ಪುಟ:ಬತ್ತೀಸಪುತ್ತಳಿ ಕಥೆ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟ ಬತ್ತೀಸಪುತ್ತಳಿ ಕಥೆ, ೧೧೧ ವಿಧದ ವಿದ್ಯೆಗಳ ತೋಡಲಾಗಿ ; ರಾಯ ಮೆಚ್ಚಿ ಅವನಿಗೆ ಕೊಟಹನ್ನ ಕೊಟ್ಟು, ಮನ್ನಣೆಯಿಂದ ಮನ್ನಿಸಿ, ಆ ಬಳಿಕ-ನೀನೆಲ್ಲಿಂದ ಬಂದೆಯನ್ನ ಲಾಗಿ ; ಅವನಿಂತೆಂದನು :-ಕೇಳ್ಳೆಯ್ಯಾ ಮಹಾರಾಯನೇ ! ನಾನು ಗೊಂಡಾ ರಣ್ಯದಲ್ಲಿ ಕಪಿಲಮುನಿರಾಶ್ರಮದ ಬಳಿಯಲ್ಲಿರುವ ಮೈಲಾರಲಿಂಗನ ಗುಡಿಯಿಂದ ಬಂದೆನೆನ್ನಲಾಗಿ ; ರಾಯ-ಅಲ್ಲೇನತಿಶಯವೆಂದು ಕೇಳಲಾಗಿ ; ಆತನಿಂತೆಂದನು -ಆ ಗುಡಿಯ ಮುಂದೆ ಸಾವಿರ ಕಾಲಿನದೊಂದು ನೆಲವು ಕಟ್ಟಿಯಿದೆ. ಅದು ಕೆಳಗೆ ಅತಿಲಕ್ಷಣವಾದ ಕತ್ತಿಗಳು ನಿಲ್ಲಿಸಿ ಇವೆ. ಆವನಾನೊಬ್ಬ ವೀರನಾದವನು ಆ ನೆಲುವಿನ ಮೇಲೆ ಕುಳಿತು ಒಂದೊಂದಾಗಿ ಅದು ಕಾಲುಗಳ ತನ್ನ ಕೈಯ ಉಗುರಿನಿಂದ ಕತ್ತರಿಸಿ, ಆಕತ್ತಿಗಳ ಮೇಲೆ ಬೀಳುವ ಸಮಯದಲ್ಲಿ ದೇವರು ಪ್ರಸನ್ನವಾಗಿ ಪಿಡಿದೆತ್ತಿಕೊಂಡು ಅವ ನಿಗೆ ಇಷ್ಟಾರ್ಥ ಪಾಲಿಸುವುದೆಂದು ಅಲ್ಲಿ ಶಾಸನ ಬರೆದಿರುವುದು ಎಂದ ವಾತ ಈ೪, ರಾಯ ಆಕ್ಷಣವೇ ಆಚೋದ್ಯವ ನೋಡಬೇಕೆಂದು ಆಕಾಶ ಮಾರ್ಗದಲ್ಲಿ ಹೊಂಟು, ಆಗೊಂಡಾರಣ್ಯದಲ್ಲಿರುವ ಮೈಲಾರಲಿಂಗನ ಗು ಡಿಯ ಬಳಿಗೆ ಹೋಗಿ, ಆ ನೆಲುವಿನಲ್ಲಿ ಕುಳಿತು ತನ್ನ ಉಗುರೊಳಗೆ ಅದು ಕಾಲುಗಳ ಒಂದೊಂದಾಗಿ ಕತ್ತರಿಸಿ ಕೆಳಗಿರುವ ಕತಿಗಳ ಮೇಲೆ ಬೀಳುವ ಸಮಯಕ್ಕೆ ಆದೇವರು ಪ್ರಸನ್ನವಾಗಿ, ಆ ಕತ್ತಿಗಳ ಮೇಲೆ ಬೀಳದ ಹಾಗೆ ಅಂತರಿಕ್ಷದ ಮಾರ್ಗದಲ್ಲಿ ಅವನ ಸಿಡಿದೆತ್ತಿಕೊಂಡು ಪ್ರಸನ್ನವಾಗಿ, ತನ್ನ ನಿಜ ರೂಪವ ತೋwಸಿ, ಮೆಚ್ಚೆ-ಎಲೈ ರಾಯನೇ, ನಿನ್ನ ಧೀರತ್ನಕ್ಕೆ ಮೆಚ್ಚಿದೆ ನೆಂದು ರಾಯನಿಗೆ ಚತುರ್ವಿಧಫಲಪುರುಷಾರ್ಥಗಳ ಕೊಡುವ ನವರತ್ನದ ಬಟ್ಟಲ ಕೊಟ್ಟು ಮಾಯವಾಯಿತು. ಆ ಬಳಿಕ ಅಲ್ಲಿಂದ ರಾಯ ಬರುವ ದಾರಿಯಲ್ಲಿ ಒಬ್ಬ ಬ್ರಾಹ್ಮಣೋತ್ತಮ ದರಿದ್ರದಿಂದ ದೇಶಾಂತರ ಸಂಚಾರ ಮಾಡಿ ಅಲ್ಲಲ್ಲಿರುವ ದೇವರ ಪೂಜಿಸಿದಾಗ ತನ್ನ ದಾರಿ ತೀರದೆ ನೀರಿ ನಲ್ಲಿ ಬಿದ್ದು ದೇಹವ ಬಿಡಬೇಕೆಂದು ಬರುವನ ಕಂಡು, ರಾಯನು-ಎಲೋ ಬ್ರಾಹ್ಮಣ ! ಎಲ್ಲಿಗೆ ಹೋಗುತ್ತಿದ್ದೀಯೆ ? ಎನ್ನಲಾಗಿ; ಅವನು ತನ್ನ ವಿಚಾ ರವ ಹೇಳಿ ನೊಂದುಕೊಳ್ಳಲಾಗಿ ; ರಾಯ ಅವನ ಕಷ್ಟವ ಕೇಳಿ, ಕರುಣವ ತಾಳಿ ತನಗೆ ಮೈಲಾರದೇವರು ಕೊಟ್ಟಂಥ ಚತುರ್ವಿಧ ಫಲವ ಕೊಡುವ ನವರತ್ನದ ಬಟ್ಟಲ ಕೊಟ್ಟು, ಸುಖವಾಗಿರಿ ಎಂದು ಹೇಳಿ ಕಳುಹಿಸಿ, ತಾನೀ