ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ

ವಿಕಿಸೋರ್ಸ್ದಿಂದ

ಗ, ಕನ್ನಡ [೧]ಯ ಕ-ವರ್ಗದ ಮೂರನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.

ಕನ್ನಡ ವರ್ಣಮಾಲೆಯಲ್ಲಿನ ಕ ವರ್ಗದಲ್ಲಿ ಮೂರನೆಯದು. ಅಲ್ಪಪ್ರಾಣಾಕ್ಷರ. ಇದರ ಅತ್ಯಂತ ಪ್ರಾಚೀನ ಸ್ವರೂಪವನ್ನು ಅಶೋಕನ ಕಾಲದ ಬ್ರಾಹ್ಮೀ ಶಾಸನಗಳಲ್ಲಿ ಕಾಣಬಹುದು. ಕೆಳಭಾಗದ ರೇಖೆಯಿಲ್ಲದಿರುವ ಸಮಭುಜ ತ್ರಿಕೋಣದಂತೆ ಕಾಣುವ ಮೌರ್ಯರ ಕಾಲದ ಈ ಅಕ್ಷರದ ಸ್ವರೂಪ ಶಾತವಾಹನ ಕಾಲದಲ್ಲಿ ದುಂಡಗಾಗಿ ಹಿಡಿ ಮತ್ತು ನಾಲೆ ಇಲ್ಲದ ಘಂಟಾಕೃತಿಯನ್ನು ತಾಳುತ್ತದೆ. ಕದಂಬರ ಶಾಸನಗಳಲ್ಲಿ ಪೇಟಿಕಾಶಿರದ ತಲೆಕಟ್ಟು ಬಂದು ಸೇರುತ್ತದೆ. ಅಲ್ಲಿಂದ ಮುಂದೆ ಈ ಅಕ್ಷರ ಹೆಚ್ಚು ಬದಲಾವಣೆಗಳಿಲ್ಲದೆ ಮುಂದುವರಿದು ಈಗಿರುವ ರೂಪವನ್ನು ತಾಳುತ್ತದೆ. ಪ್ರಾಚೀನ ಬ್ರಾಹ್ಮೀ ಲಿಪಿಯಿಂದ ಹೆಚ್ಚು ಬದಲಾವಣೆ ಹೊಂದದ ಅಕ್ಷರಗಳಲ್ಲಿ ಇದು ಮುಖ್ಯವಾದುದು. ಈ ಅಕ್ಷರ ಕಂಠ್ಯ ಘೋಷ ಸ್ಪರ್ಶಧ್ವನಿಯನ್ನು ಸೂಚಿಸುತ್ತದೆ.   (ಎ.ವಿ.ಎನ್.)

  1. https://kn.wikipedia.org/s/ap