ಪುಟ:ಬತ್ತೀಸಪುತ್ತಳಿ ಕಥೆ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ e ೧೨೬ ಕರ್ಣಾಟಕ ಕಾವ್ಯಕಲಾನಿಧಿ. ವರಹವ ಕೊಡಲಾಗಿ ; ಅವನು ಆ ಹಣವ ತೆಗೆದುಕೊಂಡು ಬಂದು ಪೇಟೆ ಪೇಟೆ ತಿರಿಗಿ ಯಾರೂ ಕೊಳ್ಳದಿರಲಾಗಿ ; ಆ ಸಮಯಕ್ಕೆ ಆ ಪಟ್ಟಣದೊಳೊ ಕಾಲಜ್ಞಾನಿಯೆಂಬುವನು ಒಂದು ಚೀಟಿನಲ್ಲಿ ನದಿಯ ಫಲ, ವೃಕ್ಷದ ಫಲ, ಭೇರಿಯ ಫಲ, ಉದ್ದಿನ ಹಿಟ್ಟು, ಹೆತ್ತ ತುಪ್ಪ ಇರುವುದು ” ಎಂದು ಬರೆದು, ಈ ಕೀಟ ಯಾರಾದರೂ ಸಾವಿರ ವರಹಕ್ಕೆ ತೆಗೆದುಕೊಳ್ಳಿರೆಂದು ಪೇಟೆ ಕೋಟೆಯಲ್ಲಿ ಸಾರುತ್ತಿದ್ದನು. ಯಾರೂ ತೆಗೆದುಕೊಳ್ಳದಿರುವುದ ಜಯಪಾಲನು ಕಂಡು ತಮ್ಮ ಅಕ್ಕ ತನಗೆ ವ್ಯಾಪಾರಕ್ಕೆ ಕೊಟ್ಟಿದ್ದ ಸಾವಿರ ವರಹನ ಕೊಟ್ಟು ಆ ಚೀಟ ಕೊಂಡುಕೊಂಡ ಸುದ್ದಿಯ ಭದ್ರಸೇನ ಕೇಳಿ, ಅವನ ಕರೆಸಿ, ಬೈದು, ಎಲ್ಲಾದರೂ ಹೋಗು ಎಂದು ಊರಬಿಟ್ಟು ಹೋ ಆಡಿಸಲಾಗಿ ; ಅವನು ಅಲ್ಲಿಂದ ಅನೇಕ ವ್ಯಸನ ಪಡುತ್ತ ಒಬ್ಬನೆ ಬಂದು ದಾರಿಯಲ್ಲಿ ಹೋಗುವಲ್ಲಿ, ಅಲ್ಲೊಂದು ನದಿಯ ಕಂಡು ಸ್ನಾನವ ಮಾಡಿ ತಡಿಯಲ್ಲಿ ಕುಳಿತಿರುವಲ್ಲಿ ಬಂದು ನಿಕ್ಷೇಪದ ಬಿಂದಿಗೆ ಆ ನದಿಯಲ್ಲಿ ತೇಲಿ ಬಂದುದು'೦ದ ಅದ ಕಂಡು ಈಚೆಗೆ ತಗೆದುಕೊಂಡು ಕೈಯಲಿದ್ದ ಚೀಟ ನೋಡಿಕೊಂಡು ನದಿ ಫಲವಾಗುವುದೆಂದು ಬರೆದಿರುವುದ ತಿಳಿದು, ಅದ°೦ ದಿದು ಸಿಕ್ಕಿತೆಂದು ಆ ಬಿಂದಿಗೆಯ ತೆಗೆದುಕೊಂಡು ಅಲ್ಲಿಂದ ಮುಂದಕ್ಕೆ ಹೋಗುವಲ್ಲಿ-ದಾರಿಯಲ್ಲಿ ಒಂದು ವೃಕ್ಷದ ಕೆಳಗೆ ಕಳ್ಳರು ಕದ್ದು ತಂದ ಹಣ ಒಡವೆ ವಸ್ತುಗಳ ಹಂಚಿಕೊಳ್ಳುತಿರುವಲ್ಲಿ ಜಯಪಾಲನ ಕಂಡು ಯಾ ವನೋ ನಮ್ಮ ಹಿಡಿಯುವುದಕ್ಕೆ ಬರುತ್ತಾನೆಂದು ಅದನೆಲ್ಲ ಅಲ್ಲೇ ಬಿಟ್ಟು ಓಡಿಹೋಗುವುದ ಕಂಡು, ಅಲ್ಲಿಗೆ ಹೋಗಿ ನೋಡಿ ಅದನೆಲ್ಲ ತೆಗೆದು ಕೊಂಡು ಚೀಟ ತೆಗೆದುಕೊಂಡು ಅದಕಲ್ಲಿ ವೃಕ್ಷ ಫಲವಾಗುವುದೆಂದು ಬರೆ ದಿರುವುದ ಓದಿ ನೋಡಿಕೊಂಡು, ಅಲ್ಲಿಂದ ತನ್ನ ಪಟ್ಟಣಕ್ಕೆ ಬಂದು ಚರಿಸು ತಿರುವಲ್ಲಿ -ಆಗ ಪಟ್ಟಣದಲ್ಲಿರುವ ಸುರಭಿಯೆಂಬ ಸೂಳೆ-ಬಹು ಭಾಗ್ಯ ಸಂಪಾದಿಸಿದುದ ಆನುಭವಿಸುವರಿಲ್ಲ ; ಮುಂದಿನ್ನು ಸಂಪಾದಿಸಿ ಫಲವೇನೆಂ ದು ತನ್ನಲ್ಲಿ ತಾನೇ ಯೋಚಿಸಿ, ತನ್ನ ಮನೆಯ ಬಾಗಿಲ ಮುಂದೆ ಬಂದು ಭೇ ರಿಯನಿರಿಸಿ, ಈ ಭೇರಿಯ ಬಂದು ಹೊಡೆದವನಿಗೆ ನಾನು ಹೆಂಡತಿಯಾಗಿರುವೆ ನೆಂದು ಅವಳು ಇರುವಲ್ಲಿ ಜಯಪಾಲ ಚರಿಸುವಲ್ಲಿ ಆ ಭೇರಿಯ ಕಂಡು ಧ್ವನಿ ಮಾಡಲಾಗಿ, ಅವಳಾಸ ಕೇಳಿ ಹೋಗೆ ಬಂದು ಜಯಪಾಲನ