ಪುಟ:ಬತ್ತೀಸಪುತ್ತಳಿ ಕಥೆ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ. ಮಾತಿಗೆ, ನೀವಿಬ್ಬರೂ ಚಂಡಿಕಾದೇವಿಯ ಗುಡಿಗೆ ಹೋಗಿ, ಉಂಟು ಇಲ್ಲ ಮಾಡಿಕೊಂಡು ಬರಹೇಳಿ ರಾಯನ ಅಪ್ಪಣೆಯಾದುದಂದ, ಅದೇ ಮೇರೆಗೆ ಇರ್ವರೂ ಚಂಡಿಕಾಲಯಕ್ಕೆ ಹೋಗಿ-ಓ ದೇವಿಯೇ ? ಇವರು ತಟ್ಟೆಯ ತೆಗೆದುಕೊಂಡು ಹೋಗಿರುವುದು ನಿಜವಾದರೆ ನಿಮ್ಮಜ್ಞೆಯುಂಟಾಗಲಿ. ಇಲ್ಲದಿದ್ದರೆ ಯಥಾಪ್ರಕಾರಕಿರಲೆಂದು ಹಡಪಿಗ ವರರುಚಿಯ ಗುಡಿಯೊ ಳಕ್ಕೆ ಕೂಡಿ, ಬಾಗಿಲಿಗೆ ಬೀಗವಂ ಹಾಕಿ, ಹಡಪಿಗ ಈಚೆ ಕಾದಿರಲಾಗಿ ; ಚಂಡಿಕಾದೇವಿಯು ಸಮರಾತ್ರೆಯಲ್ಲಿ ಚಂದ್ರಾಯುಧನ ತೆಗೆದುಕೊಂಡು ವರ ರುಚಿಯ ತಲೆಯೊಡೆಯುವುದಕ್ಕೆ ಬರಲಾಗಿ; ಆಗ ಆ ವರರುಚಿ ಅನೇಕ ವಿಧದಿಂದ ದೇವಿಯಂ ಸ್ತುತಿಮಾಡಿ ಇಂತೆಂದನು :-ನೀವು ಸಕಲವಂ ತಿಳಿ ದಂಥ ಜಗನ್ಮಾತೆಯಾದುದರಿಂದ ನನ್ನಲ್ಲಿ ಕಳವಿಲ್ಲ, ಚೆನ್ನಾಗಿ ಪರಾಂಬ ರಿಸಿ ಆಜ್ಞೆ ಮಾಡೆಂದು ನುಡಿಯಲಾಗಿ ; ದೇವಿ ದಿವ್ಯದೃಷ್ಟಿಯಿಂದಲಿದು ನೋಡಿ, ನೀನು ಕಳ್ಳತನಕ್ಕಾಗಿ ಹೋದವನಲ್ಲ, ಪರೀಕ್ಷೆಯ ನಿಮಿತ್ತ ಆ ತಟ್ಟೆ ತೆಗೆದಿರುವುದು ತಿಳಿಯಿತು. ಆದರೂ ಆ ಒಡವೆ ನಿನ್ನಲ್ಲಿ ಇದೆಯಷ್ಟೆ. ಆದುದcಿಂದ ಕಳ್ಳತನವುಂಟಾಯಿತು. ನಿನ್ನ ಕೊಲ್ಲುವುದೇ ಸರಿ.-ಎನ್ನ ಲಾಗಿ ; “ ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡಬೇಕು ” ಎಂಬ ನೀತಿ ಲೋಕದಲ್ಲಿ ನಿದರ್ಶನದಲ್ಲಿರುವ ಕಾರಣ, ನಿದಾನಿಸಿ ನಿದರ್ಶನ ಮಾಡಬೇ ಕೆಂದು ಪ್ರಸನ್ನ ಮಾಡುವಷ್ಟರಲ್ಲಿ, ಉದಯವಾದುದರಿಂದ ಆ ದೇವಿಯು ಮಾಯವಾದಳು. ಆ ಬಳಿಕ ವರರುಚಿ ಹಡಪಿಗನ-ಬಾಗಿಲ ತೆಗೆ ಎಂದು ದಕ್ಕೆ ಆವನು ಆಶ್ಚ ರಪಟ್ಟು ಬಾಗಿಲ ತೆಗೆದು ಬಿಡಲಾಗಿ ; ಅಲ್ಲಿಂದ ಇಲ್ಲ ರೂ ರಾಯನ ಬಳಿಗೆ ಬರಲಾಗಿ ; ರಾಯ-ನನ್ನ ಗುರುವಿನ ಮೇಲೆ ಇಲ್ಲದ ಕಳ್ಳತನ ಹೇಗೆ ಹೇಳದೆ ? ಎಂದು ಕೋಪಿಸಿ, ಹಡಪಿಗನ ಕಳುಹಿಸಿದ ಬಳಕವರರುಚಿ ತಟ್ಟೆಯ ತಂದು ರಾಯನ ಮುಂದಿರಿಸಿ,ಚೋರವಿದ್ಯ ಬರು ವುದೇ ? ಎಂದು ಕೇಳಿದುದಕಂದ, ಈ ವಿದ್ಯವಂ ಕಲಿತು ನಿಮಗೆ ಪರೀಕ್ಷೆ ಕೊಡುವುದಕ್ಕಾಗಿ ಇದ ತೆಗೆದೆ ಎಂದುದಕ್ಕೆ, ರಾಯನು ಮೆಚ್ಚಿ ವರರುಚಿಗೆ ಸವಾಲಕ್ಷದ್ರವ್ಯನಂ ಕೊಟ್ಟು, ಆ ಹಡಪಿಗನ ಕರೆಯಿಸಿ ಅವನಿಗೆ ಬಹುಮಾ ನವಂ ಮಾಡಿ ಮನ್ನಿ ನಿದನು ಕಣಾ! ಎಂದು ಹೇಳಿದ ಚಿತ್ರಶರ್ಮನ ಮಾತಿಗೆ ಕುರಂಗಸೇನೆಯೆಂಬ ಪುತ್ತಳಿ ನಗುತ್ತ ಹಾಸ್ಯಂಗೆಯ್ದು ಪೇಳಿದ ಉಪಕಥೆ:- m ಬ M