ಪುಟ:ಬತ್ತೀಸಪುತ್ತಳಿ ಕಥೆ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

w M ಆ ಬ ಬ -೨ ಬಸಪಳಿ ಕಥೆ. ಚಾರನ ಗೋಪ್ಯದಿಂದ ಕಳುಹಿಸಿ, ಆತನಿಗೆ-ನೀನು ಸಂಗಡಲೇ ಹೋಗಿ, ಆತನಣ್ಯದಂತಿದ್ದು, ಎಲ್ಲಿ ಹಾಸ್ಯವ ಮಾಡಿ ನಗುವನೋ ಅಲ್ಲಿಂ ದ ಕರೆದುಕೊಂಡು ಬಾ ಎಂದು ಕಟ್ಟು ಮಾಡಲಾಗಿ; ವರರುಚಿಯು ಬಹುದೂ ರ ನಡೆದು, ದಣಿದು ಸಾಯಂಕಾಲವಾಗಲು ಒಂದು ಪಾಳುಗುಡಿಯ ಕಂಡು ಅದಲ್ಲಿ ಒಂದು ಮೂಲೆಯಲ್ಲಿ ಪವಡಿಸಲು ; ಮತ್ತೊರ್ವ ಗೃಹಸ್ಥನು ಪತ್ರೀಸಮೇತ ದೂರದೇಶದಿಂದ ಬಂದು ಅವನೂ ಒಂದು ಮೂಲೆಯಲ್ಲಿ ಮಲಗಲು ; ಮತ್ತೊರ್ವ ಅಗಸ ತಪ್ಪಿಸಿಕೊಂಡ ತನ್ನ ಕತ್ತೆಯನ್ನು ರಾತ್ರಿ ಯವರೆಗೂ ಅಕ್ಸಿ ಕಾಣದೆ ಬಳಲಿ ಬಂದು, ಅವನೂ ಒಂದು ಮೂಲೆಯ ಮೈ ಮಲಗಲು; ಮತೊಬ್ಬ ಕಬ್ಬಿನ ವ್ಯಾಪಾರಿ ವಿಕಯನಾಡುವೆನೆನುತ ತಂದ ಕಬ್ಬಿನ ಹೊಳೆಯ ಇಳುಹಿ ಬಂದು ಮೂಲೆಯಲ್ಲಿ ಮಲಗಲು-ಅಲ್ಲಿ ಕತ್ತಲೆಯಾದಕಾರಣ ಒಬ್ಬರಿರುವುದ ಒಬ್ಬರು ಕಾಣದೆ ಇರಲು-ಹೀಗಿ ರುವಾಗ) ದೂರದೇಶದಿಂದ ಬಂದ ಮಾರ್ಗಸ್ಥನು ಪತ್ನಿ ಪಕ್ಕದಲ್ಲಿದ್ದ ಕಾ ರಣ ಕಾಮೋದ್ರೇಕದಿಂದ ಆಕೆಯ ಕಡೆ ನಾನಾಬಗೆಯ (ವಿನೋದ) ಗಳ ವಿದ್ದು, ಸುಖಸಮುದ್ರದಲ್ಲಿ ಮುಳುಗಿ,-ಎಲೆ ಪ್ರಿಯೆ! ಇಂದಿನವರೆಗೆ ಕಾಣ ದುದನ್ನೆಲ್ಲಾ ಈಗ ಕಂಡೆನು. ಇಂತು ಎಂದೂ ನೆರೆಯಲಿಲ್ಲ ವೆನಲು-ಆ ಮಾತ ಕೇಳಿ ಅಗಸನು-ಎಲೈ ಮಹಾಪುರುಷನೇ : ನೀವು ಕಾಣದುದೆಲ್ಲಾ ಕಂಡ ಬಳಿಕ ನನ್ನ ಕತ್ತೆಯು ಕಂಡಿರಾ ? ಎನ್ನಲಾಗಿ; ಆ ಮಾತ ಕೇಳಿ-ಇಲ್ಲಿ ಯಾರೋ ಬಂದು ಮಲಗಿದ್ದಾನೆಯೆಂದು ಬಾಗಿಲ ಸದ್ದಾಗದಂತೆ ತೆಗೆ ಯೆಂದ ಆ ಹೆಂಗಸಿನ ಮಾತ ಕಬ್ಬಿನ ಬಂಡಿಯ ತಂದವ ಕೇಳ-ಎಲೈ ನಾನು ಎದ್ದ ಕವಾಗಿದ್ದೇನೆ. ಸದ್ದಾಗದಂತೆ ಕಬ್ಬ ತೆಗೆದರೆ ತಿಳಿಯಬಂ ದೀತು ಎನ್ನಲಾಗಿ; ಅವರವರ ಮಾತ ಕೇಳಿ ವರರುಚಿ ಅಟ್ಟಹಾಸದಿಂ ನಕ್ಕನು. ಆಗ ಮೇಲೆ ಮೋಡಗಟ್ಟಿ ಮಳೆ ಹುಯ್ದು ಕೆರೆ ಕಟ್ಟೆ ತೋ ಹಳ್ಳಕೊಳ್ಳಗಳೆಲ್ಲ ತುಂಬಿ ಕೋಡಿ ಹರಿದುವು. ಅಂದು ಗೊಸ್ಯದಿಂದ ರಾಯ ಹಿಂದೆ ಕಳುಹಿಸಿದ್ದ ಬುದ್ದಿವಂತ ವರರುಚಿಯ ಅನೇಕ ತೆಜದಿಂದೊ ಡಂಬಡಿಸಿ, ರಾಯನ ಬಳಿಗೆ ಕರೆತರಲಾಗಿ ; ರಾಯ ಕಂಡು ಬಹುವಾ ನವ ಮಾಡಿ ಕುಳ್ಳಿರಿಸಿಕೊಂಡು, ಎಲ್ಲಿಯತನಕ ಹೋಗಿದ್ದಿರಿ? ಅಲ್ಲೇ ನತಿಶಯುವ ಕಂಡಿರಿ? ಎಂದು ಕೇಳಲಾಗಿ; ತಾನು ಘಾಳುಗುಡಿಯಲ್ಲಿ ಮಲ ಬ 12