ಪುಟ:ಬತ್ತೀಸಪುತ್ತಳಿ ಕಥೆ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಸವಳಿ ಕಥೆ. ಕೊಂಡು ಬಂದು, ತನ್ನ ಸಿಂಹಾಸನದಲ್ಲಿ ಕುಳ್ಳಿರಿಸಿ--ನೀವಿಲ್ಲಿಗೆ ಬಂದ ಕಾರಣವೇನೆಂದು ಕೇಳಲಾಗಿ; ರಾಯ ತಾ ಬಂದ ವರ್ತಮಾನವ ಹೇಳಿದುದ ಕೇಳಿ, ಅತಿ ಸಂತೋಪಂಬಟ್ಟು, ರಾಯನಿಗೆ ಮಜ್ಜನ ಭೋಜನ ಮಾಡಿಸಿ, ಪುಪ್ಪ ಸುಗಂಧ ತಾಂಬೂಲವ ಕೊಡಿಸಿ, ಆ ಬಳಿಕ ನವರತ್ನಾಭರಣ ಪೀ ತಾಂಬರವ ಕೊಟ್ಟು ಕಳುಹಿಸುವಲ್ಲಿ ಎರಡು ರತ್ನವ ಕೊಟ್ಟು, ಇದು ಕೇಳಿದುದ ಕೊಡುವುದು. ಇದು ನನೆದಲ್ಲಿಗೆ ಮನೋವೇಗದಲ್ಲಿ ಕರೆದು ಕೊಂಡು ಹೋಗುವುದು ಎಂದು ಹೇಳಲಾಗಿ ;) ಅದ ತೆಗೆದುಕೊಂಡು ಅಲ್ಲಿಂದ ಪುನಃ ಆ ದ್ವಾರದಲ್ಲಿ ಹೊಕ್ಕು ಈಚೆಗೆ ಬಂದು, ಇಲ್ಲಿಗೆ ಬರುವ ದಾರಿಯಲ್ಲಿ, ಒಬ್ಬ ಬ್ರಾಹ್ಮಣ ತನ್ನ ಮಗ ಸಹಿತ ಬರುವನ ಕಂಡು, ರಾಯನು-ನೀವೆಲ್ಲಿಗೆ ಹೋಗುತ್ತೀರಿ ? ಎನ್ನಲಾಗಿ ; ಆ ಬ್ರಾಹ್ಮಣ ತನ್ನ ದರಿದ್ರ ದುಃಖವ ಪೇಳಮದ ಕೇಳಿ, ಆ ರಾಯನಿಗೆ ಮನಸ್ಸು ಮುಗಿ ಆ ರತ್ನವ ಕೊಟ್ಟು, ಇದು ಕೇಳಿದುದ ಕೊಡುವುದೆಂಮ ಪರಿಕ್ಷೆ ಹೇಳಿದ ಬಳಿಕ, ರಾಯನ ಕೈಯಲ್ಲಿ ಮತ್ತೊಂದು ರತ್ನವಿರುವುದ ಕಂಡು, ಆ ಬ್ರಾ ಹ್ಮಣನ ಮಗ ಇದರ ವಿವರವೇನೆಂದು ಕೇಳಲಾಗಿ, ರಾಯ-ಇದು ನೆನೆದ ಬಳಿಗೆ ಮನೋವೇಗದಿಂದ ಕೊಂಡುಹೋಗುವುದೆಂದ ಮಾತಿಗೆ ಆ ವಿಪ್ರನ ಮಗ ತನಗಾರತ್ನವ ಕೊಡಬೇಕೆಂದು ಕೇಳಿದುದಕಂದ (ಅದ ಅವನಿಗೆ ಕೊಟ್ಟು, ಈ ರೀತಿಯಲ್ಲಿ ) ತಂದೆ ಮಕ್ಕಳಿಗೆ ಆಯೆರಡು ರತ್ನಗಳ ಕೊಟ್ಟು ಕಳುಹಿಸಿ ತಾನಿಲ್ಲಿಗೆ ಬಂದು ಸುಖವಾಗಿದ್ದನು, ಎಂದು ರತ್ನ ವತಿ ಯೆಂಬ ಪುತ್ರಳ ನುಡಿಯಲಾಗಿ; ಭೋಜರಾಜನು ಲಿತನಾಗಿ, ತನ್ನ ಅರ ಮನೆಗೆ ಪೊದನು. ಇ೦ತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ರತ್ನ ವತಿಯೆಂಬ ಪಾಳಿ ಪೇಳಿದ ಇಪ್ಪತ್ತನೆಯ ಕಥೆ, ೨೧ ನೆಯ ಕಥೆ. ಇಪ್ಪತ್ತೊಂದನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾ ರ್ಚನೆ ಭೋಜನ ತಾಂಬೂಲವ ತೀರಿಸಿ, ವಸಾಭರಣಾಲಂಕೃತನಾಗಿ, ಚಿತ್ರಶರ್ಮನ ಕೈಲಾಗಿನಿಂದ ಆಸ್ಥಾನಮಂಟಪಕ್ಕೆ ಬಂದು ತನ್ನ ಬಲಗಾಲ