ಪುಟ:KELAVU SANNA KATHEGALU.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಎಂಬ ಹೆಸರಿನಿಂದ ಇಷ್ಟರಲ್ಲೇ ಹೊರಬರಲಿದೆ. [೧] ಪ್ರಾಯಃ ಒಬ್ಬ ಕಥೆಗಾರನ ಇಷ್ಟೊಂದು ಕಥೆಗಳು ಇರುವ ಸಮಗ್ರ ಗ್ರಂಥ ಕನ್ನಡದಲ್ಲಿ ಇನ್ನೊಂದು ಇರಲಾರದು, ಇಷ್ಟು ಕಥೆಗಳನ್ನು ಬರೆದ ಇನ್ನೊಬ್ಬ ಕಥೆಗಾರ ಯಾರು ಎಂದೂ ಹುಡುಕಬೇಕಾದೀತು. ಸಂಖ್ಯೆಯ ಹೆಚ್ಚಳಕ್ಕಾಗಿ ಹೀಗೆ ಬೀಗಿ ಹೇಳುತ್ತಿಲ್ಲ. ಗುಣ ಗ್ರಾಹಿ ವಸ್ತುನಿಷ್ಠ ವಿಮರ್ಶೆಯ ಮಾನದಂಡದಿಂದಲೂ ನಿರಂಜನರು ನಮ್ಮ ಸತ್ವಯುತ ಬರೆಹಗಾರರೆಂಬುದರಲ್ಲಿ ಎರಡು ಅಭಿಪ್ರಾಯಗಳಿಲ್ಲ.

ಸಮಕಾಲೀನ ಕನ್ನಡ ಸಾಹಿತ್ಯ ವಲಯದಲ್ಲಿ ನಿರಂಜನ ಯಾಕೆ ಮತ್ತು ಹೇಗೆ ಒಬ್ಬ ಮಹತ್ವದ ಲೇಖಕರೆಂಬುದನ್ನು ಪರಿಗ್ರಹಿಸಲು ಈ ಸಂಕಲನದ ಹತ್ತು ಕಥೆಗಳು ದಿಕ್ಕ ಚಿಯಾಗಬಲ್ಲುವು. ಒಂದು ವ್ಯವಸ್ಥಿತ ಸಂಯೋಜನೆ ಯಿಂದಾಗಿ ಈ ಸಂಕಲನಕ್ಕೆ ಚಾರಿತ್ರಿಕ ಸ್ಥಾನವೂ ಪ್ರಾಪ್ತವಾಗಿದೆ. ನಿರಂಜನರು ಬರೆದಿರುವ ಕಥೆಗಳ ಮೊತ್ತ ಹೆಚ್ಚಿದೆಯೆಂದು ಆಗಲೇ ಹೇಳಿದ್ದೇನೆ. ಆ ರಾಶಿ ಯಿಂದ ಕೇವಲ ಹತ್ತು ಕಥೆಗಳನ್ನು ಎತ್ತಿಕೊಳ್ಳುವುದು ಸುಲಭದ ಕೆಲಸವಲ್ಲ. ಆ ಬಗೆಯ ಗುರುತರ ಹೊಣೆಯನ್ನು ಅರಿತು ಈ ಸಂಕಲನವನ್ನು ಸಿದ್ಧ ಪಡಿ ಸಿರುವುದರಿಂದ ಇದಕ್ಕೊಂದು ಪ್ರಾತಿನಿಧಿಕ ಸ್ವರೂಪ ಬಂದಿದೆ. ಕಾಲು ಶತ ಮಾನದ ಕಾಲಮಾನ ಘಟಕದಲ್ಲಿ, 1941 ರಿಂದ 1965ರ ಅವಧಿಯಲ್ಲಿ ಬರೆದ ಕಥೆಗಳಲ್ಲಿ ಹತ್ತನ್ನು ಆರಿಸಲಾಗಿದೆ. ಕಥೆಗಾರರ ಕಥನ ಕಲೆಯ ವಿಕಾಸದ ಮಜಲುಗಳನ್ನು ಅರಿಯಲೂ ಈ ಸಂಕಲನ ನೆರವಿಗೆ ನಿಲ್ಲಬಹುದು.

ತೀರ ಇತ್ತೀಚಿನವರೆಗೂ ನಿರಂಜನರು ಪ್ರವಾಸಿಯಂತೆ ಬಾಳಿದವರು. ಅವರು ಇದ್ದು ಬಂದ .ಸ್ಥಳಗಳು, ಕಾರ್ಯಕ್ಷೇತ್ರ ಭಿನ್ನವಾದುವು. ಇಲ್ಲಿನ ಕಥೆಗಳು ಕೂಡ ವಿವಿಧ ಜಾಗಗಳಲ್ಲಿದ್ದು ಬರೆದಿದ್ದಾರೆಂದು ಅವರ ಟಿಪ್ಪಣಿಗಳಿಂದ ತಿಳಿದುಬರುತ್ತದೆ. ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಮೊದಲಾದ ಊರುಗಳು ಈ ಕಥೆಗಳ ಜನ್ಮ ಸ್ಥಳಗಳು. ಅದರಿಂದ ಭಾಷಾ ಪ್ರಭೇದವೂ ಸೇರಿಕೊಂಡಿದೆ. ವಿವರಗಳಲ್ಲಿರುವ ಪ್ರಾದೇಶಿಕ ಭಿನ್ನತೆಯ ಗಣನೀಯವಾಗಿದೆ. ಯುದ್ಧ ಕಾಲದ ಕಥೆಗಳೊಂದಿಗೆ ಬೇರೆ ಬಗೆಯ ಕಥೆಗಳೂ ಬೆಸೆದುಕೊಂಡು ಒಟ್ಟು ಸಂಕಲನ ಹಲವು ಧ್ವನಿ-ವರ್ಣಗಳ ಸಮುಚ್ಚಯವಾಗಿದೆ. ಈ ಹತ್ತು ಕಥೆಗಳಲ್ಲಿ ಎಷ್ಟೊಂದು ವೈವಿಧ್ಯ! ವಿವಿಧ ವರ್ಗ, ಜಾತಿ, ಸ್ವಭಾವದ ಜನರನ್ನು ಕಾಣುತ್ತೇವೆ. ಪರಿಶಿಷ್ಟರು, ಕ್ರಿಶ್ಚಿಯನರು, ಸಾಬರು, ಶಿಷ್ಟರು, ದುಷ್ಟರು, ನಮಕ್ ಹರಾಮರು ಎಲ್ಲ ಇಲ್ಲಿದ್ದಾರೆ. ಎಲ್ಲರೂ ಒಳ್ಳೆಯ

  1. 156 ಕಥೆಗಳುಳ್ಳ 'ಧ್ವನಿ' ಜೋಡಿಸಂಪುಟ ಐಬಿಎಚ್ ಪ್ರಕಾಶನದಿಂದ ಪ್ರಕಟವಾಗಿದೆ.