ಪುಟ:ಬತ್ತೀಸಪುತ್ತಳಿ ಕಥೆ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m hos ಕರ್ಣಾಟಕ ಕಾವ್ಯಕಲಾನಿಧಿ, ಲಜ್ಜೆಯ ತೊತಿಸುವುದು: ಇಂಥ ಕ್ಷು ತೆನ್ನ ಬಾಧಿಸುತ್ತಿದೆ ಎಂದು ಹೇಳುತ್ತ ಮೈಮುದು, ನಿದ್ರೆಗೆಯುತ್ತ ಮಲಗಿರುವಲ್ಲಿ -ಚಂಡಿಕಾದೇವಿ ರಾಯನ ಮಗಳ ವಿವಾಹವ ನೋಡಬೇಕೆಂದು ಮಲಗಿರುವ ಬ್ರಾಹ್ಮಣನ ಬಳಿಯಲ್ಲಿ ಬೇತಾಳನ ಕಾವಲಿರಿಸಿ, ಆದೇವಿ ಊರೊಳಗೆ ಹೋದ ಬಳಿಕ, ಬೇತಾಳ ಆ ಬ್ರಾಹ್ಮಣನಿಗೆ ಎಚ್ಚರವಾಗದಂತೆ ಎತ್ತಿಕೊಂಡು, ತಾನೂ ದೇವಿಯ ಹಿಂದುಗಡೆ ಹೊಗಿ, ಬೇಸರದಲ್ಲಿ ನೋಡುತ್ತಿರಲು-ಲಗ್ನ ವೇಳೆ ಬಂದುದ ಕಂಡು ಮದುವೆಯ ಗಂಡು ಮಲಗಿರುವ ಬಳಿಯಲ್ಲಿ ಈ ಬಾ ಹ್ಮಣನ ಮಲಗಿಸಿ, ಮದವಣಿಗನ ಎತ್ತಿಕೊಂಡು ಬಂದು ಮತ್ತೊಂದು ಪಾಳುಗುಡಿಯಲ್ಲಿ ಮಲಗಿಸಿಬಿಟ್ಟು, ಯಥಾಪ್ರಕಾರ ತಾನು ಹೋಗಿ ಆಕಾ ತದಲ್ಲಿ ನೋಡುತ್ತಿರಲಾಗಿ-ಲಗ್ನವು ಬರಲು ಅರಸಾದ ಭುವನೈಕವೀರ ಶು ತಿಮಂಡಲನೆಂಬ ವಿಪ್ರನಿಗೆ ತನ್ನ ಮಗನೆಂದು ನವರತ್ನಾಭರಣ ಮುಂ ತಾಗಿ ಅಲಂಕರಿಸಿ, ಅಂದಳದಲ್ಲಿ ಕುಳ್ಳಿರಿಸಿಕೊಂಡು, ಮದುವೆಯ ಚಪ್ಪ ರಕ್ಕೆ ಕರೆತರುವಲ್ಲಿ-ರಾಯನು ಎದಿರುಗೊಂಡು ಹೋಗಿ ಕರೆತಂದು ಶುಭ ಮುಹೂರ್ತದಲ್ಲಿ ಧಾರೆಯೆಂದು ಹೊ?ಮವ ಮಾಡಿಸಿ, ದಂಪತಿಯ ಸೆಜಗ ಗಂಟಿಕ್ಕಿ, ಬೇಯಿಸಿ ಶಯ್ಯಾಗೃಹಕ್ಕೆ ಕಳುಹಿಸಿ ಬಿಡಲಾಗಿ-ಅಲ್ಲಿ ಮಂಚದ ಮೇಲೆ ಕ್ಲು ತಿನಿಂದ ಬಳಲಿ ಕುಳಿತಿರುವ ಪತಿಗೆ ಆಗ ಲಲಿತಾಂಗಿ ಸುಗಂಧಾನುಲೇಪನವ ಮಾಡಿ, ಪರಿಮಳಂಗಳ ತೀಡಿ, ಕುಸುಮಂಗಳ ಮುಡಿಸಿ, ಅನೇಕವಾಗಿ ಉಪಚರಿಸಿ, ಆಬಳಿಕ ವೀಣೆಯ ತೆಗೆದುಕೊಂಡು, ಮೋಹನ ಮೊದಲಾದ ರಾಗಗಳ ನುಡಿಸಿ ಮಾಡಿದಾಗ ತು ತಿಮಂಡಲ ಮರುಳುಹಿಡಿದಂತೆ ಸುಮ್ಮನಿರುವುದ ಕಂಡು ಲಲಿತಾಂಗಿ ಯೆಂತೆಂದಳು:- ಮೋಹನವಾದ ಶಯ್ಯಾಮಂದಿರದ ಚಪ್ಪರ ಮಂಚದಲ್ಲಿ ಕುಳಿತು ಪೂರ್ಣ ಚಂದ್ರೋದಯದಲ್ಲಿ ನವಮೋಹನಾಂಗಿಯಾದವಳು ವೀಣೆಯ ನುಡಿಸುತ್ತ ಕೂಡ ಮಾಡಿದರೆ ಚತುರಪತಿಯಾದವನು ಮಾತನಾಡದೆ ಇರುವುದೇನೆಂದು ಬೆಸಗೊಳ್ಳಲಾಗಿ, ಅವನಿಂತೆಂದನು:-ಎಲೆ ಸತಿಯೇ ! ಕ್ಷು ತಿನಿಂದ ಬಳಲಿ ರುವಾಗ ಯಾವುದೂ ಸೈರಿಸದು-ಎಂದ ಮಾತ ಕೇಳಿ, ಆಲಲಿತಾಂಗಿಯಾಕ್ಷಣವೆ ಚಿನ್ನದ ಹರಿವಾಣದಲ್ಲಿ ಪತ್ರಸವಾದ ಪಂಚಭಕ್ಷ್ಯ ಪರಮಾನ್ನವ ತೆಗಿಸಿ ಕೊಂಡು ಬಂದು ಮುಂದಿರಿಸಲಾಗಿ- ಅದ ಆಗ ಭೋಜನವ ಮಾಡಿ,