ಪುಟ:ಬತ್ತೀಸಪುತ್ತಳಿ ಕಥೆ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೫ ಬತ್ತೀಸುತ್ತಳಿಕಥೆ . ಬದುಕಿದರೆ ನೀನೇಕೆ ವ್ಯಸನ ಪಡುವೆ ? ಲೋಕದಲಿ ಸಕಲರೂ ಬದು ಕುವುದ ಎಣಿಸಬೇಕಲ್ಲದೆ ಕೇಡ ಯೋಚಿಸಬಾರದೆಂದು ನುಡಿದು, 1 ಆಮೇ ಲಾದರೂ ಹೇಗೆಂದರೆ “ ಸಾದೂದಕವಾದ ನದಿಗಳು, ಕೆರೆಗಳು ಪರೋಪ ಕಾರಕ್ಕಾಗಿ ಇರುವುದಲ್ಲದೆ ತನ್ನ ರುಚಿಯ ತಾವು ತಿಳಿಯಲಿಲ್ಲ ; ತರು ಗಳು ಪರೋಪಕಾರಕ್ಕಾಗಿ ಫಲ ಬಿಡುವುವಲ್ಲದೆ ತಮ್ಮ ಹಣ್ಣ ತಾವು ತಿನ್ನ ಲಿಲ್ಲ ; ಪಶುಗಳು ಪರೋಪಕಾರಕ್ಕಾಗಿ ಹಾಲಿ ಕೊಡುವುವಲ್ಲದೆ ತಮ್ಮ ಹಾಲ ತಾವು ಕುಡಿಯಲಿಲ್ಲ ; ಸತ್ಪುರುಷರು ಪರೋಪಕಾರಕ್ಕಾಗಿ ತಾವು ಬದುಕುವರು ” ಎಂಬ ನೀತಿಯಿರುವುದ ತಿಳಿದು ಪರರು ಬದುಕುವುದಕ್ಕೆ ಸಂತೋಷಪಡಬೇಕಲ್ಲದೆ, ಹೀಗೆ ಸಂಕಟಪಡಬಾರದೆಂದು ಹೇಳಿದ ಸತಿಸುತ ರ ಜತೆದು, ನೆರೆಯವರು ಕೆಡುವ ಯೋಚನೆ ಮಾಡಿದನು. ಅದೇನೆಂದರೆತಾನು ಸಂಪಾದಿಸಿದ ದ್ರವ್ಯ ಯಾವತ್ತು ನೆರೆಯವರದೂ ಹೋಗಲೆಂದು ಡಮರುಗನ ಮಿಡಿಯಲಾಗಿ, ಆಗ ನೆರೆಯವರ ಭಾಗ್ಯವೆಲ್ಲಾ ಹೋದುದ ಕಂಡು, ಬಳಿಕ ತನ್ನ ಕಣ್ಣು ಕಾಲು ಹೋಗಲೆಂದು ಡಮರುಗವ ಮಿಡಿ ಯಲಾಗಿ, ನೆರೆಯವರ ಕಣ್ಣು ಕಾಲು ಹೋಗಲಾಗಿ, ಈ ವರ್ತಮಾನವ ರಾ ಯನು ಕೇಳಿ, ಆ ವಿಕ್ರಮವೀರನ ಕರೆಯಿಸಿ,-ನೆರೆಯವರಿಗೇನು ಕೃತ್ರಿಮ ಮಾಡಿದೆ ಹೇಣ ಎನ್ನಲಾಗಿ; ಅವನು-ಕೇಳ್ಳೆಯ ರಾಯನೇ ! ಪರರು ಬದು ಕುತ್ತ ಇದ್ದರೆ ನಾನು ನೋಡಿ ಸೈರಿಸಲಾರೆ. ಆದುದಲಿಂದ ನಾನು ಇಂಥ ಮಾಯ ಮಾಡಿದೆನೆಂದು ತನ್ನ ಗುಣವ ರಾಯನೊಡನೆ ಮರೆಯದೆ ಹೇಳಿದ ಮಾತಿಗೆ ರಾಯನು ಮೆಚ್ಚಿ, ಅವನಿಗೆ ಸವಾಲಕ್ಷೆ ದ್ರವ್ಯವ ಕೊ ಟ್ಟು ಮುಂದೆ ಇನ್ನು ಇಂಥ ದುರ್ಬುದ್ದಿ ಯೋಚಿಸದಿರು ಎಂದು ಬುದ್ದಿ ಯ ಕಲಿಸಿ, ಮನ್ನಿಸಿ, ಕಳುಹಿದನು-ಎಂದ ಮಾತಿಗೆ ಕಾಮಕರ್ಣಿಕೆಯೆಂಬ ಪು ಇಳಿಯು ನಗುತ್ತ ಹಾಸ್ಯಗೆಯ್ದು ಪೇಳಿದ ಉಪಕಥೆ :- ಕೇಳ್ಳೆಯ ಚಿತ್ರಶರ್ಮನೇ ! ನಮ್ಮ ವಿಕ್ರಮಾದಿತ್ಯರಾಯನು ಈ ರಾಜ್ಯವ ಪಾಲಿಸುವ ವೇಳೆಯಲ್ಲಿ ಒಂದು ದಿನ ಉಜ್ಜಿನಿ ಪಟ್ಟಣದಲ್ಲಿ ವಾಸ ವಾಗಿರುವ ಪಾಂಚಾಲ ದೇಶದ ವರ್ತಕನಾದ ಭದ್ರಸೇನನ ಪತ್ನಿ ತನ್ನ ತಮ್ಮನಾದ ಜಯಪಾಲನ ಕರೆದು ಚಿನ್ನದ ವ್ಯಾಪಾರವ ಮಾಡೆಂದು ಸಾವಿರ ಪಾ-1, ಮತಿಂತೆಂದರು ಲೋಕದಲ್ಲಿ.