ಪುಟ:Banashankari.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಬನಶಂಕರಿ ಸುಮ್ಮನಾದಳು. ಸುಂದರಮ್ಮನ ಮೌನಕ್ಕಾಗಿ ಎಷ್ಟೊಂದು ಕೃತಜ್ಞಳಾಗಿದ್ದಳು ಅಮ್ಮಿ!! ಮತ್ತೂ ಅದೇ ಪ್ರಶ್ನೆಯನ್ನೇ ಆಕೆ ಕೇಳಿದ್ದರೆ ಅಮ್ಮಿ ಏನು ಉತ್ತರ ಕೊಡುವುದು ಸಾಧ್ಯವಿತ್ತು ? ನಾರಾಯಣ ರಾಯರು ತನ್ನನ್ನು ಕಂಡು ಎರಡು ಸಾರೆ ಮಾತನಾಡಿಸಿದರೆಂದೆ? ತಮ್ಮಿಬ್ಬರ ಬಗ್ಗೆ ಹೆಂಗಸರು ನಗೆಯಾಡಿದರೆಂದೆ ? ತನ್ನಿಂದಲು ತಪ್ಪಾಯಿತು ಎಂದು భాచిసిడాళు. ವಿಧವೆಯಾದ ನಾನು ಗಂಡಸರೂಡನೆ ಮಾತನಾಡಬಾರದಿತ್ತು. - ಆದರೆ ಹಾಗೆ ತಾನು ಮಾತನಾಡಿದ್ದು ನಿಜವಾಗಿಯೂ ದೊಡ್ಡ ತಪ್ಪೆ? ಒಂದು ಮನುಷ್ಯನ ಜೀವ ಇನ್ನೊಂದು ಮನುಷ್ಯ ಜೀವದೊಡನೆ ಮಾತನಾಡುವುದೂ ತಪ್ಪೆ? ಮಿನೂ ಬುಟ್ಟಿಗ್ಗಿತು....ಚಕ್ಕಂದ ಸರಸ ಸಲ್ಲಾಪ-ಪಾಪ, ರೌರವ ನರಕ... ಅಮ್ಮಿ ಬಾವಿ ನೀರು ಸೇದಿ ಬಟ್ಟೆ ಒಗೆಯುತ್ತಲೆ ಇದ್ದಳು. ಧಿಮಿಗುಡುತ್ತಿದ್ದ ಮೆದುಳಿ ನಿಂದ ನೂರು ಯೋಚನೆಗಳು ಹೊರಹೊಮುತ್ತಲೆ ಇದ್ದುವು. .ನಾರಾಯಣರಾಯರೊಡನೆ ಎಂತಹ ಸಂಬಂಧ ತನ್ನದು ಹಾಗಾದರೆ? ಅವರು ತೋರಿದ ಸಹಾನುಭೂತಿಯನ್ನು ತಾನು ಸ್ವೀಕರಿಸಿದ್ದು ತಪ್ಪೆ? ದೇವಸಾನದ ಆ ಪಾರುಪತ್ಯಗಾರರು–

ವಿಶಾಲವಾದ ಹಣೆ, ಮುಖದ ಅಂದವಾದ ನಿಲುವಿಗೆ ಒಪ್ಪುತ್ತಿದ್ದ ಪಿಳ್ಳಂಜುಟ್ಟು ದೃಢಕಾಯ, ಆ ಕಣ್ಣುಗಳಲ್ಲಿ ಸದಾಕಾಲವೂ ಇರುತ್ತಿದ್ದ ತಿಳಿವಳಿಕೆಯ ನೋಟ, ತುಟಿಗಳ ಮೇಲೆ

ಚಿಮ್ಮುಲು ಸಿದ್ದವಾಗಿ ನಿಂತಿದ್ದ ಕುಡಿನಗೆ...ವಯಸ್ಸಿನಲ್ಲಿ ತನಗಿಂತ ದೊಡ್ಡವರು. ಮದುವೆ ಯಾಗಿತ್ತು ಅವರಿಗೆ. ಮಕ್ಕಳಿದ್ದರು. ಕೆಲವು ವರ್ಷಗಳ ಹಿಂದೊಮ್ಮೆ ಅಜ್ಜಿ ಅವರನ್ನೂ ದೂರದಿಂದ ತೋರಿಸಿಕೊಟ್ಟಿದ್ದಳು. " ಅಮ್ಮಿ, ಅವರೇ ನೋಡು..ಹೊಸ ಪಾರುಪತ್ಯಗಾರು ಬಹಳ ಕಟ್ಟು ನಿಟ್ಟು. ಇನ್ನೂ ಚಿಕ್ಕ ವಯಸ್ಸು ...ಇಬ್ಬರು ಮಕ್ಳಿದಾರೆ." ತನಗೆ ಸಂಬಂಧವಿಲ್ಲದ ಯಾವುದೊ ವಿಷಯವೆಂಬಂತೆ ಅಮ್ಮಿ ಆಗ ಆ ಮಾತಿಗೆ ಕಿವಿ ಗೊಟ್ಟಿದ್ದಳು. ಆದರೂ ಎಲ್ಲೂ ಆಳ ಆಳದಲ್ಲಿ ಉಳಿದು ಹೋಗಿದ್ದ ಆ ಮಾತು ಈಗ ನೆನಪಾಗುತ್ತಿತ್ತು . —ಈಗ ಅವರಿಗೆ ಇನ್ನಷ್ಟು ಮಕ್ಕಳಿರಬಹುದಲ್ಲ? ಎಂಥ ಯೋಚನೆ!–ಎನ್ನುತ್ತ, ಬಟ್ಟೆಯನ್ನು ಬಲವಾಗಿ ಟಪ ಟಪನೆ ಅಮ್ಮಿ ಕಲ್ಲಿನ ಮೇಲೆ ಹೂಡೆದಳು. ...' ನಿನಗೇನಾದರೂ ತೊಂದರೆಯಾದರೆ ಬಂದು ಹೇಳಮ್ಮ–ಎಂದಿದ್ದರು ನಾರಾಯಣರಾಯರು. ಆ ಮಾತು ಕೇಳಿದಾಗ ತನಗೆ ಸಮಾಧಾನವಾಗಿತು, ತೊಂದರೆ-ಅಂದರೆ ಎಂಥದು? ಈ ಜನ ತನ್ನ ಬಗೆಗೆ ಕೆಟ್ಟ ಕೆಟ್ಟ ಮಾತುಗಳನಾಡುವುದು ತೊಂದರೆಯೆ ? ಸ್ವಾಮಿ ಮಠದ ದೂತನನ್ನು ಕಳುಹಿರುವುದು ತೊಂದರೆಯೆ ? ಆ ತೊಂದರೆಗಾಗಿ ನಾರಾಯಣರಾಯರು ಏನಾದರೂ ಪರಿಹಾರ ತೋರಬಹುದೆ? ಅವರು ತನಗೆ ರಕ್ಷಣೆ ಕೊಡುವರೆ? ತನ್ನಿಂದಾಗಿ ಶಾಸ್ತ್ರಿ ದಂಪತಿಗೆ ಎಷ್ಟೋ ತೊಂದರೆ! ಅದನ್ನು ಹೋಗಲಾಡಿಸುವುದು ಇವರಿಗೆ