ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅವಯವ

ವಿಕಿಸೋರ್ಸ್ದಿಂದ

ವೈದ್ಯವಿಜ್ಞಾನದ ಪ್ರಕಾರ ದೇಹದ ಮೇಲುಭಾಗದಲ್ಲಿರುವ ಹೆಗಲು, ತೋಳು, ಮುಂದೋಳು, ಮಣಿಕಟ್ಟು, ಕೈ (ಹಸ್ತ-ಬೆರಳುಗಳು ಅಂಗೈ ಕೂಡಿರುವ ಭಾಗ) ಮತ್ತು ದೇಹದ ಕೆಳಭಾಗದಲ್ಲಿರುವ ಸೊಂಟಭಾಗ, ತೊಡೆ, ಕಾಲು, (ಮೊಣಕಾಲು ಹರಡುಗಳ ನಡುವಣ ಭಾಗ), ಹರಡು ಪಾದ- ಇದಕ್ಕೆ ಈ ಹೆಸರಿದೆ. ಇವು ಚಲನಾಂಗಗಳು.

ಆಡುಮಾತಿನಲ್ಲಿ ಕೈಕಾಲುಗಳನ್ನು ಅವಯವ ಎನ್ನುತ್ತೇವೆ. ಅವಯವ ಪದಕ್ಕೆ ಬೇರೆ ಅರ್ಥಗಳೂ ಇವೆ: ಯಾವುದಾದರೂ ಒಂದು ವಸ್ತುವಿನ ಕೊನೆಯ ಭಾಗ; ಒಂದು ರಚನೆಯುಳ್ಳ ಅವಯವದಂಥ ಭಾಗ; ಮರದ ಮುಖ್ಯ ಕೊಂಬೆ; ಪರ್ವತ ಸಾಲಿನ ಒಂದು ಚಾಚು; ಯಾವುದಾದರೂ ಒಂದು ಸಾಧನ ಸಲಕರಣೆಯ ಕೈಕಾಲುಗಳಂಥ ಭಾಗ ಇತ್ಯಾದಿ.