ಪುಟ:Mysore-University-Encyclopaedia-Vol-1-Part-1.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಗ್ನಿ ಉದರದ ನೆಲಗಪ್ಪೆ : ದ್ವಿಚರವರ್ಗದ ಒಂದು ಜಾತಿ ಕಪ್ಪೆ (ಫೈರ್ ಬೆಲ್ಲೀಡ್ ಟೋಡ್). ಇದರ ಇನ್ನೊಂದು ಹೆಸರು ಬಾಂಬಿನ. ಇದು ಕೊಳಗಳಲ್ಲಿ ವಾಸಿಸುವ ಮಂದಬುದ್ಧಿಯ, ಬೂದುಬಣ್ಣದ ಪ್ರಾಣಿ. ತನ್ನ ಸುತ್ತಣ ಸನ್ನಿವೇಶದ ನೀರವತೆ ಭಂಗವಾದಾಗ, ಇದು ದೇಹದ ತಳಭಾಗವನ್ನು ಮೇಲೆ ಮಾಡಿ ನೀರಿನಲ್ಲಿ ನಿಶ್ಚೇಷ್ಟಿತವಾಗಿ ಮಲಗುತ್ತದೆ. ಆಗ ಇದರ ಹೊಟ್ಟೆಯ ಭಾಗದಲ್ಲಿನ ಕಿತ್ತಳೆ ಬಣ್ಣವುಳ್ಳ ಮಚ್ಚೆಗಳು ಬೆಂಕಿಯಂತೆ ಕಾಣುತ್ತವೆ. ಈ ಜಾತಿಯ ಸಣ್ಣ ಕಪ್ಪೆಗಳು ಕೆಲವೊಮ್ಮೆ ತಮ್ಮ ಶತ್ರುಗಳಿಂದ ತಪ್ಪಿಸಿಕೊಳ್ಳಲು ಅಲುಗಾಡದೆ ಸುಮ್ಮನೆ ಬಿದ್ದಿರುತ್ತವೆ. ಶತ್ರುಗಳ ದೃಷ್ಟಿಗೆ ಬೀಳದಿರಲು ಸುಳಿವು ಗೊತ್ತಾದೊಡನೆ ಬೆನ್ನಿನ ಭಾಗವನ್ನು ತೋರಿಸದೆ, ಬೆಂಕಿಯಂತೆ ಹೊಳೆಯುವ ಹೊಟ್ಟೆಯ ಭಾಗವನ್ನು ಮೇಲೆ ಮಾಡಿ ಸುಲಭವಾಗಿ ಆಪತ್ತಿನಿಂದ ಪಾರಾಗುತ್ತವೆ. ಆದರೆ ಇದು ಕೇವಲ ಬೆದರಿಸುವ ನಾಟಕವಲ್ಲ. ನಿಜಕ್ಕೂ ಉದರದ ಚರ್ಮ ಒಂದು ಬಗೆಯ ವಿಷ ಪದಾರ್ಥವನ್ನು ಸ್ರವಿಸುತ್ತದೆ. ಇದು ಬಹಳ ಖಾರವೆಂದು ಅನುಭವದಿಂದ ತಿಳಿದಿರುವ ಶತ್ರು ಪ್ರಾಣಿಗಳು ಕಪ್ಪೆಯ ಹತ್ತಿರ ಸುಳಿಯುವುದಿಲ್ಲ. ರಾತ್ರಿವೇಳೆಯಲ್ಲಿ ಈ ಕಪ್ಪೆ ಬಹಳ ಚುರುಕಾಗಿರುತ್ತದೆ. ಹುಳಹುಪ್ಪಟೆಗಳನ್ನು ತಿನ್ನಲು ಆಗಾಗ್ಗೆ ನೀರನ್ನು ಬಿಟ್ಟು ದಡದ ಮೇಲೆ ಬರುವುದಲ್ಲದೆ ಮಳೆಗಾಲದಲ್ಲಿ ಇದು ಹತ್ತಿರದ ಮೆದುಮಣ್ಣಿನಲ್ಲಿ ಗೂಡು ಮಾಡಿಕೊಂಡು ವಾಸಿಸುತ್ತದೆ. ಏಷ್ಯದ ಈ ಜಾತಿಯ ಕಪ್ಪೆ 7.5 ಸೆಂಮೀ ಉದ್ದವಿದ್ದು ಹೊಟ್ಟೆಯ ತಳಭಾಗದಲ್ಲಿ ಕಿತ್ತಳೆ ಬಣ್ಣವನ್ನು ಹೊಂದಿದೆ. ಸಂತಾನೋತ್ಪತ್ತಿ ಕಾಲದಲ್ಲಿ ಇದರ ಮುಂಗಾಲುಗಳ ಒಳ ಭಾಗಗಳಲ್ಲಿ ಕಪ್ಪನೆಯ ಒರಟು ಸಿಂಬಿಗಳು ಕಾಣಿಸಿಕೊಳ್ಳುತ್ತದೆ. ಗಂಡು ಕಪ್ಪೆ ಹೆಣ್ಣು ಕಪ್ಪೆಯನ್ನು ಎಡೆಬಿಡದೆ ಕರೆಯುತ್ತಿರುತ್ತವೆ. ವಸಂತ ಮತ್ತು ಗ್ರೀಷ್ಮಋತುಗಳು ಸಂತಾನೋತ್ಪತ್ತಿಯ ಕಾಲ. (ಎಚ್.ಎಸ್.ಎನ್.) ಅಗ್ನಿಕುಲ : ಪ್ರತೀಹಾರ ಸಾಮ್ರಾಜ್ಯ ನಾಶವಾದ ಮೇಲೆ ಪ್ರಾಬಲ್ಯಕ್ಕೆ ಬಂದ ಪರಮಾರರು (ಮಾಲ್ವ) ಚೌಳುಕ್ಯರು (ಗುಜರಾತ್) ಮತ್ತು ಚಾಹಮಾನರು (ರಾಜಪುತ್ರಸ್ಥಾನ)- ಇವರು ಮತ್ತು ಪ್ರತೀಹಾರರು ಅಬು ಪರ್ವತದ ಮೇಲಿದ್ದ ಹೋಮಾಗ್ನಿಕುಂಡದಿಂದ ಹುಟ್ಟಿ ಬಂದವರಾಗಿದ್ದು ಅಗ್ನಿಕುಲಕ್ಕೆ ಸೇರಿದವರು ಎಂಬ ಐತಿಹ್ಯ ಒಂದಿದೆ. ಇವರೆಲ್ಲ ಮೂಲತಃ ಪರಕೀಯರಾಗಿದ್ದು ಅಗ್ನಿ ಸಂಸ್ಕಾರವಾದ ಮೇಲೆ ಹಿಂದೂಗಳಾದರೆಂಬುದಕ್ಕೆ ಆಧಾರ, ಚಾಂದ್ ಬರದಾಯಿ ಕವಿಯ ಪೃಥ್ವೀರಾಜ್ ರಾಸೋ, ಪದ್ಮಗುಪ್ತನ ನವಶಶಾಂಕಚರಿತ ಮತ್ತು ಇತರ ಕೆಲವು ಪ್ರಶಸ್ತಿಗಳು. ಆದರೆ ಪೃಥ್ವೀರಾಜ್ ರಾಸೋದಲ್ಲಿ ಅನೇಕ ತಪ್ಪುಗಳಿವೆ. ಅಗ್ನಿಕುಲದ ಕತೆಯನ್ನು ಚಾಂದ್ ಬರದಾಯಿ ಬರೆದಿರಲಾರ, ಅದು ಇತ್ತೀಚೆಗೆ ಸೇರಿಸಿದ್ದು ಎಂಬ ಅಭಿಪ್ರಾಯ ಬಲಗೊಂಡಿದೆ. ಅವರು ಪರಕೀಯರು ಎಂಬ ಖಚಿತವಾದ ಉಲ್ಲೇಖ ಪೃಥ್ವೀರಾಜ್ ರಾಸೋದಲ್ಲೇ ಎಲ್ಲೂ ಇಲ್ಲವಾಗಿ ಇತ್ತೀಚೆಗೆ ಈ ಅಭಿಪ್ರಾಯ ತಿರಸ್ಕøತವಾಗಿದೆ. (ಎ.ಎಂ.) ಅಗ್ನಿನಿರ್ವಾಪ ಆದೇಶ : ಸಾಮಾನ್ಯವಾಗಿ ಬೇಸಗೆಯಲ್ಲಿ ಸಂಜೆಯಾಗುತ್ತಲೂ ಚಳಿಗಾಲದಲ್ಲಿ ರಾತ್ರಿ 8 ಗಂಟೆಗೆ ಸರಿಯಾಗಿ ಎಲ್ಲರೂ ಬೆಂಕಿ ಹಾಗೂ ದೀಪವನ್ನು ನಂದಿಸಬೇಕೆಂದು ಕಟ್ಟಳೆ ವಿಧಿಸುತ್ತಿದ್ದ ಪೂರ್ವಕಾಲದ ಕಾನೂನು (ಕಫ್ರ್ಯೂ). ನಂದಿಸುವುದಕ್ಕೆ ಸೂಚನೆ ಕೊಡಲು ಗಂಟೆ ಬಾರಿಸುತ್ತಿದ್ದರು. ಈ ಪದ್ಧತಿ ಮೊದಲು ಯುರೋಪಿನಲ್ಲಿ ಬಳಕೆಯಲ್ಲಿದ್ದು ಅನಂತರ ವಿಲಿಯಂ ದಿ ಕಾಂಕರರ್ ಎಂಬ ಅಂದಿನ ಇಂಗ್ಲೆಂಡಿನ ದೊರೆ ಈ ಬಗ್ಗೆ ಒಂದು ಆಜ್ಞೆ ಹೊರಡಿಸಿದ್ದ. ಇದಕ್ಕೆ ಮೊದಲೇ ಈ ರೀತಿಯ ಪದ್ಧತಿ ಇಂಗ್ಲೆಂಡಿನ ಒಂದನೆಯ ಹೆನ್ರಿ ತನ್ನ ತಂದೆ ಈ ವಿಷಯದಲ್ಲಿ ಮಾಡಿದ ಶಾಸನವನ್ನು 1101ರಲ್ಲಿ ರದ್ದುಮಾಡಿದನೆಂದು ತಿಳಿದುಬಂದಿದೆ. ಇಂದಿಗೂ ಹಲವೆಡೆ ಜಾರಿಯಲ್ಲಿರುವ ಈ ಪದ್ಧತಿಯ ಉದ್ದೇಶ ಬೆಂಕಿಯಿಂದ ಉಂಟಾಗುವ ಅಪಘಾತಗಳನ್ನು ತಪ್ಪಿಸುವುದೇ ಹೊರತು, ಕರಾಳಶಾಸನದಿಂದ ಜನರನ್ನು ಹಿಂಸಿಸುವುದಲ್ಲ. ಈಗಲೂ ಇಂಗ್ಲೆಂಡಿನಲ್ಲಿ ಲಿಂಕನ್ಸ್ ಇನ್ ಎಂಬ ಸ್ಥಳದಲ್ಲೂ ಅಮೆರಿಕದ ಬಹುಭಾಗದಲ್ಲೂ (ಉದಾ: ಯೂಟಾ) ಇದು ಜಾರಿಯಲ್ಲಿದೆ. (ಕೆ.ವಿ.ವಿ.) ಅಗ್ನಿಪರ್ವತ : ಭೂಮಿಯ ಅಂತರಾಳದಿಂದ ಕುದಿಯುತ್ತಿರುವ ಲಾವಾರಸವನ್ನು ಹೊರಕ್ಕೆ ಉಗುಳುವ ಪರ್ವತಗಳು. ಇವನ್ನು ಜ್ವಾಲಾಮುಖಿಗಳೆಂದೂ ಕರೆಯುತ್ತಾರೆ. ವಲ್ಕೆನೋ ಎಂಬ ಹೆಸರು ಬಂದದ್ದು ಸಿಸಿಲಿ ದ್ವೀಪದ ಉತ್ತರಕ್ಕಿರುವ ವಲ್‍ಕೆನೋ ಎಂಬ ದ್ವೀಪದಿಂದ. ಪ್ಲೇಟೊ, ಅರಿಸ್ಟಾಟಲ್, ಸ್ಟ್ರಾಬೊ ಮೊದಲಾದವರು ಇವುಗಳ ಚಟುವಟಿಕೆಗಳನ್ನು ವರ್ಣಿಸಿದ್ದಾರೆ. ಆದರೆ ಮೊತ್ತಮೊದಲ ವೈಜ್ಞಾನಿಕ ವರ್ಣನೆ ಸಿಕ್ಕುವುದು ಪ್ರ.ಶ. 79ರಲ್ಲಿಯ ಇಟಲಿಯ ಕಿರಿಯ ಪ್ಲಿನಿ ಎಂಬ ಗ್ರಂಥದಲ್ಲಿ. ಆತ ಪ್ರಕೃತಿಯ ಉಪಾಸಕ. ಇಟಲಿ ದೇಶದ ಹರ್ಕುಲೇನಿಯಂ ಎಂಬ ಪ್ರಕೃತಿ ವೀಕ್ಷಕನ ಮತ್ತು ಪಾಂಪೆ ನಗರಗಳನ್ನು ನೆಲಸಮ ಮಾಡಿದ ವೆಸೂವಿಯಸ್ ಅಗ್ನಿಪರ್ವತ ಲಾವಾವನ್ನು ಕಾರುತ್ತಿರುವಾಗ ಬಹು ಸಮೀಪದ ದೃಶ್ಯವನ್ನು ನೋಡಲು ಹೋಗಿ ಅದರಿಂದ ಹೊರಹೊರಟ ವಿಷವಾಯುವಿನಿಂದ ಮೃತಪಟ್ಟ. ವೆಸೂವಿಯಸ್ ಪರ್ವತದ ಚಟುವಟಿಕೆ, ಹೊರಬಂದ ಪದಾರ್ಥಗಳ ವಿವರ ಇತ್ಯಾದಿಗಳನ್ನು ಆತ ಶಾಸ್ತ್ರೀಯವಾಗಿ ವರ್ಣಿಸಿದ್ದಾನೆ. ಅನಂತರ, ದೀರ್ಘಕಾಲ ಈ ಶಾಸ್ತ್ರಭಾಗ ಬೆಳೆಯಲಿಲ್ಲ. 1774ರಲ್ಲಿ ಸರ್ ವಿಲಿಯಂ ಹ್ಯಾಮಿಲ್‍ಟನ್ ಕಣ್ಣಾರೆ ಕಂಡು ಅನುಭವಿಸಿದ ವೆಸೂವಿಯಸ್ ಮತ್ತು ಎಟ್ನಾ ಅಗ್ನಿಪರ್ವತಗಳ ದೃಶ್ಯಗಳನ್ನು ಚಿತ್ರಿಸಿದ್ದಾನೆ. ಅಲ್ಲಿಂದ ಈಚೆಗೆ 1820ರವರೆಗೆ ಹಲವು ವಿಜ್ಞಾನಶಾಸ್ತ್ರಜ್ಞರು ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಭೂಗೋಳದ ಮೂರರಲ್ಲೊಂದು ಪಾಲು ಭೂಭಾಗ, ಮಿಕ್ಕಪಾಲು ಜಲಭಾಗ. ಸಾಮಾನ್ಯವಾಗಿ ಭೂಭಾಗವೆಲ್ಲ ಮಣ್ಣು ಶಿಲೆಗಳಿಂದ ಕೂಡಿ ಶಿಲಾಮಂಡಲವೆಂದು ಹೆಸರು ಪಡೆದಿದೆ. ಇದರ ಮೇಲುಭಾಗದಿಂದ ತಳಭಾಗಕ್ಕೆ ಹೋದಂತೆಲ್ಲ ಉಷ್ಣತೆ ಸಾಧಾರಣವಾಗಿ 60 ಅಡಿಗೆ 1º ಯಂತೆ ಹೆಚ್ಚುತ್ತ ಹೋಗಿ, ತಳಭಾಗದಲ್ಲಿ ಅತೀವವಾದ ಉಷ್ಣತೆ ಕಂಡು ಬರುತ್ತದೆ. ಹೀಗೆ ಹೆಚ್ಚುವ ಉಷ್ಣತೆಗೆ ಎರಡು ಕಾರಣಗಳುಂಟು. ಭೂಮಿ ಅನಿಲರೂಪದಿಂದ ದ್ರವರೂಪಕ್ಕೆ ಕುಗ್ಗಿ, ಅನಂತರ ಘನೀಭೂತವಾಗಿ, ಗೋಲವಾಗಿರುವುದರಿಂದ ಅತಿಯಾದ ಉಷ್ಣ ಅದರ ಅಂತರಾಳದಲ್ಲಿ ಈಗಲೂ ಅಡಗಿದೆ. ಇದೇ ಮೂಲೋಷ್ಣ. ಜೊತೆಗೆ ಅಂತರಾಳ ದಲ್ಲಿ ಶಿಲಾಸಮೂಹಗಳೊಡನೆ ಥೋರಿಯಂ, ಯುರೇನಿಯಂ, ಹೀಲಿಯಂ ಇತ್ಯಾದಿ ವಿಕಿರಣಪಟು ಖನಿಜಗಳು ಸಂಗ್ರಹವಾಗಿರುತ್ತವೆ. ಇವುಗಳ ಶಾಖ ಮೂಲೋಷ್ಣದ ಜೊತೆಗೆ ಸೇರಿ, ಭೂಮಿಯ ಅಂತ ರಾಳದಲ್ಲಿ ಹುದುಗಿರುವ ಅತಿಯಾದ ಉಷ್ಣತೆಗೆ ಪೂರಕವಾಗುತ್ತದೆ. ಘನೀಭೂತವಾದ ಶಿಲಾ ಸಮೂಹ, ಸಂಗ್ರಹವಾದ ಉಷ್ಣತೆಯಿಂದ ದ್ರವ ರೂಪಕ್ಕೆ ಪರಿವರ್ತನೆಯಾಗಿ, ಒತ್ತಡದ ಆಧಿಕ್ಯ ಮಿತಿಮೀರಿ ದಾಗ ಭೂಮಿಯ ಪದರಗಳನ್ನು ಭೇದಿಸಿಕೊಂಡು ಹೊರಗೆ ಬರುತ್ತದೆ. ಇದೇ ಶಿಲಾರಸ (ಲಾವಾ), ಜೊತೆಗೆ ಶಿಲೆ, ಮಣ್ಣು, ಅನಿಲಗಳು ಸಹ ಹೊರಬರುತ್ತವೆ. ಹೀಗೆ ಭೂಮಿಯ ಆಳಭಾಗದಿಂದ ದೊಡ್ಡ ಬಿರುಕುಗಳ ಮೂಲಕ, ಕಾದು ಕರಗಿರುವ ಪದಾರ್ಥಗಳನ್ನು ಉಗುಳುವ ಪರ್ವತಗಳೇ ಅಗ್ನಿಪರ್ವತಗಳು. ಅಗ್ನಿಪರ್ವತ ಕೇವಲ ಕೆಲವು ಮೀಟರುಗಳ ಅಡ್ಡಳತೆಯುಳ್ಳ ಒಂದು ಸಣ್ಣ ದಿಬ್ಬವಾಗಿರ ಬಹುದು ಅಥವಾ ಸಮುದ್ರಮಟ್ಟಕ್ಕೆ 6,000ಮೀ. ಮೇಲ್ಮಟ್ಟದಲ್ಲಿರುವ ದೊಡ್ಡ ಪರ್ವತವಾಗಿರ ಬಹುದು (ಉದಾ: ಆಫ್ರಿಕದ ಕಿಲಿಮಂಜಾರೊ). ಸಾಮಾನ್ಯವಾಗಿ ಇದು ಬುಗುರಿಯಾಕಾರ ದಲ್ಲಿರುತ್ತದೆ. ಶಿಖರದಲ್ಲಿ ಕಂಡುಬರುವ ಹಳ್ಳ ಪ್ರದೇಶವೇ ಅಗ್ನಿಪರ್ವತದ ಬಾಯಿ ಅಥವಾ ಕುಂಡ (ಕ್ರೇಟರ್). ಭೂಅಂತರಾಳದಿಂದ ಪದಾರ್ಥಗಳೆಲ್ಲವೂ ಹೊರಬರುವುದು ಮುಖ್ಯವಾಗಿ ಈ ಕುಂಡದ ಮೂಲಕವೇ. ಒತ್ತಡ ಬಲು ಹೆಚ್ಚಾದಾಗ, ದ್ರವಪದಾರ್ಥಗಳು ಪ್ರಧಾನದ್ವಾರದಿಂದ ಹೊರಬರುತ್ತವೆ. ಇದಲ್ಲದೆ ಶಿಲಾರಸ ಅಂತಸ್ಸರಣವಾಗಿ ನೇರವಾಗಿಯೋ (ಡೈಕ್) ಸಮತಲವಾಗಿಯೋ (ಸಿಲ್) ಮರದ ಕೊಂಬೆಗಳೋಪಾದಿಯಲ್ಲಿ ಅನೇಕ ಬೀಳುಬಿರುಕುಗಳಲ್ಲಿ ಹರಡಿಕೊಳ್ಳುತ್ತದೆ. ಈ ಕಾರ್ಯಚಟುವಟಿಕೆಯ ದೃಷ್ಟಿಯಿಂದ ಅಗ್ನಿಪರ್ವತಗಳನ್ನು ಮೂರು ಬಗೆಯಾಗಿ ವಿಂಗಡಿಸ ಬಹುದು. ಶಿಲಾರಸಾದಿಗಳನ್ನು ಉಗುಳಿ, ಹಾವಳಿ ಮಾಡುತ್ತ ಸದಾ ಚಟುವಟಿಕೆ ಯಿಂದಿರುವುವು ಜಾಗೃತ (ಆ್ಯಕ್ಟಿವ್) ಜ್ವಾಲಾಮುಖಿಗಳು. ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವುವು ಸುಪ್ತ(ಡಾರ್‍ಮೆಂಟ್). ಜ್ವಾಲಾಮುಖಿಗಳು ಚಟುವಟಿಕೆಗಳೆಲ್ಲವನ್ನೂ ಮುಗಿಸಿಕೊಂಡು, ಪೂರ್ಣವಾಗಿ ನಿಶ್ಯಬ್ದವಾಗಿರುವುವು ಲುಪ್ತ (ಎಕ್ಸ್‍ಟಿಂಕ್ಟ್) ಜ್ವಾಲಾಮುಖಿಗಳು. ಸಾಮಾನ್ಯವಾಗಿ ಅಗ್ನಿಪರ್ವತಗಳು ಕೇವಲ ಶಿಲಾರಸಾದಿಗಳನ್ನೇ ಹೊರಸೂಸದೆ, ಬಿಸಿನೀರನ್ನೋ ಕಾದ ನುಣುಪಾದ ಬರಿಯ ಮಣ್ಣನ್ನೋ ಹೊರ ಚಿಮ್ಮಬಹುದು. ಅಂಥವನ್ನು ಬಿಸಿನೀರಿನ ಊಟೆಗಳೆಂದೂ (ಗೈಸ಼ರ್), ಮೃತ್ತಿಕಾಗ್ನಿಪರ್ವತ ಗಳೆಂದೂ ಕರೆಯುತ್ತಾರೆ. ಕೆಲವು ಅಗ್ನಿ ಪರ್ವತಗಳು ಆವಿ, ಇಂಗಾಲಾಮ್ಲ, ಜಲಜನಕ ಮುಂತಾದ ಅನಿಲಗಳನ್ನು ಮಾತ್ರ ಹೊರಸೂಸುವುದುಂಟು. ಅಂಥವು ಅನಿಲರೂಪದ ಅಗ್ನಿಪರ್ವತಗಳು. ಬಿಸಿನೀರಿನ ಊಟೆಗಳಿಗೂ ಅನಿಲರೂಪದ ಅಗ್ನಿಪರ್ವತಗಳಿಗೂ ನಿಕಟವೂ ಸಹಜವೂ ಆದ ಸಂಬಂಧವಿರುತ್ತದೆ. ಬೇಸಿಗೆ ಕಾಲದಲ್ಲಿ ಜಲಾಂಶ