ಪುಟ:Evaluating Wikipedia brochure.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸಂಪಾದಕರು ವಿಕಿಪೀಡಿಯವನ್ನು ಹೇಗೆ ಸುಧಾರಿಸುತ್ತಾರೆ?

ಹಲವರು ವಿಕಿಪೀಡಿಯವನ್ನು ಕೇವಲ ಲೇಖನಗಳ ಸಂಗ್ರಹ ಎಂದು ಮಾತ್ರ ತಿಳಿಯುತ್ತಾರೆ. ಆದರೆ ಆ ಲೇಖನಗಳನ್ನು ರಚಿಸುವಲ್ಲಿ ತುಂಬ ಶ್ರಮ ವಹಿಸಬೇಕಿರುತ್ತದೆ. ಕೊಡುಗೆದಾರರು ಲೇಖನಗಳು ಹೇಗೆ ವಿಕಸಿತವಾಗಬೇಕು ಎಂಬುದನ್ನು ಚರ್ಚಿಸುತ್ತಾರೆ . ಜೊತೆಗೆ ಮೂಲಾಧಾರಗಳ ಗುಣಮಟ್ಟವನ್ನು ಪರೀಕ್ಷಿಸುತ್ತಾರೆ. ಸಂಪಾದನೆಯ ನಿಯಮಗಳನ್ನು ಸಹ ರಚಿಸುತ್ತಿರುತ್ತಾರೆ. ಒಂದು ಲೇಖನವು ವಿಕಾಸವಾಗುವುದನ್ನು ತಿಳಿಯಲು ಮತ್ತೊಂದು ಸುಲಭ ದಾರಿಯೆಂದರೆ "ಚರ್ಚೆ ಪುಟವನ್ನು" ನೋಡುವುದು. ಎಲ್ಲ ಲೇಖನಗಳ ಮೇಲ್ಭಾಗದಲ್ಲಿ "ಚರ್ಚೆ" ಎಂಬ ಕೊಂಡಿಯಿರುತ್ತದೆ. ಅದರ ಮೇಲೆ ಕ್ಲಿಕ್ಕಿಸುವ ಮೂಲಕ ಎಷ್ಟೊಂದು ವಿಚಾರ ವಿನಿಮಯಗಳು ಒಂದು ಲೇಖನವನ್ನು ಸೃಷ್ಟಿಸುವಲ್ಲಿ ನಡೆದಿರುತ್ತದೆ ಎಂಬುದನ್ನು ತಿಳಿಯಬಹುದು.

ನಿಮಗೆ ಯಾವುದೇ ಲೇಖನಗಳ ಗುಣಮಟ್ಟದಲ್ಲಿ ಯಾವುದಾದರೂ ಸಂಶಯಗಳಿದ್ದರೆ ಅದನ್ನು ನೀವು ಸ್ವತಃ ಪರಿಹರಿಸಲಾಗದಿದ್ದರೆ ಅದರ ಕುರಿತು ನೀವು ಚರ್ಚೆ ಪುಟಗಳಲ್ಲಿ ಪ್ರಶ್ನೆಗಳನ್ನು ಕೇಳಬಹುದು. ಆ ಮೂಲಕ ಆ ಲೇಖನಗಳ ಸಂಪಾದಕರಿಂದ ಪ್ರತಿಕ್ರಿಯೆ ಪಡೆಯಬಹುದು.

ಲೇಖನದ ಗುಣಮಟ್ಟ ತಪಾಸಣೆ

ವಿಕಿಪೀಡಿಯದ ಲೇಖನಗಳ ಗುಣಮಟ್ಟವು ಹಲವು ಭಿನ್ನತೆಗಳನ್ನು ಹೊಂದಿರುತ್ತವೆ. ಕೆಲವು ಉತ್ಕೃಷ್ಟವಾದುದಾಗಿದ್ದರೆ ಕೆಲವು ವಿಷಯದ ಬಗ್ಗೆ ಆಳವಾದ ಮತ್ತು ನಿಖರತೆ ಇಲ್ಲದೆ ಸಂಶಯಾಗ್ರಸ್ತವಾಗಿದ್ದು ಸಮಯ ಸಂದರ್ಭಾನುಸಾರಕ್ಕೆ ಅನುಗುಣವಾಗಿಲ್ಲದೆ ಕಡಿಮೆ ಗುಣಮಟ್ಟ ಹೊಂದಿರುತ್ತವೆ. ಹಾಗಾಗಿ ನೀವು ಸುಲಭವಾಗಿ ಹೇಗೆ ಒಂದು ಲೇಖನದ ಗುಣಮಟ್ಟವನ್ನು ಅಳೆಯುತ್ತೀರಿ? ಇದಕ್ಕಾಗಿ ೨ ಪ್ರಮುಖ ದಾರಿಗಳಿವೆ...

  • ಹೆಚ್ಚು ಗುಣಮಟ್ಟದ ಲೇಖನಗಳು ಹೊಂದಿರಬೇಕಾದ ಪ್ರಮುಖ ಅಂಶಗಳನ್ನು ತಿಳಿಯುವುದು.
  • ಕಡಿಮೆ ಗುಣಮಟ್ಟದ ಲೇಖನ ಹೊಂದಿರುವ ಸಾಮಾನ್ಯ ಅಂಶಗಳನ್ನು ತಿಳಿಯುವುದು.

ಉತ್ತಮ ಲೇಖನದ ಮೌಲ್ಯಮಾಪನ

ಒಂದು ಲೇಖನದ ಮೇಲ್ತುದಿಯ ಬಲಭಾಗದಲ್ಲಿ ಚಿನ್ನದ ಅಥವಾ ತಾಮ್ರ ಬಣ್ಣದ ನಕ್ಷತ್ರ ಚಿಹ್ನೆ ಅಥವಾ A+ ಚಿಹ್ನೆಯಿರುವ ಹಸಿರು ಪರಿಧಿಯು ಕಂಡು ಬಂದಲ್ಲಿ ಅದರ ಕಾರಣ ಆ ಲೇಖನು ಸ್ಪಷ್ಟ, ಸೂಕ್ಷ್ಮ ತನಖೆಯ ಮೂಲಕ ಸಾಗಿದ್ದು ಅದು ವಿಕಿಪೀಡಿಯದ ಶ್ರೇಷ್ಟ ಲೇಖನಗಳಲ್ಲಿ ಒಂದಾಗಿರುತ್ತದೆ.