ಪುಟ:Vimoochane.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩

ಮಣಿ--ಕಾಮೇಶರಿಗೆ ಸಲ್ಲಬೇಕು. ಕಲಾವಿದ ರಮೇಶರದು ಸುಂದರ ಹೊದಿಕೆಯ ಚಿತ್ರ. ಅವರಿಗೂ ನೆನಕೆ ಸಲ್ಲಬೇಕು."
ಅವರು ಹಸ್ತಪ್ರತಿಯನ್ನು ಮೇಜಿನ ಮೇಲಿಟ್ಟು ಎದ್ದುನಿಂತರು.
"ನಿಮ್ಮಗೆ ತೊಂದರೆ ಕೊಟ್ಟಹಾಗಾಯಿತು. ಹೋಗಿ ಬರಲೆ
ಹಾಗಾದರೆ?"
"ಯಾಕೆ ಅವಸರ? ಹೋಟೆಲಿನವರೆಗೂ ಬರ್ತೀನಿ. ಸ್ವಲ್ಪ
ಕಾಫಿ ಹೀರಿಕೊಂಡು ಹೋಗಿ."
ನಾನು ಬಾಗಿಲೆಳೆದುಕೊಂಡು ಹೊರಬಿದ್ದಾಗ ಆ ವ್ಯಕ್ತಿ ನಗುತ್ತ
ಕೇಳಿದರು:
"ನೀವು ಬಾಗಿಲು ತೆರೆದಾಗ ನಾನೇನು ಭಾವಿಸಿದೆ ಗೊತ್ತೆ?"
"ಮನೋ ವಿಶ್ಲೇಷಣೆ ಮಾಡುತ್ತೇನಾದರೂ ಒಬ್ಬರ ಭಾವನೆ
ಗಳನ್ನೆಲ್ಲ ಊಹಿಸಿಕೊಳ್ಳುವುದು ಅಷ್ಟು ಸುಲಭವಲ್ಲ.ಅಂತೂ ನನ್ನ
ವಿಷಯ, ನನ್ನ ಮನೆಯ ವಿಷಯ, ಯೋಚಿಸಿರಬೇಕು. ಹೌದೆ?"
"ಹೌದು, ನಿಮ್ಮನ್ನು ನೋಡಿದಾಗ, ನಿರಂಜನರ ತಮ್ಮನೋ
ಹುಡುಗನೋ ಇರಬಹುದೂಂತ ತೋರಿತು."
"ನಿರಂಜನರ ಹುಡುಗ? ಓ ದೇವರೇ! ನಾನು ಮೂವತ್ತರ
ಗಡಿ ಸಮಾಪಿಸಿದ್ದೇನೆ--ಅಷ್ಟೆ. ಅಷ್ಟರಲ್ಲೇ ನನ್ನನ್ನು ಕಳಿಸುವ
ಯೋಚನೆ ಮಾಡ್ತಿದ್ದೀರಲ್ಲ! ಇನ್ನೂ ಕೆಲವು ವರ್ಷ ಬದುಕಬೇಕೂಂ
ತಿದೆ ಇವರೆ. ಇನ್ನೂ ಬರೆಯುವ ಕೆಲಸ ಮುಗಿದಿಲ್ಲ."
"ತ್ಸ್ ತ್ಸ್--ಹಾಗನ್ಸಾರದು," ಎಂದರು ಅವರು.
ಕಾಫಿ ಕುಡಿದಾದ ಮೇಲೆ ನಾನು ಕೇಳಿದೆ:
"ನನಗೊಂದು ಉಪಕಾರ ಮಾಡ್ತೀರಾ?"
"ಏನು ಹೇಳಿ?"
"ಈ ಕಾದಂಬರಿ ಓದಿದವರೆಲ್ಲ, ತಮ್ಮ ಸ್ಪಷ್ಟ ಆಭಿಪ್ರಾಯ
ಬರೆದು ನನಗೆ ತಿಳಿಸಬೇಕೂಂತ ನನ್ನ ಆಸೆ. ನೀವು_"
"ಓದಿದೊಡನೆ ಅವಶ್ಯವಾಗಿ ಬರೀತೀನಿ. ಆದರೆ ವಿಳಾಸ?"
"ವಿಳಾಸಕ್ಕೇನು? ನಿರಂಜನ, ಬಸವನಗುಡಿ, ಬೆಂಗಳೂರು-೪