ಪುಟ:Mysore-University-Encyclopaedia-Vol-1-Part-1.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಣಗಳ ಗಾತ್ರ ಗಟ್ಟಿಯಾಗದ್ದು ಗಟ್ಟಿಯಾದದ್ದು 4. ಮಿಮೀ ಮೇಲೆ ಬೂದಿ (ದೂಳು) ಟಫ್ 4. ಮಿಮೀ ರಿಂದ 32 ಮಿಮೀವರೆಗೆ ಲಾಪಿಲ್ಲಿ ಲಾಪಿಲ್ಲಿ ಟಫ್ 32 ಮಿಮೀ ಮೇಲೆ ಬಂಡೆಗಳು ಬ್ರೆಚಿಯ (ಬ್ಲಾಕು) ಗುಂಡುಗಳು ಅಗ್ಲಾಮೆರೇಟ್ (ಬಾಂಬು) ಅಗ್ನಿಪರ್ವತಗಳ ಸ್ಫೋಟನೆಯಾದಾಗ ಸಾಮಾನ್ಯವಾಗಿ ಮೊದಲು ಹೊರಕ್ಕೆ ಎಸೆಯಲ್ಪಡುವುದು ಬೂದಿ ಅಥವಾ ಸಿಲಿಕಾ. ಇದು ಅತ್ಯಂತ ಸೂಕ್ಷ್ಮಕಣಗಳಿಂದ ಕೂಡಿದ್ದು ಗಟ್ಟಿಯಾಗದೆ ಹಾಗೆಯೇ ಉಳಿಯಬಹುದು. ಆದರೆ ಅನೇಕ ಸಂದರ್ಭಗಳಲ್ಲಿ ಬೂದಿ ಭೂಮಿಯ ಮೇಲೆ ಬಿದ್ದು ಮಿತವಾಗಿ ಗಟ್ಟಿಯಾಗುತ್ತದೆ. ಬೂದಿಯುಕ್ತವಾದ ಈ ವಸ್ತುವಿಗೆ ಟಫ್ ಎನ್ನುತ್ತಾರೆ. ಇದು ಅನೇಕ ವೇಳೆ ಪದರ ಪದರವಾಗಿರುವುದರಿಂದ ಪ್ರತಿಯೊಂದು ಪದರವೂ ನಿಯತಕಾಲವನ್ನು ಸೂಚಿಸುವ ಆಧಾರವಾಗುತ್ತದೆ. ಇದು ಅನೇಕ ವೇಳೆ ಸಮುದ್ರದ ತಳವನ್ನು ಸೇರಿ, ಮರಳು, ಜೇಡುಗಳ ಜೊತೆ ಶೇಖರವಾಗಿ ಟಫ್ ಮರಳುಶಿಲೆ ಮತ್ತು ಟಫ್ ಜೇಡುಶಿಲೆಗಳಾಗಿ ಮೈದೋರುತ್ತದೆ. ಬೂದಿಯ ಜೊತೆ ಅತಿ ಸೂಕ್ಷ್ಮವಾದ ಸಣ್ಣ ಸಣ್ಣ ಮೊನಚಾದ ಗಾಜಿನ ಕಣಗಳು ಮಿಶ್ರವಾಗಿರುತ್ತವೆ. ಇವುಗಳನ್ನು ಬರಿಯ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಲಾವಾರಸದ ಸಣ್ಣ ದ್ರವಕಣಗಳೇ ಇವಕ್ಕೆ ಮೂಲ. ಬಹುಬೇಗ ಗಾಳಿಯಲ್ಲಿ ಇವು ಸಣ್ಣಗಾಗುವುದರಿಂದ ಗಾಜಾಗಿ ಪರಿವರ್ತನೆ ಹೊಂದುತ್ತವೆ. ಇನ್ನೂ ಹೆಚ್ಚಿನ ಗಾತ್ರದ ಅಂದರೆ ಬಟಾಣಿಯಿಂದ ಬಾದಾಮಿಯಷ್ಟು ಗಾತ್ರವಿದ್ದು ಗುಂಡು ಅಥವಾ ಮೊನಚಾಗಿರುವ ಆಕಾರವನ್ನುಳ್ಳ ಶಿಲಾಛಿದ್ರಗಳು ಒಂದುಗೂಡಿರುವ ಶಿಲೆಯೇ ಲಾಪಿಲ್ಲಿ. ಕೆಲವೊಮ್ಮೆ ಶಿಲಾರಸ ಹಾಗೂ ಬೂದಿಯೊಡನೆ ಮಿಶ್ರಿತವಾಗಿ ಗಟ್ಟಿಯಾಗಿರುವುದೇ ಲಾಪಿಲ್ಲಿ ಟಫ್. ಆಸ್ಫೋಟನೆಯಾದಾಗ ಆ ಪ್ರಚಂಡ ರಭಸಕ್ಕೆ ಭಾರಿ ಖಂಡಗಳೇ ಹೊರಕ್ಕೆ ಸಿಡಿಯುತ್ತವೆ. 32 ಮಿಮೀಗಳಿಗಿಂತ ಹೆಚ್ಚಿನ ಗಾತ್ರವಿದ್ದು ಮೊನಚಾಗಿದ್ದಲ್ಲಿ ಅವನ್ನು ಬಂಡೆಗಳು (ಬ್ಲಾಕುಗಳು) ಎನ್ನುತ್ತಾರೆ; ಬೂದಿ ಅಥವಾ ಮರಳಿನ ಜೊತೆ ಸೇರಿ ಗಟ್ಟಿಯಾಗಿದ್ದಲ್ಲಿ ಬ್ರೆಕ್ಷಿಯ ಎನ್ನುತ್ತಾರೆ. ಹಾಗಲ್ಲದೆ ಗುಂಡು ಹಾಗೂ ಅಂಡಾಕಾರವಾಗಿದ್ದಲ್ಲಿ ಗುಂಡುಗಳು, ಮುದ್ದೆಗಳು (ಬಾಂಬು) ಎಂದೂ ಖಂಡಗಳು ಒಂದಕ್ಕೊಂದು ಸೇರಿ ಗಟ್ಟಿಯಾಗಿದ್ದಲ್ಲಿ ಅಗ್ಲಾಮೆರೇಟ್ ಶಿಲೆ ಎಂದೂ ಕರೆಯುತ್ತಾರೆ. ಅಗ್ನಿಶಿಲಾಛಿದ್ರಗಳು ಸಾಮಾನ್ಯವಾಗಿ ಜ್ವಾಲಾಮುಖಿಯ ಬಾಯಿಯ ಸುತ್ತಮುತ್ತ ಬಹುಮಟ್ಟಿಗೆ ಶೇಖರವಾಗುತ್ತವೆ. ಹಲವು ಸಂದರ್ಭಗಳಲ್ಲಿ ಅವುಗಳ ಮಂದ ಒಂದು ಸಾವಿರ ಅಡಿಯನ್ನು ಮುಟ್ಟಬಹುದು. ಮೌಂಟ್ ಎಟ್ನಾ ಅಗ್ನಿಪರ್ವತ ಬಹುಮಟ್ಟಿಗೆ ಶಿಲಾಛಿದ್ರಗಳ ಸಂಗ್ರಹಣದಿಂದಾದುದು. ಆದರೆ ಕೆಲವೊಮ್ಮೆ ಧೂಳು, ಬೂದಿ ಮತ್ತು ಇತರ ಸೂಕ್ಷ್ಮಕಣಗಳು ಕುಂಡದ ಬಳಿ ಶೇಖರವಾಗದೆ ಬಹುದೂರಕ್ಕೆ ಒಯ್ಯಲ್ಪಡುತ್ತವೆ. ಉದಾ: ಕಟ್ಮಾಯಿ ಅಗ್ನಿಪರ್ವತದಿಂದ ಸುಮಾರು ನೂರು ಮೈಲಿ ದೂರದಲ್ಲಿ ಕೊಡಿಯಾರ್ ದ್ವೀಪದಲ್ಲಿ ಸುಮಾರು ಹನ್ನೆರಡು ಅಡಿ ಮಂದವಾಗಿರುವ ಅಗ್ನಿಪರ್ವತದ ಬೂದಿ ಶೇಖರವಾಗಿದೆ. 1883ರಲ್ಲಿ ಕ್ರಕಟೊವಾ ಅಗ್ನಿಪರ್ವತದಿಂದ ಎಸೆಯಲ್ಪಟ್ಟ ಬೂದಿ ಮತ್ತು ಧೂಳು ವಾಯುಮಂಡಲವನ್ನೆಲ್ಲ ವ್ಯಾಪಿಸಿ ಸುಮಾರು ಎರಡು ವರ್ಷಗಳವರೆಗೆ ಕಂಡುಬರುತ್ತಿತ್ತು. (ಎಂ.ಎನ್.ವಿ.) ಅಗ್ನಿಶಿಲೆಗಳು: ಮಾತೃ ಶಿಲಾದ್ರವ ಆರಿ ನೇರವಾಗಿ ಅದರಿಂದ ರೂಪುಗೊಂಡ ಶಿಲೆಗಳು. ಈ ಬಗೆಯ ಶಿಲೆಗಳು ರೂಪುಗೊಳ್ಳಲು ಅತ್ಯುಚ್ಚ ಉಷ್ಣತೆ ಬೇಕು ಎಂದೇ ಇವುಗಳಿಗೆ ಅಗ್ನಿಶಿಲೆಗಳೆಂದು ಹೆಸರು. ಈ ಶಿಲಾದ್ರವವು ಸಾಮಾನ್ಯವಾಗಿ ಭೂಮಿಯ ಮೇಲ್ಮೈನಿಂದ ಸು 100 - 200 ಕಿಮೀ ಆಳದಲ್ಲಿ ಉತ್ಪತ್ತಿಯಾಗಿ, 14000 ಸೆಂ. - 17000 ಸೆ. ಉಷ್ಣಾತೆಯನ್ನು ಹೊಂದಿರುತ್ತದೆ. ಹೀಗೆ ಉತ್ಪತ್ತಿಯಾದ ಶಿಲಾದ್ರವವು ಹಂತಹಂತವಾಗಿ ಶೇಖರಣೆಗೊಂಡು ಹೆಚ್ಚಿನ ಒತ್ತಡದಲ್ಲಿರುತ್ತದೆ. ಈ ಒತ್ತಡಕ್ಕೆ ಭೂಮಿಯ ಮೇಲ್ಪದರವು (5 ಕಿಮೀ -100 ಕಿಮೀ ವರೆಗೆ) ದುರ್ಬಲವಾಗಿರುವ ಕಡೆ ಬಿರುಕು ಬಿಡುತ್ತದೆ. ಶಿಲಾದ್ರವವು ಸ್ಥಳವನ್ನು ಪ್ರವೇಶಿಸುತ್ತದೆ. ಆಗ ಎಲ್ಲ ದ್ರವಗಳ ಲಕ್ಷಣಗಳಂತೆ ಹೆಚ್ಚಿನ ಒತ್ತಡದ ಸ್ಥಳದಿಂದ ಕಡಿಮೆ ಒತ್ತಡವಿರುವ ಸ್ಥಳಕ್ಕೆ ಸೀಳುಗಳ ಮೂಲಕ ಹರಿಯುತ್ತದೆ. ಕೆಲವೊಮ್ಮೆ ಈ ಸೀಳು ಜಾಡುಗಳು ಶಿಲಾಗೋಳದ ಮೇಲ್ಭಾಗದವರೆಗೂ ಹರಡಿರುತ್ತದೆ. ಇಂತಹ ಸಂದರ್ಭಗಳಲ್ಲಿ ಈ ಶಿಲಾದ್ರವ ಹೆಚ್ಚಿನ ಉಷ್ಣಾಂಶ ಮತ್ತು ಒತ್ತಡದಿಂದ ಭೂಮಿಯ ಹೊರ ಮೈಮೇಲೆ ಜ್ವಾಲೆ ಮತ್ತು ಶಬ್ದದೊಂದಿಗೆ ಚಿಮ್ಮುತ್ತದೆ. ಆಗ ಜ್ವಾಲಾಮುಖಿ ಹುಟ್ಟುತ್ತದೆ. ಈ ಬಗೆಯಲ್ಲಿ ಹೊರಹೊಮ್ಮಿದ ಶಿಲಾದ್ರವವೇ ಲಾವ. ಕೆಲವೊಮ್ಮೆ ಈ ಸೀಳು ಜಾಡುಗಳು ಭೂಮಿಯ ಮೇಲ್ಪದರವಾದ ಕೆಳಗೆ ಅಂತ್ಯಗೊಂಡಾಗ, ಈ ಪಥದ ಮೂಲಕ ಸಾಗಿದ ಶಿಲಾದ್ರವವು ಭೂಮಿಯ ಮೇಲ್ಭಾಗಕ್ಕೆ ಚಿಮ್ಮದೇ, ಭೂಮಿಯ ಶಿಲಾಪದರದೊಳಕ್ಕೆ ನುಗ್ಗುತ್ತದೆ. ಆಗ ಉಷ್ಣಾಂಶವು ಮೂಲ ಶಿಲಾದ್ರವದ ಉಷ್ಣಾಂಶಕ್ಕಿಂತ ಬಹಳಷ್ಟು ಕಡಿಮೆಯಾಗಿ ಆರಿ ಘನರೂಪವನ್ನು ತಾಳುತ್ತದೆ. ಈ ಬಗೆಯಲ್ಲಿ ಮಾತೃ ಶಿಲಾದ್ರವದಿಂದ ರೂಪಿತವಾದ ಶಿಲೆಗಳೇ ಅಗ್ನಿಶಿಲೆಗಳು. ವಿಂಗಡಣೆ: ಅಗ್ನಿಶಿಲೆಗಳನ್ನು ಅನೇಕ ಅಂಶಗಳ ಆಧಾರದ ಮೇಲೆ ವಿಂಗಡಿಸಬಹುದು. ಶಿಲಾದ್ರವವು ಘನೀಕೃತಗೊಂಡ ನೆಲೆಯನ್ನಾಧರಿಸಿ, ಅಗ್ನಿಶಿಲೆಗಳನ್ನು ಎರಡು ವಿಧವಾಗಿ ವಿಂಗಡಿಸಲಾಗಿದೆ; (1) ಬಾಹ್ಯಸ್ಥ ಬಹಿರ್ಗತ ಶಿಲೆಗಳು ಅಥವಾ ಜ್ವಾಲಾಮುಖಿಜ (2) ಅಂತರಗ್ನಿ ಅಂತಸ್ಥ ಶಿಲೆಗಳು. ಜ್ವಾಲಾಮುಖಿಗಳಿಂದ ಹೊರಚಿಮ್ಮಿದ ಶಿಲಾದ್ರವದಿಂದ ಮಾರ್ಪಟ್ಟ ಶಿಲೆಗಳನ್ನು ಬಾಹ್ಯಸ್ಥ ಶಿಲೆ ಅಥವಾ ಜ್ವಾಲಾಮುಖಿಜ ಎಂದು ಕರೆಯಲಾಗಿದೆ. ಭೂಮಿಯ ಶಿಲಾಪದರದೊಳಗೆ ನುಗ್ಗಿದ ಶಿಲಾದ್ರವದಿಂದ ಮೈದಳೆದ ಶಿಲೆಗಳನ್ನು ಅಂತರಗ್ನಿ ಶಿಲೆಗಳು ಎಂದು ಹೆಸರಿಸಬಹುದು. ಅಂತಸ್ಥ / ಅಂತರಗ್ನಿ ಶಿಲೆಗಳನ್ನು ಅವುಗಳು ಜನಿಸುವ ಆಳವನ್ನು ಆಧಾರಿಸಿ ಪುನಃ ಅಂತರ್ಗತ (ಬಹು ಆಳದಲ್ಲಿ, ಅಂದರೆ ಸು 5 ಕಿಮೀ ಗಿಂತಲೂ ಹೆಚ್ಚು ಆಳದಲ್ಲಿ ಜನಿಸಿದ ಶಿಲೆಗಳು) ಮತ್ತು ಮಧ್ಯಸ್ಥ ಶಿಲೆಗಳು (400 ಮೀ - ಸು 2.5 ಕಿಮೀ ಆಳದಲ್ಲಿ ದೊರೆಯುವುವು) ಎಂದು ಎರಡು ಬಗೆಯಾಗಿ ವಿಂಗಡಿಸಲಾಗಿದೆ. ಅಗ್ನಿಶಿಲೆಗಳನ್ನು ಅವುಗಳ ಸ್ವರೂಪ, ಸ್ಥೂಲರಚನೆ ಮತ್ತು ಸೂಕ್ಷ್ಮರಚನೆಗಳ ಲಕ್ಷಣಗಳಿಂದ ವಿವರಿಸಬಹುದು. ಅಗ್ನಿಶಿಲೆಗಳ ಸ್ವರೂಪ: ಜ್ವಾಲಾಮುಖಿಯ ಶಿಲಾದ್ರವ ಚಿಮ್ಮುವುದು ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ: ಶಿಲಾದ್ರವ ಉತ್ಪತ್ತಿಯಾದ ಆಳದಲ್ಲಿನ ಒತ್ತಡ, ಶಿಲಾದ್ರವದ ಸ್ನಿಗ್ಧತೆ (visಛಿosiಣಥಿ), ಉಷ್ಣಾಂಶ ಹಾಗೂ ಶಿಲಾದ್ರವದಲ್ಲಿ ಅಡಕವಾಗಿರುವ ಅನಿಲಾಂಶಗಳು, ಹೆಚ್ಚು ಒತ್ತಡ, ಉಷ್ಣಾಂಶ, ಅನಿಲಾಂಶ ಹಾಗೂ ಕಡಿಮೆ ಜಿಗುಟುತನ ಇರುವಂತಹ ಶಿಲಾದ್ರವಗಳು ರಭಸವಾಗಿ ಹೊರಚಿಮ್ಮುತ್ತವೆ ಹಾಗೂ ವಿಸ್ತಾರವಾಗಿ ಹರಿಯುತ್ತವೆ. ಈ