ಪುಟ:ಕರ್ನಾಟಕ ಗತವೈಭವ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧ನೆಯ ಪೂರಕ ಪ್ರಕರಣ -ಕರ್ನಾಟಕ-ಇತಿಹಾಸ-ಸಂಶೋಧನ

_ ೧೩೩


of such remains as most deserve notice with the history of them, so far as it is traceable, and record the traditions that are retained regarding them."
ಸಾರಾಂಶ:- “ಐತಿಹಾಸಿಕ ಅವಶೇಷಗಳನ್ನು ಅವುಗಳ ಇತಿಹಾಸ ಸಹಿತವಾಗಿ ಗೊತ್ತಿದ್ದ ಮಟ್ಟಿಗೆ ಚನ್ನಾಗಿ ವರ್ಣಿಸಿ ಅವುಗಳ ವಿಷಯಕ್ಕೆ ಪ್ರಚಲಿತವಿರುವ ದಂತಕಥೆಗಳನ್ನು ಸಂಗ್ರಹಿಸುವುದು” ಎಂದು ಸರಕಾರದವರು ಗೊತ್ತುಪಡಿಸಿದ್ದರು. ಆದರೆ ೧೮೬೨ರಿಂದ ೧೮೮೧ರ ವರೆಗೆ ಕೆಲಸಮಾಡಿದರೂ ಈ ಕೆಲಸವು ಮುಗಿಯದಿದ್ದುದರಿಂದ ಆ ವರ್ಷ ಡಾಯರೆಕ್ಟರ್ ಜನರಲ್ ಆಫ್ ಆರ್ಕಿಆಲಾಜಿಕಲ್ ಸರ್ವೆ ಆಫ್ ಇಂಡಿಯಾ (Director General of Archaeological Survey of India) ಎಂಬುದೊಂದು ಹೊಸ ಹುದ್ದೆಯು ನಿರ್ಮಿತವಾಗಿ, ಅವನು ಮುಂದೆ ಹೇಳಿದಂತೆ ಕೆಲಸ ಮಾಡತಕ್ಕುದಂದು ಗೊತ್ತಾಯಿತು, ಅದೇನೆಂದರೆ 'To superintend a complete Search over the whole country and make a systematic record and description of all architectural and other remains that are remarkable alike for their antiquity, or other beauty or their historical interest.' ಸಾರಾಂಶ:- ದೇಶದಲ್ಲೆಲ್ಲ ಸಂಚರಿಸಿ, ಪ್ರಾಚೀನತೆ, ಸೌಂದರ್ಯ, ಅಥವಾ ಐತಿಹಾಸಿಕ ಮಹತ್ವ ಇವುಗಳ ಬಗ್ಗೆ ಖ್ಯಾತಿಗೊಂಡಿರುವ, ಶಿಲ್ಪಕಲೆಯ ಮತ್ತು ಮಿಕ್ಕ ಅವಶೇಷಣಗಳನ್ನು ಸಂಗ್ರಹಿಸುವುದೂ ಚನ್ನಾಗಿ ಅವುಗಳ ವರ್ಣನೆಯನ್ನು ಬರೆಯುವುದೂ, ಆದರೆ ಈ ಮೇರೆಗೆ ಇಡೀ ಹಿಂದುಸ್ಥಾನದಲ್ಲಿ ಅವರು ಕೆಲಸ ಮಾಡಬೇಕೆಂದು ಗೊತ್ತಾದರೂ ಅವರು ಪ್ರಾಯಶಃ ಉತ್ತರ ಹಿಂದುಸ್ಥಾನದಲ್ಲಿ ಮಾತ್ರವೇ ಕೆಲಸ ಮಾಡಿರುತ್ತಾರೆ.
ಮುಂಬಯಿ ಮದ್ರಾಸ ಇಲಾಖೆಗಳಲ್ಲಿ ೧೮೭೪ ನೆಯ ಇಸವಿಯವರೆಗೆ ಆರ್ಕಿಆಲಾಜಿಕಲ್ ಸರ್ವೆ(Archaeological Survey)ಗೆ ಪ್ರಾರಂಭ ಆಗಲಿಲ್ಲ. ಆಗ ಎಂದರೆ ೧೮೭೪ನೆಯ ಇಸವಿಯಲ್ಲಿ ಇವೆರಡೂ ಇಲಾಖೆಗಳು ಡಾ. ಬರ್ಗೆಸ್‌ (Dr. Burgess) ಇವರ ವಶಕ್ಕೆ ಪ್ರತ್ಯೇಕವಾಗಿಯೇ ಒಪ್ಪಿಸಲ್ಪಟ್ಟುವು. ಆಗ ಹಳೆಯ ಇಮಾರತುಗಳನ್ನು ರಕ್ಷಿಸುವುದು, ಅಥವಾ ದುರಸ್ತ