ಪುಟ:Banashankari.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸುಬ್ಬಾಕ್ಕಾ,ಏ ಸುಬ್ಬಾಕ್ಕಾ ..."

ಆ ಸ್ವರ ಹೊರಗಿನಿಂದ ಮೆಲ್ಲನೆ ಕರೆಯಿತು. ಮನೆಯೊಳಗಿಂದ ಉತ್ತರ ಬರಲಿಲ್ಲ. 

" ಸುಬ್ಬಾಕ್ಕಾ..."

ಕುಳಿತಲ್ಲಿಯೇ ತೂಕಡಿಸುತ್ತಿದ್ದ ಅಮ್ಮಿ ಹೌಹಾರಿ ಎಚ್ಚತ್ತಳು.

ಯಾರು?"

" "ಅಜ್ಜಿಗೆ ಹಾಗಿದೆ ಈಗ?" 

ಮೃದುವಾಗಿತ್ತು ಆ ಸ್ವರ. ಅದು ಯಾರದೋ ಅಮ್ಮಿಗೆ ತಿಳಿಯಲಿಲ್ಲ, ಆದರೆ ಆ ಧ್ವನಿಯಲ್ಲಿ ಅನುಕಂಪವಿತ್ತು. ಅಮ್ಮಿ ಎದು ಬಾಗಿಲು ತೆರೆದಳು.

ಆಗಿನ್ನೂ ಬೆಳಕು ಹರಿದಿರಲಿಲ್ಲ. ನಕ್ಷತ್ರಗಳ ಪ್ರಕಾಶದಲ್ಲಿ ಬಾಗಿಲ ಬಳಿ ನಿಂತಿದ್ದ ವ್ಯಕ್ತಿಯನ್ನು ಅಮ್ಮಿ ಕಂಡಳು. ಪುರುಷಾಕೃತಿ. ಆದರೂ ಯಾಕೋ ಅಮ್ಮಿಗೆ ದಿಗಿಲಾಗ ಲಿಲ್ಲ. ತನಗೆ ಪರಿಚಯವಿದ್ದ ಸ್ವರ ಬಾಳೆಮಣ್ನೂರಿಗೆ ತಾನು ಬಂದು ನೆಲೆಸಿದ ಈ ಹತು ವರ್ಷಗಳಲ್ಲಿ ಆ ಧ್ವನಿಯನ್ನು ಹಲವು ಸಾರೆ ಆಕೆ ಕೇಳಿದ್ದಳಲ್ಲ?

.ಮುಂಜಾವದ ತಣ್ಣನೆಯ ಗಾಳಿ ಹೊರಗಿನಿಂದ ಒಳಕ್ಕೆ ನವುರಾಗಿ ಬೀಸುತ್ತಿತು. ಎಣ್ಣೆ ಮುಗಿಯಿತೆಂದು ಗೋಳಿಡುತ್ತ ಅತ್ತಿಂದಿತ್ತ ತೂರಾಡುತ್ತಿತ್ತು ಮಿಣಿಮಿಣಿ ದೀಪ. ಅಮ್ಮಿ ಚಲನೆ ಇಲ್ಲದೆ ಬೊಂಬೆಯ ಹಾಗೆ ನಿಂತಿದ್ದಳು. ಆ ವ್ಯಕ್ತಿಯೂ ಮುಂದಿನ ಮಾತಿಗಾಗಿ ತಡವರಿಸಿದಂತೆ ತೋರಿತು. "ಹಾಗಿದೆ ಸುಬ್ಬಕ್ಕನಿಗೆ?" "ಹ್ಯಾಗಿದೆ ಸುಬ್ಬಕ್ಕನಿಗೆ?"

ಹು೦... ?

" ಅಜ್ಜಿಗೆ ಹ್ಯಾಗಿದೆಯಮ್ಮ?" ಸ್ವರ ಯಾರದೆಂದು ಗುರುತು ಹಿಡಿಯುವ ಯತ್ನದಲ್ಲೇ ಮನಸ್ಸು ನೆಟ್ಟಿದ್ದ ಆಮ್ಮಿ ಉತ್ತರ ಕೊಡಲಿಲ್ಲ; "ಯಾಕೆ-ಇನ್ನೂ ನಿದ್ದೆ ಗುಂಗಿನಲ್ಲೇ ಇದ್ದೀಯೇನು ?" ಗೇಲಿ ಮಾಡಿದ ಆ ಪ್ರಶ್ನೆಯ ಜತೆಯಲ್ಲಿ ಮಿತವಾದ ನಗು, ಉತ್ತರವಾಗಿ ತಾನೂ ನಕ್ಕಂತೆ ಭಾಸವಾಯಿತು ಅಮ್ಮಿಗೆ. " ಅಜ್ಜಿಗೆ ಈಗ್ತಾನೇ ಮಂಪರು ಬಂತು." “ಹೂಂ...ಬ೦ದು ಕರೆದೆ ಎಂತ ಹೆದರಿಕೆಯಾಯ್ತೆನು? ನದೀ ಕಡೆಗೆ ಹೋಗ್ತಾ। ಇದ್ದೆ...ವಿಚಾರಿಸ್ಕೊಂಡು ಹೋಗೋಣಾಂತ ಇಲ್ಲಿಗ್ಬಂದೆ ." ಅವರು ದೇವಸ್ಥಾನದ ಪಾರುಪತ್ಯಗಾರರಾಗಿದ್ದರು–ನಾರಾಯಣರಾಯರು. ಗುರುತು ಸಿಕ್ಕಿದ ಮೇಲೆ ಮುಂದೇನು ಹೇಳಬೇಕೋ ಅಮ್ಮಿಗೆ ತೋಚಲಿಲ್ಲ.