ಪುಟ:ಕರ್ನಾಟಕ ಗತವೈಭವ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೫೮

ಕರ್ನಾಟಕ-ಗತವೈಭವ.


ಶ್ರೀವಿದ್ಯಾರಣ್ಯರ ಇಷ್ಟ ದೇವತೆಯಾದ ಭುವನೇಶ್ವರಿ ಸ್ತುತಿ.

(ಧಾಟಿ – “ಜಯಮೋಹಿನೀ ಮಧುಸೂದನಜಯ” ಎಂಬ ಪದದಂತೆ).
           ಜಯ ಜಯ ಜಯ ಭುವನೇಶ್ವರೀ || ಪಲ್ಲ ||
           ಜಯ ಭುವನೇಶ್ವರಿ |
           ಜಯ ಮಾಹೇಶ್ವರಿ |
           ಜಯ ಕೃಪಾಕರೆ ಶುಭಕರೆ ಶ್ರೀಕರೆ || ಅನು ||
           ಭೂಸುರಮಾಧವ |
           ನಾಶಾ ಪಾಶವ |
           ನಾಶಗೊಳಿಸಿ ಸ |
           ನ್ಯಾಸಿಯ ಮಾಡಿದೆ ||೧||
           ವರ ವಿದ್ಯಾರ |
           ಣ್ಯರ ತಪಕೊಲೆದೌ |
           ಸುರಿಸಿದೆ ಚಿನ್ನದ |
           ಸರಿಯಂ ಧರೆಯೊಳು || ೨ ||
           ನೆರೆ ಕನ್ನಡದವರ |
           ಸರ ಬೆಳ್ ಜಸಮಂ |
           ಧರೆಯೊಳು ಸಲೆ ಸು |
           ಸ್ಥಿರಗೊಳಿಸಿದವಳೆ || ೩ ||
                                            ಸಕ್ಕರಿ ಬಾಳಾಚಾರ್ಯ ( ಶಾಂತಕವಿ).


ಸರ್ವಭಕ್ಷಕನಾದ 'ಕಾಲ' ನಿಗೆ ಪ್ರಾರ್ಥನೆ.

ತಾತ್ಪರ್ಯ:- ಸರ್ವಭಕ್ಷಕನಾದ ಕಾಲನೇ, ಕರ್ನಾಟಕ ವೈಭವವನ್ನು ತಿನ್ನುವಾಗ ನಿನ್ನ ಕಣ್ಣಿಗೆ ಬೀಳದಿದ್ದ ಶಿಲಾಲೇಖ ತಾಮ್ರ ಪಟಗಳನ್ನು ನಾವು ಬಳೆದು ಆರಿಸಿಕೊಂಡು, ಪುನಃ ನೀನು ತಿನ್ನಬಾರದೆಂದು ಕಹಿಪದಾರ್ಥಗಳಿಂದ