ಪುಟ:ಕಥಾ ಸಂಗ್ರಹ - ಭಾಗ ೨.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ ೪ ನೆಯ ಭಾಗ ರಾಮಾಯಣಾದಿ ಗ್ರಂಥಗಳಿಂದ ಸಂಗ್ರಹಿಸಿದ ಕಥೆಗಳು 1. RAVANA'S CONQUEST OF THE UNIVERSE. ೧, ರಾವಣನ ದಿಗ್ವಿಜಯವು. ಒಂದಾನೊಂದು ಕಾಲದಲ್ಲಿ ಸನಕ ಸನಂದನ ಸನತ್ಕುಮಾರದೇ ಮೊದಲಾದ ಮಹ ರ್ಮಿಗಳು ಲಕ್ಷ್ಮಿಪತಿಯಾದ ನಾರಾಯಣನನ್ನು ಸೇವಿಸುವುದಕ್ಕಾಗಿ ವೈಕುಂಠಲೋಕ ವನ್ನೆ ಹೈ ಆ ಮಹಾತ್ಮನ ಸನ್ನಿಧಿಯನ್ನು ಕುರಿತು ಹೋಗುತ್ತಿರಲು ; ಅರಮನೆಯ ದ್ವಾರಪಾಲಕರಾದ ಜಯವಿಜಯರು--ನನ್ನೊಡೆಯನ ಅಪ್ಪಣೆಯಿಲ್ಲದೆ ಒಳಗೆ ಪ್ರವೇಶಿ ಸಕೂಡದೆಂದು ತಡೆದುದರಿಂದ ಆ ಋಷಿಗಳು ಬಹು ಕುಪಿತರಾಗಿ--ಅಹಂಕಾರಿಗಳಾದ ಎಲೆ ದೌವಾರಿಕರೇ, ನೀವು ಭೂಲೋಕದಲ್ಲಿ ರಾಕ ಸರಾಗಿ ಹುಟ್ಟಿರಿ ಎಂದು ಶಾಸ ವನ್ಸಿಯಲು ; ಆ ಮೇಲೆ ಆ ಜಯವಿಜಯರು ಭಯಭ್ರಾಂತರಾಗಿ ಆ ಯೋಗಿಗಳನ್ನು ಒಳಗೆ ಬಿಟ್ಟರು. ಆಗ ಅವರು ಒಳಪೊಕ್ಕು ಮಹಾವಿಷ್ಣುವನ್ನು ಸೇವಿಸಿ ಅಲ್ಲಿಂದ ಹೊರಟು ತಮ್ಮ ನಿವಾಸಸ್ಥಾನವಾದ ಸತ್ಯಲೋಕವನ್ನು ಕುರಿತು ತೆರಳಿದರು. ತರು ವಾಯ ಜಯವಿಜಯರು ಚಿಂತಾಕ್ರಾಂತರಾಗಿ ವಿಷ್ಣುವಿನ ಬಳಿಗೆ ಹೋಗಿ ದೈನ್ಯದಿಂದ ಕೂಡಿದವರಾಗಿ ತಮಗೆ ಬಂದೊದಗಿದ `ಮುನಿಶಾಪವೃತ್ತಾಂತವನ್ನು ಹೇಳಿಕೊಂಡು ಬಹಳವಾಗಿ ದುಃಖಿಸಲು;: ವಿಷ್ಣುವು ಸ್ವಲ್ಪ ಕಾಲ ಯೋಚಿಸಿ, ಅವರನ್ನು ಕುರಿತು--ಎಲೈ ಜಯವಿಜಯರಿರಾ, ಆ ಮುನೀಂದ್ರರ ಶಾಪವು ಅನುಭವದಿಂದಲ್ಲದೆ ಅನ್ಯಥಾ ಕ್ಷಯ