ಪುಟ:Chirasmarane-Niranjana.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚಿರಸ್ಮರಣೆ ೧೮೯ ಅದಕ್ಕೂ ಉತ್ತರ ಬರಲಿಲ್ಲ. ಶಾಲೆಗೆ ಯುವಕರಾದ ಹೊಸ ಉಪಾಧ್ಯಾಯರೊಬ್ಬರು ಬಂದರು. ಸ್ವಲ್ಪ ಮಟ್ಟಿಗ ರೈತ ಚಳವಳಿಗೆ ಅನುಕೂಲರೇ, ಹಾಗಾಗಿ, ಗ್ರಾಮ ಪಂಚಾಯತಿ ಈಗಿಂದೀಗ ಆಗಬೇಕೆಂದೇನೂ ರೈತರು ಹಟ ತೊಡಲಿಲ್ಲ. ಆದರೆ ಬಂಜರು ಭೂಮಿ ಇನ್ನು ಹಾಗೇ ಇದೆಯೆಂದು ಅವರಿಗೆ ಬೇಸರವಾಯಿತು."ಸಾಗುವಳಿ ಮಾಡೋಣ. ಕಂದಾಯ ಆಮೇಲೆ ಗೊತ್ತುಪಡಿಸಲಿ" ಎಂದು ನಿರ್ಧರಿಸಿ, ಸಂಘದ ನೇತೃತ್ವದಲ್ಲಿ ರೈತರು ಪೊದೆಪೊದರು ಕಡಿದು ನೆಲ ಹದಗೊಳಿಸಿದರು. ... ಆ ವರ್ಷ ಓಣಂ ಹಬ್ಬದ ಹೊತ್ತಿಗೆ ಚಿರುಕಂಡನ ಮದುವೆಯೂ ಆಯಿತು ಅಪ್ಪು ವಿವಾಹವಾದ ಮೇಲೆ ಚಿರುಕಂಡನ ತಾಯಿ ಒಂದೇ ಸಮನೆ ಮಗನನ್ನು ಪೀಡಿಸುತ್ತಲೇ ಇದ್ದಳು. ತಾಯಿ ತಂದೆಯರ ಒಬ್ಬನೇ ಮಗ, ಅವರು ಸುಮ್ಮನಿರುವುದುಂಟೆ? ಆತನಿಗಾಗಿ ಹುಡುಕಿದುದೂ ಹೊರಗಿನ ಹೆಣ್ಣಲ್ಲ, ತ್ರಿಕರಪುರದ ಚಂದುವಿನ ತಂಗಿ. ಹಿರಿಯರ ಸಂತೃಪ್ತಿಗಾಗಿ ಇದೊಂದು ತಾನು ಮಾಡುತ್ತಿರುವ ತ್ಯಾಗವೆಂದು ಭಾವಿಸಿಯೇ ಚಿರುಕಂಡ ಹುಡುಗಿಯನ್ನು ನೋಡಲು ಹೋದ. ತನ್ನ ಕೈಬರಹದಲ್ಲಿದ್ದ ಎಲ್ಲ ಕರಪತ್ರಗಳನ್ನೂ ಲೇಖನಗಳನ್ನೂ ಆಕೆ ಓದಿರುವಳೆಂದು ತಿಳಿದಮೇಲೆ, ಮರುಮಾತನ್ನಾಡದೆ ಬಂದ. ತ್ಯಾಗದ ಯೋಚನೆ ಆ ಬಳಿಕ ಸುಳಿಯಲಿಲ್ಲ, ಬದಲು, ಬಾಲಸಂಘದ ಹಾಗೆಯೇ ಸ್ತ್ರೀಯರ ಶಾಖೆಯನ್ನೂ ಬೇಗನೆ ರೂಪಿಸಬೇಕೆಂಬ ವಿಚಾರ ಮೂಡಿತು! ಸಂಘದ ಪ್ರಮುಖರ ವೃತ್ತದೊಳಗಿನ ಗೊಂದಲ ಸಾಲದೆಂದು, ಅಪ್ಪು. ತಂದೆಯಾದ ಜಾನಕಿ ಮುದ್ದುಮುದ್ದಾದ ಗಂಡುಮಗುವನ್ನು ಹೆತ್ತಳು.


ಇಷ್ಟಾದರೂ ಈ ವೈಯಕ್ತಿಕ ವಿಷಯಗಳಿಂದ ಸಾಂಘಿಕ ಚಟುವಟಿಕೆಗಳಿಗೆ ಹಾನಿಯೇನು ಒದಗಲಿಲ್ಲ.

ರಾಷ್ಟ್ರಿಯ ಹೋರಾಟ ಮತ್ತೆ ಮೊದಲಾಯಿತು. ಯುದ್ಧ ವಿರೋಧಿಗಳೆಂದು ಅಲ್ಲೊಬ್ಬರು ಇಲ್ಲೊಬ್ಬರು ಸೆರೆಮನೆ ಸೇರಿದರು. ಕ್ರಾಂತಿಕಾರರಿಗಾಗಿ ಬೇಟೆ ನಡೆಯಿತು. ಕರಾಳ ಶಾಸನಗಳು ರೂಪುಗೊಂಡವು. ಕಯ್ಯೂರಿನ ರೈತರು ಯಾವ ಅಳುಕೂ ಇಲ್ಲದೆ ಮುನ್ನಡೆದರು.

ದಿನವೂ ದುಡಿತದ ಬಳಿಕ ಸಂಜೆ ಕವಾಯಿತು. ಅವರವರ ವೆಚ್ಚದಿಂದಲೇ ಸಮವಸ್ತ್ರ. ಲೆಫ಼್ಟ್-ರೈಟ್, ಲೆಫ಼್ಟ್-ರೈಟ್ , ಲೆಫ಼್ಟ್–

ನಾಯಕ ಅಬೂಬಕರ್ ಅವರಿಗೆಲ್ಲ ಹೇಳುತ್ತಿದ್ದ: "ಸಂಗಾತಿಗಳೇ! ಇದನ್ನು ಮರೀಬೇಡಿ. ನಾವು ಹಿಂಸೆಗೆ ವಿರೋಧಿಗಳು. ಎಲ್ಲಾ -