ಪುಟ:Mysore-University-Encyclopaedia-Vol-1-Part-1.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅನೇಕ ರಾಷ್ಟ್ರಗಳನ್ನು ಆರ್ಥಿಕಯೂಜನೆಗಳನ್ನು ಅನುಸರಿಸುತ್ತಲಿರುವುದು ಗಮನಿಸಬೇಕಾದ ಇನ್ನೊಂದು ಮುಖ್ಯ ಬೆಳೆವಣಿಗೆಯಾಗಿದೆ.ಅಂತಾರಾಷ್ಟ್ರಿಯ ಆರ್ಥಿಕ ಸಂಬಂಧ,ಬೆಳೆವಣಿಗೆಯೊಡನೆ ಈ ವಿವಿಧ ರಾಷ್ಟ್ರೀಯ ಆರ್ಥಿಕ ಯೂಜನೆಗಳನ್ನು ಸಮನ್ವಯಗೊಳಿಸಬೇಕಾದರೆ ಆರ್ಥಿಕ ಯೂಜನೆ ಬರಿ ರಾಷ್ಟ್ರೀಯ ಮಟ್ಟದಲ್ಲಲ್ಲದೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ನಡೆಯಬೆಕಾಗುವುದು. ಈ ಮುಖ್ಯ ಬೆಳೆವಣಿಗೆ ಅಂತಾರಾಷ್ಟ್ರಿಯ ಅರ್ಥಶಾಸ್ತ್ರ ಅಧ್ಯಯನದಲ್ಲಿ ಒಂದು ಹೊಸ ಅಧ್ಯಯವನ್ನೇ ತೆರೆದಿದೆ. ಪ್ರಪ್ಂಚದ ನಾನಾ ರಾಷ್ಟ್ರಗಳನ್ನು ಮೂಲಭೂತವಾಗಿ ಯಾವ ಅಧಾರ ಹಾಗೂ ತತ್ವಗಳ ಮೇಲೆ ಅವುಗಳ ಆರ್ಥಿಕ ಸ್ಂಭಂದಗಳನ್ನು ರೂಪಿಸಿಕೊಂಡರೆ ಪ್ರಪಂಚದಲ್ಲಿ ಶಾಂತಿ ಸ್ತಿಮಿತತೆ ಹಾಗು ಜೀವನಮಟ್ಟದ ಏರಿಕೆ ಸಾಧ್ಯವಾಗುವುದೆಂಬುದನ್ನು ಹುಡುಕುವುದೇ ಅಂತಾರಾಷ್ಟ್ರಿಯ ಅರ್ಥಶಾಸ್ತ್ರದ ಹಗ್ಗುರಿ. ಅಂತಾರಾಷ್ಟ್ರಿಯ ಆರ್ಥಿಕ ಮಂಡಳಿ: ಪ್ರಪಂಚದ ಹಲವಾರು ರಾಷ್ಟ್ರಗಳ, ಅದರಲ್ಲು ಹಿಂದುಳಿತ ದೇಶಗಳ,ಖಾಸಗಿ ಉದ್ಯಮಳಿಗೆ ಬಂಡವಾಳ ಒದಗಿಸುವ ಉದ್ದೆಶದಿಂದ ಈ ಅಂತಾರಾಷ್ಟ್ರಿಯ ಸಂಸ್ಥೆ(ಇಂಟರ್ ನ್ಯಾಷನಲ್ ಫೈನಾನ್ಸ್ ಕಾರ್ಪೊರೆಷನ-ಐ.ಎಫ್.ಸಿ)1956ರಲ್ಲಿ ಸ್ಥವಿತವಾಯಿತು.ಇದು ಇತರ ಅಂತಾರಾಷ್ಟ್ರಿಯ ಸ್ಂಸ್ಥೆಗಳೊತೆ ಒಂದು ಸಾರ್ವಜನಿಕ ಸಂಸ್ಥೆ. ಅಂತಾರಾಷ್ಟ್ರಿಯ ಪುನಾರಚನೆ ಮತ್ತು ಅಭಿವ್ರದ್ದಿ ಬ್ಯಾಕಿನ ಒಂದು ಉಪಸ್ಂಸ್ಥೆ. ಆದರೂ ಈ ಸಂಸ್ಥೆ ತನ್ನದೇ ಆದ ವೈಶಿಷ್ಟ್ಯ,ಸ್ವತಂತ್ರನೀತಿ ಇವೆ. ಆದರೆ ಈ ಸಂಸ್ಥೆಗೆ ಅಂತಾರಾಷ್ಟ್ರಿಯ ಬ್ಯಾಕಿನ ಸದಸ್ಯರು ಮಾತ್ರ ಸದಸ್ಯರಾಗಬಹುದೆಂದು ಮತ್ತು ಪೂರ್ಣ ಪ್ರಯೋಜನ ಪಡೆಯಬಹುದೆಂದೂ ನಿಯಮವಿದೆ. 1957ರಲ್ಲಿ ವಿಶ್ವದ ಸುಮಾರು ಮೂವತ್ತೆರಡು ದೇಶಗಳು ಮಾಂಡಲಿಯ ಸದಸ್ಯರಾಗಿದ್ದುವು. ಪ್ರಮುಖಸದಸ್ಯ ರಾಷ್ಟ್ರಗಳಲ್ಲಿ ಭಾರತದೇಶ ಒಂದು. ಸಂಸ್ಥೆಯ ಆಧಿಕ್ರತ ಬಂಡವಾಳ ಒಂದು ಸಾವಿರ ದಶಲಕ್ಷ ಡಾಲರ್ ಗಳು. ಈ ಪೈಕಿ ಹೂಡಿಕೆಯಾದ ಬಂಡವಾಳ 78.4 ದಶಲಕ್ಷ ಡಾಲರ್ ಗಳು. ಈ ಸಂಸ್ಥೆಯ ನಾಲ್ಕನೆಯ ಸದಸ್ಯರಾಷ್ಟ್ರವಾದ ಭಾರತ ಸುಮಾರು 4.43 ದಶಲಕ್ಷ ಡಾಲರ್ ಗಳಷ್ಟು ಹಣವನ್ನು ಬಂಡವಾಳವಾಗಿಕೊಟ್ಟಿಸದೆ. ಸದಸ್ಯರಾಷ್ಟ್ರಗಳಲ್ಲಿ ಅಗ್ರಸ್ಥಾನ ಅಮೇರಿಕದ ಸಂಯುಕ್ತ ಸ್ಂಸ್ಥಾನಕ್ಕೆ ಸೇರಿದೆ. ಈ ಆರ್ಥಿಕ ಸ್ಂಸ್ಥೆ ಅಂತಾರಾಷ್ಟ್ರಿಯ ವ್ಯವಹಾರ, ವಾಣಿಜ್ಯ ವ್ಯವಸಾಯ ಮುಂತಾದ ಕ್ಷೇತ್ರದಲ್ಲಿ ವ್ಯೆವಸ್ಥಿತವಾದ ರೀತಿಯಲ್ಲಿ ರಾಷ್ಟ್ರಗಳ ಆರ್ಥಿಕ ಬೆಳೆವಣೀಗೆ ಸಾಧಿಸಲು ಹಲವಾರು ಮಹತ್ತರವಾದ ಉದ್ದೇಶಗಳನ್ನು ಹೊಂದಿದೆ.1 ಮುಖ್ಯವಾಗಿ ಖಾಸಗಿಕ್ಷೇತ್ರದಲ್ಲಿ ಪ್ರಗತಿ ಸಧಿಸಲು ಖಾಸಗಿ ಬಂಡವಾಳಗಾರರು ಮುಂದೆ ಬರಲು ಸಾಧಾರಣವಾಗಿ ಅಡ್ಡಿ ಆತ್ಂಕಗಳಿರುವ ಹಿಂದುಳಿದ ರಾಷ್ಟ್ರಗಳಲ್ಲಿ ಖಾಸಗಿ ಬಂಡವಾಳಗಾರರ ಜೊತೆಗೆ ತನ್ನ ಬಂಡವಾಳವನ್ನು ವಿನಿಯೊಗಿಸಲು ಈ ಸಂಸ್ಥೆ ಮುಂದೆ ಬಂದಿದೆ. 2. ಖಾಸಗಿ ಬಂಡವಾಳಗಾರರ ಜೊತೆಗೆ ತನ್ನ ಬಂಡವಾಳವನ್ನು ವಿನಿಯೊಗಿಸಿ ರಾಷ್ಟ್ರದ ಆರ್ಥಿಕ ಪ್ರಗತಿಗೆ ಅಗತ್ಯವಾದ ಕ್ಯಗಾರಿಕಾ ಉದ್ಯಮಗಳ ಅನುಭವ, ತಾಂತ್ರಿಕಶಿಕ್ಷಣ, ಕೈಗಾರಿಕ ವ್ಯವಸ್ಥೆ ಮತ್ತು ಬಂಡವಾಳ-ಇವುಗಳ ನಮನ್ವಯ ಮಾದುವ ಒಂದು ಮಹತ್ತರವಾದ ಆಕಾಂಕ್ಷೆಯನ್ನು ಈ ಸಂಸ್ಥೆ ಹೊಂದಿದೆ.3.