ಪುಟ:Mysore-University-Encyclopaedia-Vol-1-Part-1.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಅಂಬಾ - ಅಂಬುಳ ಗಂಗಾವಿಶ್ವೇಶ್ವರ ಓಂಕಾರೇಶ್ವರ ಎಂಬ ಪಂಚಶಿವಾಲಯಗಲಳಿವೆ.ದೇವೀರಮ್ಮ ದೇವಾಲಯವಿದೆ.ಚೈತ್ರಮಾಸದಲ್ಲಿ ಇಲ್ಲಿನ ಬೀರಲಿಂಗೇಶ್ವರ ದೇವರ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ.ಕನ್ನಡದ ಉತ್ತಮ ಗದ್ಯ ಲೇಖಕಕರೆಂದೂ ಕನ್ನಡ ಅಶ್ವಿನಿ ದೇವತೆಗಳಲ್ಲಿ ಒಬ್ಬರೆಂದೂ ಪ್ರಸಿದ್ದರಾದ ಎ.ಆರ್.ಕೃಷ್ಣಶಾಸ್ತ್ರೀ (ನೋಡಿ) ಈ ಊರಿನವರು ಇವರ ಹೆಸರಿನಲ್ಲ ಇಲ್ಲಿ ಒಂದು ಸಾರ್ವಜನಿಕ ಗ್ರಂಥಾಲಯವನ್ನು ಸ್ತಾಪಿಸಲಾಗಿದೆ.(ಬಿ.ಎಂ.ಎ).

   ಅಂಬಾ  : ಪಾರ್ವತಿಯ ಬೇರೊಂದು ಹೆಸರು.
   ಅಂಬಾಲ : ಹರಿಯಾಣ ರಾಜ್ಯದ ಒಂದು ಜಿಲ್ಲೆ ಮತ್ತು ಆಡಳಿತಗಳ ಕೇಂದ್ರ ನಗರ. ಜಿಲ್ಲೆಯ ವಿಸ್ತೀರ್ಣ ಸು.1,574 ಚ.ಕೀ.ಮೀ.ಜನಸಂಖೈ (2001).ಅಂಬಾಲ ಪಟ್ಟಣ ದಂಡು ಮತ್ತು ನಗರಭಾಗಗಳನ್ನು ಹೊಂದಿದೆ. ಇದರ ಜನಸಂಖೈ:1,68,316 (2001) ದಂಡಿನ ಭಾಗ ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಸ್ತಾಪಿತವಾಯಿತು.ಇದು ಅಂಬಾಲ ನಗರದ ಪೂರ್ವಕ್ಕಿದು ಸು.61,748 ಜನಸಂಖೈಯಿಂದ ಕೂಡಿದೆ (2001).
   ಅಂಬಾಲ ಕ್ಷೇತ್ರ್ 14ನೆಯ ಶತಮಾನದಲ್ಲಿ ಅಂಬಾ ರಜಪೂತವಾಯಿಯತು.ಅನಂತರ ಪಟ್ಟಣವನ್ನು ಆತನ ಜ್ನಾಪಕಾರ್ಥವಾಗಿ ಅಂಬಾಲವೆಂದು ಕರೆಯಲಯಿತು.ಈ ಹೆಸರು ಅಂಬಾಲದ ಸುತ್ತಮುತ್ತಲಿನ ಆವರಣದಲ್ಲಿ ಗೋಚರವಾಗುವ ಮಾವಿನತೋಪುಗಳಿಂದ ಬಂದಿರಲಿಕ್ಕು ಸಾಕು.ಅಂಬವಾಲ ಎಂಬುದಾಗಿ ಕರೆಯಲಾಗುತಿದ್ದುದು ಅನಂತರ ಅಶುದ್ದವಾಗಿ ಅಂಬಾಲವಾಗಿರಬಹುದು.1809ರಲ್ಲಿ ಒಡೆಯನಾಗಿದ್ದ ದಯಾಕಾರ್ ಸತ್ತಮೇಲೆ 1823ರಲ್ಲಿ ಅದು ಬ್ರಿಟೀಷರ ಕೈಸೇರಿತ್ತು;ಮುಂದೆ 1849ರಲ್ಲಿ ಜಿಲ್ಲೆಯ ಕೇಂದ್ರಕಛೇರಿ ಇಲ್ಲಿ ಸ್ತಾಪಿತವಾಯಿತು.
    ಭೌಗೋಳಿಕವಾಗಿ ಅಂಬಾಲ ಮೈದಾನ ಮತ್ತು ಬೆಟ್ಟಗುಡ್ದಗಳು ಸೇರುವ ನೆಲೆಯಲ್ಲಿದೆ.ತನ್ನ ಹಿನ್ನಲೆಯ ಪ್ರಭಾವದಿಂದ ಒಂದು ಪ್ರಮುಖ ಕೈಗಾರಿಕಾ ಪಟ್ಟಣವಾಗಿ ಬೆಳೆದಿದೆ.ಕಾಗದ ತಯಾರಿಕೆ ,ಹಣ್ಣುಗಳನ್ನು ಕೂಡಿಡುವುದು, ರೇಷ್ಮೆ ಕೈಗಾರಿಕೆ , ಗಾಜು ಮತ್ತು ವ್ಯಜ್ನಾನಿಕ ಸಲಕರಣೆಗಲಳು ಮತ್ತು ಆಟದ ಸಮಾನುಗಳ ತಯಾರಿಕೆ ಅಂಬಾಲದ ಪ್ರಮುಖ ಚಟುವಟಿಕೆಗಳು. ಅಂಬಾಲ ಇಂದಿಗೂ ಕೂಡ ಧಾರ್ಮಿಕತೆಗೆ ಹೆಸರುವಾಸಿ. ಸಿಖ್ಖರ ಒಂದು ಪ್ರಮುಖ ದೇವಸ್ತಾನದ ಗುರುದ್ವಾರ ಮಂಜಿ ಸಾಹೀಬ್ ಇಲ್ಲಿ ಇದ್ದು, ಪ್ರತಿ ವರ್ಷವೂ ಅನೇಕ ಯಾತ್ರಿಕರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತೀದೆ. (ಡಿ.ಸಿ.ಬಿ)

ಅಂಬಿಗರ ಚೌಡಯ್ಯ :12ನೆಯ ಶತಮಾನದ ಬಸವಣ್ಣನವರ ಕಾಲದ ಒಬ್ಬ ವಚನಕಾರ ಅಂಬಿಗ,ಪ್ರವೃತ್ತಿಯಲ್ಲಿ ಅನುಭಾವಿ. ಬಸವಣ್ಣನವರ ಅನುಭವಮಂಟಪದಲ್ಲಿ ಸಮಾನಭುಮಿಕೆಯ ಸಮ್ಮೆಳನದಲ್ಲಿ ಸೇರಿಕೊಂಡವ. ತನ್ನ ಕಾಯಕ ಅಥವಾ ವ್ಯಕ್ತಿನಾಮವಾದ ಅಂಬಿಗರ ಚೌಡಯ್ಯ ಎಂಬುದೇ ಈತನ ವಚನಗಳ ಅಂಕಿತವಾಗಿದೆ. ತಾನು ಕೇವಲ ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟುಹಾಕುವ ಅಂಬಿಗ ಮಾತ್ರವಲ್ಲ,ಭವಸಾಗರದಲ್ಲು ಹುಟ್ಟು ಹಾಕುವ ಕೌಶಲವುಳ್ಳವ ಎಂದು ಹೇಳಿಕೊಳ್ಳುವುದರಲ್ಲಿ ತನ್ನ ಅನುಭಾವದೃಷ್ಟಿಯನ್ನು ಪ್ರಕಟಿಸುತ್ತದೆ.