ಪುಟ:Banashankari.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಬನಶಂಕರಿ ೩೪ ಕಾವೇರಿ ಶಾನುಭೋಗರ ಮಗಳು. ಅಮ್ಮಿಗಿಂತ ವಯಸ್ಸಿನಲ್ಲಿ ಒಂದು ವರ್ಷ ಚಿಕ್ಕವಳು. ಅಮ್ಮಿಯ ಮದುವೆಗೆ ಸ್ವಲ್ಪ ಮುಂಚಿತವಾಗಿ ಅವಳ ಮದುವೆಯಾಗಿತ್ತು, ಕೈಹಿಡಿದವನು ಮನೆಯಳಿಯನೇ. ಋತುಮತಿಯಾದ ಕಾವೇರಿ ತಾಯ್ಮನೆಯಲ್ಲೆ ಗೃಹಿಣಿಯಾಗಿದ್ದಳು. ಅಲ್ಲಿ ಅವಳು ಸುಖಿ. ಅಣ್ಣ ರಾಮಕೃಷ್ಣ ನೊಂದ ಸ್ವರದಲ್ಲಿ ಹೇಳಿದ:

“ಇದೇನೆ ಈ ಅಳುಮೋರೆ ಅಮ್ಮಿ? ಮುಟ್ಟಿದರೆ ಸಾಕು ಕಣ್ಣೀರು ಸೋರೋ ಹಾಗಿದೆಯಲ್ಲೇ...ನೋಡಮ್ಮ. ಇದೊಂದೂ ಚೆನಾಗಿಲ್ಲ. ಬಂದೋರ ಮುಂದೆಲ್ಲಾ ನೀನು ಅಳ್ತಕೂತರೆ ಸಹಿಸೋಕಾಗಲ್ಲ ನನ್ನಿಂದ.

" ಇಲ್ಲಣ್ಣ, ಆಳೋದಿಲ್ಲ."

*ಜಾಣೆ, ಯಾಕಳ್ತಾಳೆ... ಅತ್ತರೇನು, ಹೋದ ಭಾಗ್ಯ ವಾಪಸು ಬರುತ್ಯೆ?"

-ಅಜ್ಜಿಯ ಆ ಮಾತು ಪೂರೆಸುವುದರೊಳಗೇ ಅಮ್ಮಿಯ ಕೆನ್ನೆಗಳ ಮೇಲೆ ಕಣ್ಣಿರಧಾರೆಗಳು ಕ್ಷಣಕಾಲ ಮೂಡಿ ಮಾಯವಾದವು.ನಿಟ್ಟುಸಿರುಬಿಟ್ಟು ಅಮ್ಮಿ ಚೇತರಿಸಿಕೊಂಡಳು. ಆಗಲೇ, ಗಾಡಿ ಇಳಿದುಬಿಟ್ಟಿದ್ದ ಜಾಗಕ್ಕೆ ಹೋಗಿಬಂದ ಅಮ್ಮಿಯ ಮಾವ, "ಇವತ್ತು ನಾಳೆ ಮಳೆ ಬರೋದನ್ನೇ ನೆಲ ಕಾದು ನಿಂತ ಹಾಗಿದೆ," ಎಂದರು. “ಹೌದು ಮಾವಯ್ಯ, ಊರಹೊರಗಿನ ಕೆರೆಯ ನೀರು ಬತ್ತಿಯೇ ಹೋಗಿದೆ. ಹೊಲೆಯರು ಗೋಳು ಕೇಳಬೇಡಿ, ಎಂದು ರಾಮಕ್ರಷ್ಣ ಹೇಳಿದ. ಆಮ್ಮಿ ಸಾನಕ್ಕಿಳಿಯಬೇಕು ಎನ್ನುತ್ತಿದ್ದಾಗ ಕಾವೇರಿ ಬಂದಳು.ಬಾಲ್ಯ ಒಡನಾಟಗಳು ಕಣ್ದಣಿಯ ಒಬ್ಬರನ್ನೆಬ್ಬರು ನೋಡಿದರು. ಅಮ್ಮಿ ಮುಗುಳುನಕ್ಕಳು. ಮೈ ತುಂಬಿದ್ದ ಕಾವೇರಿಯನ್ನಾಕೆ ಹಿಡಿದು ಮುಟ್ಟಿ ದಿಟ್ಟಿಸಿದಳು. “ಚೆನಾಗಿದ್ದೀಯಾ ಕಾವೇರಾ ?" ಎ೦ದಳು.

ಕಾವೇರಿಯ ಬಾಯಿಯಿಂದ ಮಾತು ಸುಲಭವಾಗಿ ಹೊರಡಲಿಲ್ಲ, ಗೆಳತಿಯ ದುಃಖದಲ್ಲಿ ಸಹಭಾಗಿನಿಯಾಗಲು ಬಂದಿದ್ದಾಳಾಕೆ. ಪ್ರಯಾಸದಿಂದ, ಉಗುಳು ನುಂಗುತ್ತ, ಅವಳೆಂದಳು.
"ಚನ್ನಾಗದ್ದಿನಿ ಆಮ್ಮಿ"

"ಆ ಮಾತಿನ ಜೊತೆಯಲ್ಲೆ, 'ನೀನು ಹೇಗಿದ್ದಿಯಾ? 'ಎಂದು ಅವಳು ಕೇಳಲಿಲ್ಲ ಹಾಗೆ ಕೇಳಬೇಕೆಂದು ತೋರಲಿಲ್ಲ ಆಕೆಗೆ.

ಆಮ್ಮಿಯ ಮಾವ ಶಾನುಭೋಗರ ಮನೆಗೆ ಹೋಗಿ ಬಂದರು. ಮರುದಿನ ದಿಬ್ಬಣ ಹೊರಡಲು ಸಿದ್ಧತೆಗಳು ನಡೆದುವು ಬಟ್ಟಿ ಬರೆಸಾಮಾನುಗಳನ್ನು ಉತ್ಸುಕ್ಷತೆಯಿಂದ ಎಲ್ಲಾರೂ ಜೋಡಿಸಿಟ್ಟರು... ಹಿರಿಯಣ್ಣನ ಮರಣದ ಬಳಿಕ ತನ್ನ ತುಂಟತನವೆಲ್ಲವನ್ನೂ

ಮರೆತ್ತಿದ್ದ ರಂಗ ಬೆಳಿಗ್ಗೆ ಸ್ವಲ್ಪ ಹೊತ್ತಿರುಗ್ತಾಗ್ಲಿಯೇ ಅಜ್ಜಿಯ ಬೆನ್ನಿಗೆ ಆಂಟಿಕೊಂಡ.ಆಮ್ಮಿ ಎಷ್ಟೋ ಕಾಲದ ಮೇಲೆ ನಗಲು ಮತ್ತೊಮ್ಮೆ ಕಲಿಯುತಾ " ನೀನು ಇಲ್ಲೇ ಇದ್ದಿಡು ರಂಗಣ್ಣ ಅಜ್ಜಿ ಜತೇಲಿ ಇಲ್ಲೇ ಇದ್ಬಡು," ಎ೦ದಳು. ಆಕೆಗೆ ದೊರೆತುದು,ಅಜ್ಜೀನ ನಮ್ಮೂರಿಗೇ ಕರಕೊಂಡು ಹೋಗ್ರೀನಿ " ಎಂಬ ರಂಗನ ಉತ್ತರ.