ಪುಟ:ನಡೆದದ್ದೇ ದಾರಿ.pdf/೪೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಮತ್ತ್ಯಾಕ ಇನ್ನೂ ಇದ್ದಿಲ್ಲ?"-ಮುಚ್ಛಿದ ಬಾಗಿಲ ಕಡೆ ನೂಡುತ್ತಾ ಕೇಳಿದಳು ಶಶಿ.ಧ್ವನಿಯೀರಿಸದೆ,ಪಿಸುಗುಟ್ಟುವ ಹಾಗೆ ನೀಲಾ ಉತ್ತರಿಸಿದಳು,"ಶಿವಮೂರ್ತಿ ಅನ್ಕಲ್ ನೂ ಒಳಗ ಇದ್ದಾರ.ಅವರಿಗೆ ತಾ ಬರೋದು ಮೊದಲು ತಿಳಿಸಿದ್ದಳಂತ ಕಾಣಸ್ತದ.ದಾದರಿನಿಂದ ಇಬ್ರೂ ಕೂಡೇ ಕಾರಿನ್ಯಾಗು ಬಂದ್ರು.ದಣದಾರ ಕಾಣಸ್ತದ.ಮಲಗ್ಯಾರ.ಇನ್ನೂ ಎದ್ದಿಲ್ಲ."

      ಓಹ್....
      ನೀಲಾ ಮತ್ತೆ ಹೇಳಿದಳು,"ಬಂದ ಕೂಡ್ಲೇ ಆಂಟಿ ಹೇಳಿದಳು,ಇನ್ನ ಆಕಿ ನಮ್ಮನ್ನ ಬಿಟ್ಟು,ಮುಂಬೈ ಬಿಟ್ಟು ಎಂದೂ ಎಲ್ಲ್ಯೂ ಹೋಗೋದಿಲ್ಲಾ ಅಂತ."ಆಕೆಗೆ ಬಹಳ ಖುಶಿಯಾಗಿತ್ತು."ಮೂರ್ತಿ ಅನ್ಕಲ್ ನೂ ಅಂದ್ರು ನೀ ಇನ್ನ ಎಲ್ಲ್ಯೂ ಹೋಗಬ್ಯಾಡಾ ಅಂತ.ಅಂಕಲ್ ಹೇಳೀದ್ದು ಆಂಟಿ ಕೇಳೇ ಕೇಳ್ತಾಳ.ಇನ್ನ ಆಕಿ ಎಲ್ಲ್ಯೂ ಹೋಗೂದಿಲ್ಲ ಡಾಕ್ಟರ್."ತನಗಾದ ಸಂತೋಷದಲ್ಲಿ ಶಶಿಯೂ  ಪಾಲ್ಗೊಳ್ಳಲೆಂಬ ಆಸೆಯನ್ನು ಬಹಿರಂಗವಾಗಿಯೇ ಪ್ರಕಟಿಸಿದ್ದಳು ನೀಲಾ.
       -ಶಶಿಗೆ ಸಂತೋಷಕ್ಕಿಂತ ಹೆಚ್ಛಾಗಿ ದಿಗಿಲಾಗಿತ್ತು.ಮುಚ್ಛಿದ್ದ ಬಾಗಿಲತ್ತ ಆಕೆ ಮತ್ತೆ ಮತ್ತೆ ನೋಡಿದಳು.ಹೊರಗೆ ತಾನು ಮಾತಾಡಿದ ಧ್ವನಿ ಕೇಳಿದ್ದರೂ ಒಳಗಿನ ಬಾಗಿಲ ಚಿಲುಕ ತೆಗೆದಿರಲಿಲ್ಲ .ಇದಲ್ಲವೇ ಪ್ರೇಮಿಗಳ ಪುನರ್ಮಿಲನ ಅಂದುಕೊಳ್ಳುತ್ತ ಪೆದ್ದಾಗಿ ಆಕೆ ಸದ್ದಾಗದಂತೆ ಅಲ್ಲಿಂದ ಹೊರಟು ಬಂದಳು.
                                    * * * 
        ಲೋಕಲ್ ಹಿಡಿದು ಡ್ಯೂಟಿಗೆ ಹೊರಟಾಗ ಎಂದಿನಂತೆಯೇ ಇಂದೂ,ಇಂದು ಎಂದಿಗಿಂತ ಒಂದಿಷ್ಟು ಹೆಚ್ಛಾಗಿಯೇ,ಶಶಿಗೆ ಅನಿಸಿತು-ಕಳೆದ ಹದಿನೈದಿಪ್ಪತು ವರ್ಷಗಳಲ್ಲಿ ಈ ಮುಂಬಯಿ ಮಹಾನಗರ  ಎಷ್ಟೊಂದು ಬೆಳೆದಿದೆ,ಅಭಿವ್ರಿದ್ಧಿ  ಹೊಂದಿದೆ,ಜನಸಂಖ್ಯೆ  ಎಷ್ಟು ಹೆಚ್ಛಾಗಿದೆ, ಎಷ್ಟೊಂದು  ಹೊಸ ಉದ್ಯಮಗಳು,ಇನ್ನಿತರ  ಸಂಸ್ಥೆಗಳು ಹುಟ್ಟಿ ಬೆಳೆದಿವೆ.ಏನೆಲ್ಲಾ ಬದಲಾವಣೆಯಾಗಿದೆ,ಆದರೆ  ಇಷ್ಟೆಲ್ಲ ಬದಲಾವಣೆಗಳ  ಮಧ್ಯೆ  ಏನೂ  ವಿಶೇಷ ಬದಲಾಗದೆ ಎಂದಿನಂತೆಯೇ ನೀರಸ ನಿರ್ಜೀವ ಯಾಂತ್ರಿಕ ಬದುಕು ಸಾಗಿಸುತ್ತಿರುವಂತೆ ತೋರುವವುಗಳೆಂದರೆ ಈ ಲೋಕಲ್ ಗಾಡಿಗಳು.ಮುಂಜಾನೆಗಳಲ್ಲಿ ತುಂಬಿ ತುಳುಕಿ, ಮಧ್ಯಾಹ್ನ ತುಸುವೆ ಉಸಿರಾಡಿಸಿ,ಸಂಜೆ ರಾತ್ರಿ-ಮಧ್ಯರಾತ್ರಿಗಳೆಲ್ಲಾ ಉಸಿರುಕಟ್ಟುವಂತೆ ಜನಗಳನ್ನು ತುಂಬಿಕೊಂಡು ಓಡುತ್ತಿದ್ದ ಈ ಗಾದಡಿಗಳು ಎಂದಿನಂತೆಯೇ ಇವೆ. ಎಷ್ಟು ಅವಸರ, ಎಷ್ಟು ಧಾವಂತ, ಎಷ್ಟು ಪರಿಶ್ರಮ ಇವಕ್ಕೆ-ಏನಾದರೂ ಸೊಲ್ಲೆತ್ತದೆ ಎಂದೂ ಗೊಣಗದೆ ಓಡುತ್ತಿರುವುದೇ,ತೀರ ಹಾಳಾಗಿ ನಿರುಪಯೋಗಿಯಾಗಿ ಮೂಲೆ