ಪುಟ:Mysore-University-Encyclopaedia-Vol-1-Part-1.pdf/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೦೬

                              ಅಡವಿ ಗೋರಂಟಿ-ಅಡಿಗೆ ಉಪ್ಪು

ದ್ವೀಪ ಸಮೂಹ,ಪೆಸಿಫಿಕ್ ಸಾಗರದ ಎಲ್ಲಿಸ್,ಪಿಜಿ ಮತ್ತು ಹವಾಯಿ ಮೊದಲಾದ ದ್ವೀಪಗಳು.ಮಲದೀವಿಗಳ ದಕ್ಷಿಣದ ತುದಿಯಲ್ಲಿರುವ ಸುವದಿವ ಪ್ರಪಂಚದ ಅತಿ ದೊಡ್ಡ ಅಡಲು.ಅದರ ಸುತ್ತುವರಿಯ ದಿಬ್ಬಗಳ ನಡುವೆ ನೂರಕ್ಕೂ ಹೆಚ್ಚು ದ್ದೀಪಗಳಿವೆ. ಅಡಲುಗಳ ಅಂಚಿನ ಸುತ್ತ ತೆಂಗು ಮತ್ತು ತಾಳೆ ಮರಗಳು ಹುಲುಸಾಗಿ ಬೆಳೆದಿವೆ.ಭರತದ ವೇಳೆಅಡಲು ದ್ವೇಪಗಳು ಸಮುದ್ರದ ಅಲೆಗಳಡಿಯಲ್ಲಿ ಮುಳುಗಿರುವುದರಿಂದ, ನುಕಾಸಂಚಾರಕ್ಕೆ ಆತಂಕವನ್ನು ಉಂಟುಮಾಡಬಲ್ಲವು.ಈ ಆಡಲುಗಲಳನ್ನು ರಚನೆಯ ಮೂಲವನ್ನು ತಿಳಿಯಲು ಭೂವಿಜ್ಞಾನಿಗಳು ಅನೇಕ ಹವಳದ ದ್ವೀಪಗಳನ್ನು ಶೋಧನೆ ಮಾಡಿದ್ದರೆ.ಸು.1800ಮೀ ವರೇಗೂ ಹವಳದ ಹುಳುಗಲಿಂದ ನಿರ್ಮಿತವಾದ ಭಾಗಗಳೇ ಕಂಡಿವೆ.ಹವಳದ ಹುಳುಗಳು 36ಮೀ ಗಿಂತ ಹೆಚ್ಚು ಆಳದಲ್ಲಿ ಜೀವಿಸುವುದಿಲ್ಲವಾದುದರಿಂದ 550ಮೀ ವರೆಗೂ ವ್ಯಾಪಿಸಿರುವ ಆಡಲುಗಳ ರಚನೆ ಭೂವಿಜ್ಣ್ಯನದ ಸಮಸ್ಯೆಗಳಲ್ಲೊಂದೆನಿಸಿದೆ.ಬಹುಜನರಿಗೆ ಸಮರ್ಪಕವೆನಿಸಿದ ಡಾರ್ವಿನನ ವಾದದಂತೆ,ಪ್ರಾರಂಭದಲ್ಲಿ ಹವಳದ ಆಂಚುದಿಬ್ಬಗಳಾಗಿದ್ದು,ಆನಂತರ ತಡೆದಿಬ್ಬಗಳಾದಿ ಮಾರ್ಪಟ್ಟು,ನೆಲ ನೀರಿನಡಿಯಲ್ಲಿ ಕುಸಿಯುತ್ತ ಹೋದಂತೆ ಹವಳದ ಗೂಡುಗಳು ಬೆಳೆಯುತ್ತ ಬಂದು ಆಡಲುಗಳು ನಿರ್ಮಾಣವಾದವೆಂದು ನಂಬಲಾಗಿದೆ. (ಎಂ.ಎ)

ಅಡವಿ ಗೋರಂಟಿ:ಎರಿತ್ರೊಸೈಲೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಸಸ್ಯ.ಎರಿತ್ರೊಸೈಲಾನ್ ಮಾನೋಗೈನಮ್ ಎಂಬುದು ಇದರ ಶಾಸ್ತ್ರೀಯ ಹೆಸರು.ಇಂಗ್ಲಿಷಿನಲ್ಲಿ ಇದನ್ನು ಬಾಸ್ಟರ್ಡ್ ಸ್ಯಾಂಡಲ್ ಎಂದೂ,ಕನ್ನಡದಲ್ಲಿ ದೇವದಾರಿ.ಚಂಬುಳಿಕೆ,ಗಂಧಗಿರಿ ಇತ್ಯಾದಿ ಇನ್ನಿತರ ಹೆಸರುಗಳಿಂದಲೂ ಕರೆಯಲಾಗುತ್ತದೆ.ಇದು ಶುಷ್ಕತೆ ಹೆಚ್ಚಾಗಿರುವಂಥ ಮುಳ್ಳುಕಂಟಿಗಳಿಂದ ಕೂಡಿರುವ ಬಂಜರು ಕುರುಚಲು ಪ್ರದೇಶಗಳಲ್ಲಿ ಬೆಳೇಯುತ್ತದೆ.ಇದು ಪೊದೆರೂಪದಲ್ಲಿ ಬೆಳೆಯುವ ಸಸ್ಯ.ಲೆಲವೊಮ್ಮ ಮರವಾಗಿ ಬೆಳೆಯುವುದೂ ಉಂಟು.ಎಲೆಗಳು ಆರಳ ರೀತಿಯವು.ಕಾಂಡದ ಮೇಲೆ ಪರ್ಯಾಯ ರೀತಿಯಲ್ಲಿ ಜೋಡಣೆಗೊಂಡಿರುವುವು.ಎಲೆಗಳ ಕಕ್ಷದಲ್ಲಿ ಚಿಕ್ಕ ಗತ್ರದ ಬಿಳಿ ಹಸುರು ಬಣ್ಣದ ಹೂಗಳು ಆರಳುವುವು.ಹಣ್ಣು ಮಾಗಿದಾಗ ಕೆಂಪುಬಣ್ಣದ್ದಾಗಿರುತ್ತದೆ.ಇದಕ್ಕೆ ಔಷಧೀಯ ಮಹತ್ತ್ವ ಇದೆ.ಇದರ ಬೇರು ಮತ್ತು ತೊಗಟೆ ಉದರಶೂಲೆಗೆ ಮದ್ದಾಗಿ ಬಳಕೆಯಾಗುತ್ತವೆ.ಇದರ ತೈಲಕ್ಕೆ ಚರ್ಮರೋಗ(ಕಜ್ಜಿ,ತುರಿ)ವಾಸಿಮಾಡುವ ಗುಣ ಇದೆ.ಆಡವಿಗೋರಂಟಿಯ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ಬಲ,ವೀರ್ಯ ವೃದ್ಧಿಯಾಗುವುವು. (ಎ.ಎನ್.ಎಸ್.)

ಅಡವಿ ಬಾಪಿರಾಜು:ಪ್ರಸಿದ್ಧ ತೆಲುಗು ಲೇಖಕ.1895ರಲ್ಲಿ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮವರವೆಂಬ ಗ್ರಾಮದಲ್ಲಿ ಹುಟ್ಟಿ ರಾಜಮಹೇಂದ್ರಿ(ಆರ್ಟ್ಸ್)ಕಲಾಶಾಲೆಯಲ್ಲಿ ಪದವೀಧರರಾದರು.ಸ್ವರಾಜ್ಯ ಚಳವಳಿಯಲ್ಲಿ ಕಾರಾಗೃಹವಾಸವನ್ನು ಆನುಭವಿಸಿದರು. ಬಂದರ್ ಕಲಾಶಾಲೆಯಲ್ಲಿ ಪ್ರಮೋದಕುಮಾರ ಚಟರ್ಜಿ ಅವರಲ್ಲಿ ಚಿತ್ರಲೇಖನವನ್ನು ಅಭ್ಯಸಿಸಿ ಸಿದ್ಧಹಸ್ತರಾದರು.ಮದರಾಸು ಲಾ ಕಾಲೇಜಿನಲ್ಲಿ ಬಿ.ಎಲ್.ಪದವಿಯನ್ನು ಪಡೆದು ಸ್ವಲ್ಪಕಾಲ ವಕೀಲಿವೃತ್ತಿಯಲ್ಲಿದ್ದರು.ಆಂಧ್ರಜಾತೀಯ ಕಲಾಶಾಲೆಗೆ ಅಧ್ಯಕ್ಷರಾಗಿಯೂ ತ್ರಿವೇಣಿ ಸಂಪಾದಕರಗಿಯೂ ಹೆಸರು ಗಳಿಸಿದರು.ಕಲೆಯೇ ಜೀವನದ ಉಸಿರು.ಕವಿತ್ವ,ಅಭಿನಯ,ಚಿತ್ರಲೇಖನ ಹೀಗೆ ಇವರ ಅನುಸರಿಸದೇ ಇರುವ ಕಲೆಯೇ ಇಲ್ಲ.ಇವರ ನಾರಾಯಣರಾವ್ ಎಂಬ ಕಾದಂಬರಿಗೂ ತಿಕ್ಕನಸೋಮಯಾಜಿ ಎಂಬ ಚಿತ್ರಕ್ಕೂ ಆಂಧ್ರ ವಿಶ್ವವಿದ್ಯಾನಿಲಯದ ಬಹುಮಾನಗಳು ಬಂದುವು.ನಾರಾಯಣರಾವ್ ಕಾದಂಬರಿ ಕನ್ನಡಕ್ಕೆ ಭಾಷಾಂತರವಾಗಿದೆ.ಹಿಮಬಿಂದು,ತುಫಾನು,ಗೋನಗನ್ನಾರೆಡ್ಡಿ, ಜಾಜಿಮಲ್ಲೆ,ಕೋನಂಗಿ-ಇವು ಇವರ ಇತರ ಕಾದಂಬರಿಗಳು.ಅಂಜಲಿ,ಹಂಪೀ ಶಿಥಿಲಾಲು ಇವರ ಕಥಾನಕಗಳು.ಗೋಧೂಳಿ,ರಾತಿರಥ,ಶಶಿಕಲಾ,ತೊಲಕರಿ.ಹಾರತಿ-ಇವು ಪದ್ಯಸಂಲಕಲನಗಳು.ಭೋಗಿಲೋಯ,ಉಷಾ ಸುಂದರಿ ಇವರ ರೇಡಿಯೋ ನಾಟಕಗಳು. ಬಾಪಿರಾಜುರವರದು ರಸಾತ್ಮಕ ಹೃದಯ,ಮಧುರವಾಣಿ,ಆಕರ್ಷಣೀಯ ಆಕೃತಿ. ಜನ್ಮಾಂತರ ಸಂಸ್ಕಾರಸಿದ್ಧವಾದ ಪಾಂಡಿತ್ಯ,ಪ್ರಾಚ್ಯ,ಪಾಶ್ಚಾತ್ಯಕಲೆಗಳ ಸಂಸ್ಕರಾ ಇವನ್ನು ಅವರಲ್ಲಿ ಕಾಣಬಹುದು.ಅವರ ವ್ಯಾಖ್ಯಾನದ ಮಾರ್ಗವೇ ಅಪೂರ್ವ ಮತ್ತು ನವೀನ.ಅವರ ಗೋದಾವರೀ ಪ್ರಸಿದ್ಧವಾದ ಗೇಯ.ಅವರ ತೊಲಕರಿ ಜಾನಪದ ಜೀವನಮಾಧುರ್ಯವನ್ನೂ ಶಶಿಕಲಾ ಭಾವತೀವ್ರತೆಯನ್ನೂ ನಾರಾಯಾಣ ರಾವ್ ಜನಜೀವನವನ್ನೂ ಬಣ್ಣಿಸುತ್ತವೆ. ರವೀಂದ್ರರ ಊರ್ವಶಿಯಾಗಿ ಅವರ ಶಶಿಕಲಾ ಅತೀಂದ್ರಿಯ ಭೋಗ್ಯವಾದ ಯಕ್ಷಿಣಿಯಂತೆ ಕೈಗೆ ಸಿಕ್ಕದೆ ಮೆರೆಯುತ್ತದೆ.ಕಾದಂಬರಿಗಳೇ ಬಾಪಿರಾಜುರನ್ನು ಅಜರಾಮರ ಸ್ಥಾನಕ್ಕೆ ಏರಿಸಿವೆ.ಪ್ರಾಚೀನ ಭಾರತ ಧರ್ಮಕ್ಕೆ ಹಿಮಬಿಂದು, ಕಾಕತೀಯರ ಆಚಾರವ್ಯವಹಾರಗಳಿಗೆ ಗೋನಗನ್ನಾರೆಡ್ಡಿ,ಆದುನಿಕ ಗಾಂಧೀಯುಗಕ್ಕೆ ನಾರಾಯಣರಾವ್ ಎಂಬ ಕಾದಂಬರಿಗಳು ಪ್ರತಿಬಿಂಬಗಳು.ಆಧುನಿಕ ತೆಲಗು ಸಾಹಿತ್ಯದಲ್ಲಿ ವೀರೇಶಲಿಂಗಂ ಪಂತಲು ನವಯುಗ ಕರ್ತ, ಅಭ್ಯುದಯಗಾಮಿ;ವಿಶ್ವನಾಥ್ ಸತ್ಯನಾರಾಯಣ ಪ್ರಾಚೀನತಾವಾದಿ.ಬಾಪಿರಾಜು ಮಧ್ಯಮಾರ್ಗದಲ್ಲಿ ನಡೆಯುವ ಸಮನ್ವಯಶೀಲರು;ಆಂಧ್ರನಾಗಿ ಹುಟ್ಟಿ ಭಾರತೀಯನಾಗಿ ಬಾಳಿದ ಖ್ಯಾತ ಪುರುಷರು.(ಬಿ.ಆರ್.)

ಅಡಿಗಟ್ಟು:ಲೋಹದಿಂದ ಅಥವಾ ಮರದ ದಿಮ್ಮಿಗಳಿಂದ ಮಾಡಿರುವ ತೊಲೆಗಳು(ಕೀಲ್). ಇವನ್ನು ವಿಮಾನ,ದೋಣಿ,ಹಡಗು,ಮುಂತಾದುವುಗಳು ಕೆಳಭಾಗದಲ್ಲಿ ಉದ್ದದಲ್ಲಿ ಹಾಕಿರುತ್ತಾರೆ.ಇವು ವಿಮಾನದ ಅಥವಾ ಹಡಗಿನ ಮೇಲಿನ ಎಲ್ಲ ತೂಕಗಳನ್ನೂ ಸಮನಾಗಿ ಹೊರಬಲ್ಲುವು.ಕೇಂದ್ರೀಕೃತನಾದ ಭಾರವನ್ನು ಸಮನಾಗಿ ಹೊರಲು,ಬಾಗದಂತೆ ತಿರಿಚದಂತೆ ಇರಲು,ಅಡಿಗಟ್ಟಿನ ಗಾತ್ರವನ್ನು ಅದು ಹೊರಬಲ್ಲ ತೂಕವನ್ನು ನಿರ್ಧರಿಸಿ ಲೆಕ್ಕಾಚಾರ ಮಾಡುತ್ತಾರೆ.ನಿಜವಾಗಿ ಇವು ವಿಮಾನ ಅಥವಾ ಹಡಗಿನ ತಳಭಾಗದ ಆಧಾರಸ್ತಂಭಗಳು.(ಜಿ.ಟಿ.ಜಿ.)

ಅಡಿಗಾಲುವೆ:ರಸ್ತೆ ಸಣ್ಣ ಹಳ್ಳವನ್ನು ಇಲ್ಲವೆ ಕೊರಕಲನ್ನು ದಾಟುವಾಗ ಅಡಿಯಲ್ಲಿ ಕಟ್ಟುವ ಕಲ್ಲುಗಾರೆಯ ಚಿಕ್ಕ ಕಟ್ಟಡ(ಕಲ್ವರ್ಟ್). ಇದು ಮೇಲುಗಡೆಯಿಂದ ಬರುವ ಮಳೆ ನೀರನ್ನು ರಸ್ತೆಗೆ ಅಪಾಯವಾಗದಂತೆ ಕೆಳಗಡೆಗೆ ಸಾಗಿಸುತ್ತದೆ.ಸಾಮಾನ್ಯವಾಗಿ ಅಡಿಗಲುವೆಯಲ್ಲಿ ಒಂದು ಕಣ್ಣಿರವುದೇ ಹೆಚ್ಚು.ಎರಡು ಕೊನೆಗಳಲ್ಲಿಯೂ ಇರುವ ಕಂಬಗಳನ್ನು ಕಲ್ಲಿನ ಅಡಿಪಾಯದ ಮೇಲೆ ಕಾಂಕ್ರೀಟು ಹಾಕಿ ಅದರ ಮೇಲೆ ಕಲ್ಲುಗರೆಯಿಂದ ಕಟ್ಟುತ್ತಾರೆ. ಕಣ್ಣಿನ ಅಗಲ 0.61-1.82 ಮೀ ಇರುತ್ತದೆ.ಈ ಕಣ್ಣುಗಳಿಗೆ ಅಡ್ಡಲಾಗಿ ಮೇಲಿನ ರಸ್ತೆ ಹೊರಬೇಕಾದ ತೂಕಕ್ಕೆ ಅನುಸಾರವಾಗಿ 152.4-203 ಮಿಮೀ. ದಪ್ಪದ ಹಸಿ ಕಲ್ಲು ಚಪ್ಪಡಿಗಳನ್ನು ಎಳೆಯುವುದೇ ರೂಢಿ ಕಣ್ಣಿನ ಅಗಲ ಹೆಚ್ಚಾದರೆ ಇಟ್ಟಿಗೆ ಗಾರೆಯ ಇಲ್ಲವೆ ಕಲ್ಲುಗಾರೆಯ ಕಮಾನುಗಳನ್ನು ಕಟ್ಟುತ್ತಾರೆ. ಈಚೆಗೆ ಅಡಿಗಾಲುವೆಗಳ ಚಪ್ಪಡಿಗಳನ್ನು ಎಲ್ಲೆಲ್ಲಿಯೂ ಪ್ರಬಲಿತಕಾಂಕ್ರೀಟಿನಿಂದ (ರಿ ಇನ್ ಫೋರ್ ಸ್ಡ್)ತಯಾರಿಸುತ್ತಿದ್ದಾರೆ.ಕಣ್ಣುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕಂಬಗಳ ಕೊನೆಗಳಿಂದ ಏರಿಯ ಕಡೆಗೆ ರೆಕ್ಕೆಗೋಡೆಗಳನ್ನು(ವಿಂಗ್ ವಾಲ್ಸ್) ಹಳ್ಳದ ಮಹಾಪ್ರವಾಹದ ಮಟ್ಟದವರೆಗೂ ಕಟ್ಟಿ ಏರಿಯ ಮಣ್ಣು ಕೊರೆಯದ ಹಾಗೆ ನೋಡಿಕೊಳ್ಳುತ್ತಾರೆ.ಇಂಥ ಕಡೆಗಳಲ್ಲಿ ರಸ್ತೆ ಅಡಿಗಾಲುವೆಯ ಎರಡು ಕಡೆಗಳಲ್ಲಿಯೂ ಸ್ವಲ್ಪ ದೂರ ಬಹಳ ಎತ್ತರವಿಲ್ಲದ ಏರಿಯ ಮೇಲೆ ಹೋಗುತ್ತದೆ. (ಎಚ್.ಸಿ.ಕೆ)

ಅಡಿಗೆ ಉಪ್ಪು:ಸಾಮಾನ್ಯವಾಗಿ ಉಪ್ಪು ಎಂದು ಚಿರಪರಿಚಿತವಾದ ಈ ವಸ್ತು ಸೋಡಿಯಂ ಕ್ಲೋರೈಡ್ ಎಂಬ ರಾಸಾಯನಿಕ ಸಂಯುಕ್ತ.ಇದರ ಅಣುಸೂತ್ರ NaCl 804 ಸೆಂ.ಗ್ರೇ.ಉಷ್ಣತೆಯಲ್ಲಿ ಕರಗುತ್ತದೆ.ದ್ರವಿತವಸ್ತು 1413 ಸೆಂ.ಗ್ರೇ.ಉಷ್ಣತೆಯಲ್ಲಿ ಕುದಿಯುತ್ತದೆ.ಕಲ್ಲುಪ್ಪಿನ (ರಾಕ್ ಸಾಲ್ಟ್)ರೂಪದಲ್ಲಿ ಇದು ಪ್ರಕೃತಿಯಲ್ಲಿ ಹೇರಳವಾಗಿ ದೊರೆಯುತ್ತದೆ.ಸಮುದ್ರದ ನೀರಿನಲ್ಲಿ ಸು.ಶೇ.3 ರಷ್ಷು ಇದು ಸೇರಿಕೊಂಡಿದೆ.ಉಪ್ಪುನೀರಿನ ಚಿಲುಮೆ ಮತ್ತು ಸರೋವರಗಳೂ ಉಂಟು.ಶತಮಾನಗಳ ಕಾಲಾವಧಿಯಲ್ಲಿ ಇಂಥ ಸರೋವರದ ನೀರು ಇಂಗಿ,ಕಲ್ಲುಪ್ಪಿನ ಗಣಿಗಳು ರೂಪುಗೊಂಡಿವೆಯೆಂದು ಭಾವಿಸಲಾಗಿದೆ.ವಿಶ್ವದಲ್ಲೇ ಅತಿ ದೊಡ್ಡ ಕಲ್ಲುಪ್ಪಿನ ಗಣಿ ಅಮೆರಿಕ ಸಂಯುಕ್ತಸಂಸ್ತಾನದಲ್ಲಿದೆ. ಉಪ್ಪನ್ನು ತಯಾರಿಅಲು ಮೂರು ಮುಖ್ಯ ವಿಧಾನಗಳಿವೆ.1 ಸಮುದ್ರದ ನೀರಿನಿಂದ:ಮದ್ರಾಸ್ ಮತ್ತು ಬೊಂಬಾಯಿ-ಇವುಗಳೇ ಭಾರತದ ಪ್ರಮುಖ ಉಪ್ಪುತಯಾರಿಕಾ ಕೇಂದ್ರಗಳು.ಭಾರತದಲ್ಲಿ ಇದರ ವಾರ್ಷಿಕ ಉತ್ಪಾದನೆ ಸುಮಾರು 5 ಲಕ್ಷ ಟನ್ನುಗಳು.ತೇವವಾದ ಹವೆ ಮತ್ತು ಗಂಗ,ಬ್ರಹ್ಮಪುತ್ರ,ಇರವಾಡಿ ನದಿಗಳು ಸಮುದ್ರಕ್ಕೆ ಒಯ್ಯುವ ಹೊಸ ಹಾಗೂ ಸಿಹಿ ನೀರಿನ ದೆಸೆಯಿಂದಾಗಿ ಬಂಗಾಳ ಮತ್ತು ಮಾಯನ್ಮಾರ್ ಗಳಲ್ಲಿ ಉಪ್ಪಿನ ಕೈಗಾರಿಕೆ ಸಾಧ್ಯವಾಗಿಲ್ಲ.ಇತರ ಉಷ್ಣದೇಶಗಳಂತೆ ಭಾರತದಲ್ಲೂ ಸಮುದ್ರದ ನೀರನ್ನು ಸೂರ್ಯನ ಶಾಖದಿಂದ ಇಂಗಿಸಿ ಉಪ್ಪನ್ನು ಪಡೆಯಲಾಗುತ್ತದೆ.ಸಮುದ್ರತೀರದಲ್ಲಿ ಅದರ ಹಿನ್ನೀರಿಗೆ(ಬ್ಯಾಕ್ ವಾಟರ್)ಹೊಂದಿಕೊಂಡಂತೆ ಅನುಕೂಲವಾದ ಪ್ರದೇಶವನ್ನು ಆಯ್ಕೆಮಾಡಿಕೊಂಡು ಮಣ್ಣಿನ ಅಡ್ಡಗಟ್ಟೆಗಳನ್ನು ಹಾಕಿ,ವಿವಿಧ ಮಟ್ಟದ ಕೊಳಗಳನ್ನು ನಿರ್ಮಿಸಲಾಗುವುದು.ಇವುಗಳ ನಡುವೆ ಕಾಲುವೆಗಳ ಮೂಲಕ ಸಂಪರ್ಕವಿರುತ್ತದೆ. ಸಮುದ್ರದ ನೀರನ್ನು ಹೆಚ್ಚು ಆಳವಾಗಿರುವ ಕೊಳಗಳಿಗೆ ಹಾಯಿಸಲಾಗುವುದು.ಈ ಕೊಳಗಳಲ್ಲಿ ಹಲವು ದಿನಗಳವರೆಗಿರುವ ನೀರು ಸೂರ್ಯನ ತಾಪದಿಂದ ಭಾಗಶಃ ಆವಿಯಾಗಿ,ಉಪ್ಪಿನ ದ್ರಾವಣ ಸಾಂದ್ರೀಕರಿಸುತ್ತದೆ.ಅನಂತರ ಈ ದ್ರಾವಣವನ್ನು ಒಳಭಾಗದ ಅಷ್ಷು ಆಳವಲ್ಲದ ಕಟ್ಟೆಗಳಿಗೆ ರವಾನಿಸುತ್ತಾರೆ.ಕಾಲಕ್ರಮದಲ್ಲಿ ಉಪ್ಪು ಹರಳಿನ ರೂಪದಲ್ಲಿ ಹೊರಬೀಳುತ್ತದೆ.ಹರಳುಗಳನ್ನು ಕೆರೆದು,ಹೊರತೆಗೆದು,ಜರಡಿ ಹಿಡಿದು,ದಪ್ಪ ಮತ್ತು ಸಣ್ಣ ಹರಳುಗಳಾಗಿ ವಿಂಗಡಿಸಿ ಅನಂತರ ಮಾರಾಟಕ್ಕಿಡುತ್ತಾರೆ.ಅಡಿಗೆಗೆಂದು ನಾವು ಬಳಸುವ ಉಪ್ಪಿನ ಶೇ.60ರಷ್ಟು ಹೀಗೆ ಒದಗುತ್ತದೆ.ಫ್ರಾನ್ಸ್,ಇಟಲಿ,ಸ್ಪೇನ್,ಪೋರ್ಚುಗಲ್ ಮತ್ತು ಚೀನ ದೇಶಗಳಲ್ಲೂ ಅಮೆರಿಕ ಸಂಯುಕ್ತಸಂಸ್ಥಾನದ ಕ್ಯಾಲಿಫೋರ್ನಿಯಾದಲ್ಲೂ ಈ ವಿಧಾನ ರೂಢಿಯಲ್ಲಿದೆ.ಶೀತ ಪ್ರದೇಶಗಳಾದ ರಷ್ಯ ಮತ್ತು ಇಂಗ್ಲೆಂಡ್ಗಳಲ್ಲಿ ಸಮುದ್ರದ ನೀರನ್ನು ಹೆಪ್ಪುಗಟ್ಟಿಸುವ ವಿಧಾನ ಬಳಕ್ಕೆಯಲ್ಲಿದೆ.ಈ ಕ್ರಮದಿಂದಾಗಿ ಉಪ್ಪಿನ ಸಾಂದ್ರದ್ರಾವಣ ದೊರೆಯುತ್ತದೆ.ಇದನ್ನು ಇಂಗಿಸಿ ಉಪ್ಪಿನ ಹರಳುಗಳನ್ನು ಪಡೆಯುತ್ತಾರೆ.2 ಉಪ್ಪಿನ ಸರೋವರಗಳಿಂದ ಮತ್ತು ಭೂಗತ ನೀರಿನಿಂದ:ದೇಶೀಯ ಉಪ್ಪಿನ ಶೇ.30ಭಾಗ ಈ ವಿಧಾನದಿಂದ ತಯಾರಾಗುತ್ತದೆ.ಕಚ್ (ರನ್-ಆಫ್ಫ್-ಕಚ್)ಪ್ರದೇಶದ ಲವಣ ಸಂಗ್ರಹದ ಮೇಲೆ ಹಿಂದೆ ವೇಗವಾಗಿ ಬೀಸಿದ

ಗಾಳಿಯೊಡನೆ ತೂರಿಬಂದ