ಪುಟ:ಬತ್ತೀಸಪುತ್ತಳಿ ಕಥೆ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ ಬತ್ತೀಸರಳ ಕಥೆ. ಅತಿ ಸಂತೋಷದಿಂದ ಭೂರಿದಾನವನ್ನು ಕೊಟ್ಟು, ಆವೇಶಿಯನ್ನು ಕರೆದು ಸವಾಲಕ್ಷ ಹೊನ್ನಿಗಾಗಿ ಕಾಳಿದಾಸನ ಕೊಂದೆ. ಅವನಿಗಾಗಿ ನಿನ್ನನ್ನು ಮನ್ನಿಸಿರುವನು. ಮುಂದೆ ಇಂಥ ದುರ್ಬುದ್ದಿ ಮಾಡಿದರೆ ತಕ್ಕ ಶಿಕ್ಷೆ ಮಾಡಿ ಸುವೆ-ಎಂದು ಹೇಳಿ ಅವಳಿಗೆ ಸವಾಲಕ್ಷವರಹನ ಕೊಟ್ಟು ಕಳುಹಿಸಿದನು, ಕಣಾ ! ಎಂದ ಮಾತಿಗೆ ವಿಷ್ಣು ವಂದಿನಿಯೆಂಬ ಪುತ್ತಳಿಯು ನಗುತ್ತ ಹಾಸ್ಯಂ ಗೈದು ಹೇಳಿದ ಉಪಕಥೆ:- ಕೇಳ್ಳೆಯ ಚಿತಶರ್ಮನ ' ನಮ್ಮ ವಿಕ್ರಮಾದಿತ್ಯರಾಯ ಈ ರಾಜ್ಯ ಪಾಲಿಸುವ ವೇಳೆಯಲ್ಲಿ ಬಂದುದಿನ ಒಬ್ಬ ನಿದ್ದನು ವಿಭೂತಿಯಂ ಪೂಸಿ, ರುದ್ರಾಕ್ಷಿ ಸರವ ಧರಿಸಿ, ಕಂಕುಳಲ್ಲಿ ಜೋಗವಟ್ಟಿಗೆಯನಿರುಕಿ, ಗೆಜ್ಜೆಕಸನಿಯಂ ಪೊದೆದು, ಕೈಯಲ್ಲಿ ಪುಸ್ತಕ ದಂಡಕೋಂ ಪಿಡಿದು, ರಾಯನೆದುರಿಗೆ ಬಂದು ಇಂತೆಂದನು:-ಎಲೈ ಮಹಾರಾಯನ : 1ಉದಾರ ಕೀರ್ತಿ ಪರಪುರುಷಾರ್ಥ ಮುಂತಾದ ನಿನ್ನ ಸಕಲ ಸದ್ಗುಣವಂ ಕಳ್ಳ,ನಿನಗೆ ಅತಿಶಯವಾದುದೊಂದು ವಸ್ತು ವಂ ಕೊಡಬೇಕೆಂದು ಬಂದನು ಎನ್ನಲಾಗಿ ; ರಾಯನು .ಅದೆಂಥ ವಸ್ತು ? ಕೊಡು, ಎಂದುದಿಂದ ಅವನಿಂತೆಂದನು:- ನಾನು ಜಂಬೂದ್ವೀಪಕ್ಕೆ ಹೋಗಿ, ಪುಷ್ಕರ, ನರ್ಮದೆ, ಯಮುನೆ, ಗೋದಾ ವರಿ, ಗೋಮುಖ, ತುಂಗಭದ್ರೆ, ದ್ವಾರಾವತಿ, ಗಯ, ಪ್ರಯಾಗ, ಬದರಿ, ಕಾಶಿ, ಕನ್ಯಾಕುಮಾರಿ, ಸೇತುಬಂಧ, ರಾಮೇಶ್ವರ, ನಿಂಧು, ಸರಸತಿ ಮುಂ ತಾದ ಅನೇಕ ತೀರ್ಥಗಳಲ್ಲಿ ಸ್ನಾನಮಾಡಿ, ಸಕಲದೇವರ ದರ್ಶನಂಗೆಯ್ದು ಬರುತ್ತ ಇರಲಾಗಿ; ಒಂದು ಘೋರವಾದ ಸ್ಥಳದಲ್ಲಿ ಭಾಳಲೋಚನ ನೆಂಬ ನಿದ್ದನಂ ಕಂಡು ಆತನಲ್ಲಿ ಅಮರತ್ನ ಪಡೆವ ಮಂತ್ರಮಂ ಕಲಿತಿರು ವುದ ನಿನಗುಪದೇಶವಂ ಮಾಡುವೆನು. ಅದಕಂದ ನೀನು ಅಮರತ್ವ ಪಡೆ” ಎನ್ನಲಾಗಿ ಆಮಾತಿಗೆ ರಾಯ ಊರ ಹೊಗಿರುವ ಕಾಳಿಕಾದೇವಿ ಯದುರಾಗಿ ಬಂದು ಮಾಸ ಹೋಮವಂ ಮಾಡಲಾಗಿ, ಆಹೋಮಕೊಂ ಡದಲ್ಲಿ ಒಂದು ಮಾವಿನ ಹಣ್ಣು ಹುಟ್ಟಿದುದು'ಂದ ಆಹಣ್ಣಂ ತೆಗೆದುಕೊಂಡು ಪಾ~1. ಸಮಸ್ತ ಗುಣಗಳಲ್ಲಿ ಕೀರ್ತಿಯಲ್ಲಿ ಉದಾರತ್ವದಲ್ಲಿ ಪುರುಷಾರ್ಥಕ್ಕೆ ಮೊದಲಾಗಿ ಸಕಲ ಕಲೆಗಳಲ್ಲಿ ಪರಿಪೂರ್ಣನೆಂಬುದನ್ನು ಎಲ್ಲರ ಕೈಯಲ್ಲಿ ಕೇಳಿ,