ಪುಟ:ಬತ್ತೀಸಪುತ್ತಳಿ ಕಥೆ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬತ್ತೀಸಪುತ್ತಳಿ ಕಥೆ. v೭ ರಾಯ-ನಿಮ್ಮ ಪಾದದರ್ಶನವಾಗಬೇಕೆಂದು ಬಂದೆನೆನ್ನಲಾಗಿ ; ಅಸೂರ ರಾಯನಿಗೆ ತನ್ನ ನಿಜಸ್ವರೂಪವ ತೋ ಇಪ್ಪತ್ತು ರತ್ನ ವಂ ಕೊಟ್ಟು ಕಳುಹಿಸಲಾಗಿ ; ರಾಯ ಆತಾವರೆಕಮಲದಲ್ಲಿ ಕುಳಿತುಕೊಂಡು, ಸಾಯಂ ಕಾಲದ ವೇಳೆಗೆ ಆಕಮಲ ಆಕೊಳದ ನೀರಿನಲ್ಲಿ ಬಂದು ಮುಳುಗ ಲಾಗಿ, ರಾಯ ನೀರಿನಿಂದ ಮೇಲಕ್ಕೆ ಎದ್ದು ಬಂದು, ಆಮುನಿಯೊಡನೆ ತಾನು ಸೂರನ ಕಂಡ ವಿವರವ ಹೇಳಿ, ಆಯಿಪ್ಪತ್ತು ರತ್ನನ ಅಮುನಿಗೆ ಕೊಟ್ಟು, ಅಲ್ಲಿಂದ ವರ್ತಕ ಸಹ ಇಲ್ಲಿಗೆ ಬಂದು, ಆವರ್ತಕನಿಗೆ ಕೋಟಿ ದ್ರವ್ಯವ ಕೊಟ್ಟು ಕಳುಹಿಸಿ, ತಾನು ಸುಖವಾಗಿದ್ದನು ಕಣಾ ? ಇ೦ತು ಕರ್ಣಾಟಕ ಭಾಷಾ ವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ವಿದ್ಯಾಧರಿಯೆಂಬ ಪುತ್ತಳಿ ಹೇಳಿದ ಹತ್ತೊಂಬತ್ತನೆಯ ಕಥೆ.

೨೦ನೆಯ ಕಧೆ. - ಇಪ್ಪತ್ತನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚನೆ ಭೋಜನ ತಾಂಬೂಲವಂ ತಿರಿಸಿಕೊಂಡು, ಶುಚಿರ್ಭೂತನಾಗಿ, ನಾನಾ ದಾನಂಗಳ ಮಾಡಿ, ಸಕಲಾಭರಣವನ್ನು ಅಂಕೃತನಾಗಿ, ಎಂದಿನಂತೆ ಚಿತ್ರಶರ್ಮನ ಕೈಲಾಗಿನಿಂದ ನವರತ್ನ ಖಚಿತವಾದ ಮಾವುಗೆಗಳ ಮೆಟ್ಟಿ ನಿಂಹಾಸನದ ಬಳಿಗೆ ಬಂದು, ಬಲಗಾಲ ನೀಡುವ ಸಮಯದಲ್ಲಿ ಆಸೆ ಪಾನದ ರತ್ನಾವತಿಯೆಂಬ ಪುತ್ತಳಿಯು, ಹೋ ಹೋ ! ನಿಲ್ಲು ನಿಲ್ಲೆಂದು, ಧಿಕ್ಕರಿಸಲಾಗಿ ; ಭೋಜರಾಯ ಖಿನ್ನನಾಗಿ ಬೇಯಿಸಿ ನಿಂಹಾಸನದಲ್ಲಿ ಕು ಆತು, ಚಿತ್ರಶರ್ಮನಿಂದ ಹೇಳಿಸಿದ ಕಥೆ :- ಎಲೆ ಪುತ್ತಳಿಯೇ ! ಕೇಳು. ಧಾರಾಪುರದಲ್ಲಿ ನಮ್ಮ ಭೋಜರಾ ಯನು ಸುಖರಾಜ್ಯಂಗೆಯ್ಯುವಲ್ಲಿ ಮೂಡುವರುಷ ಮಳೆಬೆಳೆಯಿಲ್ಲದೆ ಆ ರಾಜ್ಯಕ್ಕೆ ಅತಿಕ್ಷಾಮವಾದದಿಂದ, ಅದ ರಾಯ ಕೇಳಿ ಯೋಚಿಸುತ್ತಿರು ↑ ನಿನಗೆ ಮೊದಲು ವಿಕ್ರಮನೆಂಬ ಹೆಸರು ನಡೆವುದು. ಇಲ್ಲಿಂದ ನನ್ನ ' ದರ್ಶನವಾದ ಕಾರಣ ವಿಕ್ರಮಾದಿತ್ಯರಾಯನೆಂದು ಹೆಸರಾಗಲಿ ಎಂದು ವರವಂ ಕೊಟ್ಟು-ಎಂದು ಅಧಿಕಪಾಠವಿದೆ. ಟ