ಪುಟ:ಯಶೋಧರ ಚರಿತೆ.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦

ಯಶೋಧರ ಚರಿತೆ

ನಿಯತಿಯನಾರ್ ಮೀರುವೆದಪರ್
ಭಯಮೇವುದೊ ಮುಟ್ಟಿದೆಡೆಗೆ ಸೈರಿಸುವುದೆ ಕೇಳ್
ನಯವಿದೆ ಪೆತ್ತ ಪರೀಷಹ
ಜಯಮೆ ತಪಂ ತಪಕೆ ಬೇರೆ ಕೋಡೆರಡೊಳವೇ ೪೯

ಅಣ್ಣನ ಮಾತಂ ಮನದೊಳ್
ತಿಣ್ಣಂ ತಳೆದೆಂದಳನುಜೆ ಮಾಡಿದುದಂ ನಾ-
ವುಣ್ಣದೆ ಪೋಕುಮೆ ಭಯಮೇ
ಕಣ್ಣ ಭವಪ್ರಕೃತಿ ವಿಕೃತಿ ನಾವರುದುದೇ ೫೦

ಎನಿತೊಳವಪಾಯಕೋಟಿಗ-
ಳನೀರ್ಕಂ ಗೇಹಮಲ್ತೆ ದೇಹಮಿದಂ ನೆ-
ಟ್ಟನೆ ಹೊತ್ತು ಸುಖಮರಸುವ
ಮನುಜಂ ಮೊರಡಿಯೊಳೆ ಮಾದುಪಳಮರಸದಿರಂ ೫೧


ಆ ಇಬ್ಬರು ಮಕ್ಕಳನ್ನು ಪಾಪಕಾರ್ಯ ಪ್ರವೃತ್ತನಾದ ಚಂಡಕರ್ಮನು
ಹಿಡಿದೊಯ್ಯತೊಡಗಿದನು. ಇಬ್ಬರಿಗೂ ಆತನ ಉದ್ದೇಶದ ಅರಿವಾಯಿತು.
ಅಭಯರುಚಿ ತಂಗಿಯೊಡನೆ “ಎಲೆ ತಂಗಿ, ನಮಗೆ ಮೃತ್ಯುವೇ
ಸನ್ನುಹಿತವಾಗಿದೆಯೆಂದು ಹೆದರಿಕೊಳ್ಳಬೇಡ” ಎಂದು ಮಾತಿಗಾರಂಭಿಸಿದನು.
೪೯. ವಿಧಿನಿಯಮವನ್ನು ಮೀರುವವರು ಯಾರಿದ್ದಾರೆ? ಅದಕ್ಕಾಗಿ ಅಂಜಿದರೆ
ಪ್ರಯೋಜನವಾದರೂ ಏನಿದೆ ? ಏನಾದರೂ ಸಂಘಟಿಸಿತೆಂದಾದರೆ ಅದನ್ನು
ಸಹಿಸಿಕೊಳ್ಳುವುದೇ ನ್ಯಾಯವಾದ ದಾರಿ. ಒದಗಿಬರುವ ಪರೀಷಹಗಳನ್ನು೨೧
ಜಯಿಸುವುದನ್ನೇ ತಪಸ್ಸು ಎಂಬ ಹೆಸರಿನಿಂದ ಕರೆಯುತ್ತಾರೆ. ತಪಸ್ಸಿಗೆ ಬೇರೆ
ಎರಡು ಕೋಡುಗಳಿವೆಯೆ?”೨೨ ೫೦. ಅಣ್ಣನ ಈ ಮಾತನ್ನು ಅಭಯಮತಿ
ಚೆನ್ನಾಗಿ ಗ್ರಹಿಸಿಕೊಂಡಳು. ಅವಳೂ ಮಾತಾಡತೊಡಗಿದಳು : “ಅಣ್ಣಾ
ಮಾಡಿದುದರ ಫಲವನ್ನು ನಾವು ಉಣ್ಣದೆ ಹೋದೇವೆಯೆ? ಅದಕ್ಕಾಗಿ ಭಯ
ಪಡುವುದೇಕೆ ? ಜನ್ಮವೆತ್ತಿದ ಮೇಲೆ ಸಹಜವಾಗಿ ಏನೆಲ್ಲ ವಿಕಾರಗಳು