ಪುಟ:Abhaya.pdf/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೫೪

ಅಭಯ

ಮನೆಯೋರು, 'ಚಿನ್ನಾ ನೆಗಡಿ ಆದೀತು, ಜ್ವರ ಬಂದೀತು' ಅಂತ ನನ್ನ
ಹೊರಕ್ಕೆ ಬಿಡ್ತಿರ್‍ಲಿಲ್ಲ.”
"ಆಮೇಲೆ, ನಿನ್ನ ಅವರು ಬಿಟ್ಬಿಟ್ಟಾಗ ?”
"ಆಗ ಆಟ ಆಡೋ ಬಯಕೇನೇ ಹೊರಟೋಗಿತ್ತು"
ಪ್ರಕೃತಿಯ ಹೊಸವೇಷದಲ್ಲೇ ತನ್ಮಯಳಾಗಿದ್ದ. ಜಲಜೆಯ ಮನಸ್ಸು
ಅಂತರ್ಮುಖಿಯಾಗಿ ಗತಕಾಲವನ್ನು ಕುರಿತು ಚಿಂತಿಸುತಿತ್ತು ...ಬಾಲ್ಯದ
ನೆನಪುಗಳು ...ಆದರೆ ಆ ಸ್ಮರಣೆಯೆಂದೂ ಮಧುರವಾಗಿರಲಿಲ್ಲ.
ಅದನ್ನು ಚೆನ್ನಾಗಿ ತಿಳಿದಿದ್ದ ತುಂಗಮ್ಮ ಅಂದಳು :
"ಬಾ ಹೋಗೋಣ. ಪ್ರಭಾನ ಎಬ್ಬಿಸೋಣ ”
“ ಅಯ್ಯೋ - ಇರಲಿ ಬಿಡೇ ಬೇಕಾದಾಗ ಏಳ್ತಾಳೆ"
"ಇಲ್ಲ ಜಲಜ ಈಗ ಜಂಭವೆಲ್ಲ ಇಳಿದ್ಬಿಟ್ಟಿದೆ ಬಾ."
ಗೆಳತಿಯರಿಬ್ಬರೂ ಪ್ರಭಾಳ ಕೊಠಡಿಯತ್ತ ನಡೆದರು.

ಪ್ರಭಾ ತಾನು ಬಂದ ಮರುದಿನ ಬೆಳಿಗ್ಗೆ ಎದ್ದವಳು, ಹೊಸಪರಿಸ್ಥಿತಿಗೆ
ಹೊಂದಿಕೊಳ್ಳಲಾರದೆ ಬಲು ಕಷ್ಟಪಟ್ಟಳು.
ತುಂಗಮ್ಮ ಬಾಗಿಲಬಳಿ ಸುಳಿದಾಗ ಪ್ರಭಾ ಕರೆದಳು :
“ ಏ ಹುಡುಗಿ ಇಲ್ಲಿಗೆ ಬಾ ?
ಇದೂ ಸರಿಯೆ - ಎಂದುಕೊಂಡ ತುಂಗಮ್ಮ ವಿನಮ್ರತೆಯ ಅಭಿನಯ
ಮಾಡುತ್ತಾ ಪ್ರಭಾಳ ಎದುರುನಿಂತಳು :
“ ಏನು ಬೇಕಮ್ಮ ?”
"ನಿನ್ನ ಹೆಸರೇನೇ ?”
"ತುಂಗ ಅಂತಾರೆ ”
"ನನ್ನ ಸ್ವಲ್ಪ ಬಚ್ಚಲುಮನೆಗೆ ಕರಕೊಂಡು ಹೋಗ್ತೀಯಾ ?”
"ರಾತ್ರೆ ನೋಡ್ಲಿಲ್ವೆ ?”
ನೊಡಿದ್ದೆ. ಹಾದಿ ಮರೆತ್ಹೋಯ್ತು. ಒಬ್ಳಿಗೇ ಹೋಗಕ್ಕಾಗಲ್ಲ.
ಮುಖ ತೊಳೀಬೇಕು."
"ಆಗ್ಲಿ ನಡೀರಿ.”