ಪುಟ:ಬತ್ತೀಸಪುತ್ತಳಿ ಕಥೆ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಸವಳಿ ಕಥೆ. ೪೬ ಸಿ, ಪಾತಾಳಪತ್ಯಂತರಕ್ಕೂ ತೋಡಿಸಿದರೂ ನೀರುಬಾರದೆ ಪಾಳಾಗಿ ಇರು ವುದು ಅಲ್ಲಿ ಒಂದು ಭುಜಂಗಿ ಎಂಬ ದುರ್ಗಿಯಿರುವಳು. ಆ ದುರ್ಗಿಗೆ ಅವನಾದರೂ ಮನಸ್ಸು ಚಂಚಲವಿಲ್ಲದೆ ಏಕಚಿತ್ತದಿಂದ ತನ್ನ ತಿರಸ್ಸಂ ಛೇದಿಸಿ ನರಬಲಿಯಂ ಕೊಟ್ಟರೆ ಆಕೆಗೆ ನೀರು ಬರುವುದು; ಇಲ್ಲ ದಿದ್ದರೆ ಹೀಗೆ ಪಾಳಾಗಿ ಇರುವುದು ಎಂದು ಆಚಾರುದತ್ತನ ಸ್ವಪ್ನದಲ್ಲಿ ಆದುರ್ಗಿಯು ಬಂದು ಹೇಳಲಾಗಿ ; ಆವಾಣಿಜ-ನಾನು ಮಾಡಿದ ಕೆಲಸ ಸಾರ್ಥಕವಿಲ್ಲವಾಯಿತೆಂದು ಚಿಂತಿಸುತ್ತಿರುವನು, ಎನ್ನಲಾಗಿ ; ರಾಯನು ಅದ ನೋಡಬೇಕೆಂದು, ಅಕಾಲಕೆತು ಸಹಿತ ಖೇಚರ ಮಾರ್ಗದಲ್ಲಿ ಆದೇ ತಕ್ಕೆ ಹೋಗಿ, ಅಲ್ಲಿರುವ ಚಾರುದತ್ತನು ಕಂಡು ಕೇಳಲಾಗಿ ; ಅವನು ಮಡುಗುತ್ತ ತನ್ನ ವಿಚಾರ ಹೇಳಲಾಗಿ; ಅವನೊಡನೆ ರಾಯನು ಆಕೆಯ ಬಳಿಗೆ ಬಂದು ಅಲ್ಲಿರುವ ದುರ್ಗಾದೇವಿಗೆ ನಮಿಸಿ, ತನ್ನ ಶಿರವಂ ಕತ್ತರಿ ಸಲು : ದೇವಿ ಮೆಚ್ಚಿ ಪ್ರಸನ್ನಳಾಗಿ ಯಥಾಪ್ರಕಾರ ಶಿರವಂ ಕೊಟ್ಟು -ನೀನೇತಕ್ಕೆ 5ರವಂ ಕೊಬೈ? ನಿನಗೆ ಬೇಕಾದ ವರವ ಕೇಳು, ಕೊಡುವೆ ಎನ್ನಲಾಗಿ : ರಾಯನು ಚಾರುದತ್ತನು ಕಟ್ಟಿಸಿರುವ ಕೆರೆಗೆ ನೀರು ಬರುವುದಕ್ಕೆ ವರಕೊಡು ಎನ್ನಲಾಗಿ; ಆದೇವಿ-ಎಲೈ ರಾಯನೇ ! ನೀನು ಕೆಯಮೇಲೆ ನಡೆದು ಹೋದರೆ, ಆಕೆಗೆ ನೀರು ತುಂಬಿ ಕೊಡಿ ಹರಿಯುವುದು ಎಂದು ದೇವಿಯು ಹೇಳಿ ಮಾಯವಾಗಲಾಗಿ ; ಆ ಬಳಿಕ ರಾಯನು ಕೆರೆಯೆಯಮೇಲೆ ನಡೆದು ಹೋಗಲಾಗಿ, ಅಕ್ಷಣವೇ ಆ ಕೆರೆ ನೀರು ತುಂಬಿ ಕೋಡಿ ಹರಿದುವನ್ನು ಚಾರುದತ್ತ ಕಂಡು ವಿಸ್ಮಿತ ನಾಗಿ, ರಾಯನಿಗೆ ವಂದನೆಯಂ ಮಾಡಿ, ಸಕಲವಸ್ತುಗಳಂ ಕೊಡುವ ರತ್ನ ವ ಕೊಟ್ಟು ಕೈಮುಗಿಯಲಾಗಿ , ರಾಯ ಆರತ್ನ ವಂ ವಿದೂಷಕನಿಗೆ ಕೊಟ್ಟು ಕಳುಹಿಸಿ, ಅಲ್ಲಿಂದ ಇಲ್ಲಿಗೆ ಬಂದು ಸುಖವಾಗಿ ಇದ್ದನು, ಕಣಾ! ಇ೦ತು ಕರ್ಣಾಟಕ ಭಾಷಾ ವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ಪದ್ಮಾವತಿಯೆಂಬ ಪುತ್ತಳಿ ಹೇಳಿದ ಎಂಟನೆಯ ಕಥೆ,