಹಯಾಗಿ ಉತ್ತರ ಕೊಡಲು ಆತ ಬಿಡಲಿಲ್ಲ. ಕಣ್ಣೆವೆ

ಮುಚ್ಚಿ ತೆರೆಯುವುದರೊಳಗಾಗಿ ಒಳಬಂದವನು ತುಂಗಮ್ಮನನ್ನು ತಬ್ಬಿ ಕೊಂಡ ಮುತ್ತಿಟ್ಟ.

ಅ ಕ್ಷಣವೆ ಆಕೆ ಹಿಡಿತದಿಂದ ಬಿಡಿಸಿಕೊಂಡಳೊ. ಅದರೆ ಕೂಗಾಡ

ಲಿಲ್ಲ. ಅವನೂ ಗಾಬರಿಯಾದವನಂತೆ ಹೊಂಟು ಹೋದ.

ಕಚ್ಚಿದ ಹಲ್ಲು ತೆರೆದ ತುಟಗಳೊಡನೆ ತುಂಗಮ್ಮ ಬಚ್ಚಲು ಮನೆಗೆ