ಪುಟ:Ekaan'gini.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

"ಒಳಗೆ ಅಮ್ಮನ ಜತೇಲಿರ್ಬೇಕು."

     ಐವತ್ತರ ಗಡಿ ಸಮಿಪಿಸುತ್ತಿದ್ದ ತಾಯಿ, ವಯಸ್ಸಾದ ತಂದೆ.... ವಿಜಯಳ ಮದುವೆಯೇ ಈ ಭೂಮಿಯ ಮೇಲೆ ಅವರು ಮಾಡಲು ಉಳಿದಿದ್ದ ಕೊನೆಯ ಕರ್ತವ್ಯ. ಈಗ ಅದೂ ಮುಗಿಯಿತೆಂದು ಅವರು ನಿಶ್ಛಿಂತೆಯಾಗಿ ಇರಬಹುದು....

ಹಾಗಿರುವುದು ಸಾಡ್ಯವಿತ್ತು. ಆದರೆ....

     "ನೀನು ಏನ್ಮಾಡ್ಬೇಕೂಂತಿದೀಯಾ ಅಕ್ಕ?"
     ಮಾಡಬೇಕಾದುದೇನೆಂಬುದನ್ನು ಕುರಿತು ಅದೆಷ್ಟು ಸಾರೆ ಯೋಚಿಸಿದ್ದಳೋ ಸುನಂದಾ! ಆದರೆ ಒಮ್ಮೆಯೂ ಏನೂ ಸ್ಪಷ್ಟವಾಗಿ ಹೊಳೆದಿರಲಿಲ್ಲ.
    "ಈಗಾಗಲೇ ಏನವಸರ? ನಿಧಾನವಾಗಿ ಏನಾದರೂ ಮಾಡಿದರಾಯ್ತು."
    "ಅಂತೂ ಹೆಣ್ಣಾಗಿ ಹುಟ್ಟಿ ಹೆತ್ತವರಿಗೆ ಕೊಡಬಾರದ ಕಷ್ಟ ಕೊಟ್ಟೆವು."
    "ಇಂಥ ಒಳ್ಳೆಯ ದಿನ ಹಾಗೆಲ್ಲ ಆಡಬಾರದಮ್ಮ."
    "ಏನು ಒಳ್ಳೆಯ ದಿನವೊ!"
    ಸುನಂದಾ ತನ್ನ ತಂಗಿಯ ಬಾಯನ್ನು ತನ್ನ ಅಂಗೈಯಿಂದ ಮುಚ್ಚಿದಳು.ವಿಜಯಾ ಹಿಂದಕ್ಕೆ ಸರಿದು ತಲೆ ಕೊಸರಿಕೊಂಡಳು.
    "ನೀನು ಕೂಡಾ ನಾಲ್ಕು ವರ್ಷಗಳ ಹಿಂದೆ ಒಂದು ಒಳ್ಳೆಯ ದಿನವೇ ನಮ್ಮನ್ನೆಲ್ಲ ಬಿಟ್ಟು ಗಂಡನ ಮನೆಗೆ ಹೋದೆ. ಅಲ್ವೆ ಅಕ್ಕ?"
    ಬೇಡ ಬೇಡವೆಂದರೂ ಬಾರಿ ಬಾರಿಗೂ ಸೂಜಿಮನೆಯಿಂದ ಚುಚ್ಛುತ್ತಿದ್ದ ಕಹಿ ನೆನಪು....
    "ಈಗ ಯಾಕಮ್ಮಾ ಅದೆಲ್ಲಾ?"
    "ಕರಕೊಂಡು ಹೋಗೋಕೆ ಬರ್ತಾರೇಂತ ನಿನಗೂ ಆಗ ಸಂತೋಷವಾಗಿತ್ತು."
    ಆಗಿತ್ತು. ಅದು ನಿಜ.

"ನನ್ನ ಮಾತು ಕೇಳು ವಿಜಯ. ಬಂಗಾರದಂತಹ ಮನುಷ್ಯ ನಿನ್ನ